ಧಾರವಾಡ .21: ಧಾರವಾಡ ಜಿಲ್ಲೆಯ ಅಮ್ಮಿನಬಾವಿ, ಹೆಬ್ಬಳ್ಳಿ, ನವಲಗುಂದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಳೆಗೆ ಥ್ರೀಪ್ಸ್ ಮತ್ತು ತಿರುಪು ರೋಗದ (ಐಜಚಿಜಿ ಣತಿಣಟಿರ) ಹಾವಳಿ ಹೆಚ್ಚಾಗಿ ಕಂಡುಬಂದಿದ್ದು, ತೋಟಗಾರಿಕೆ ಇಲಾಖೆಯ ಉಪನಿದರ್ೇಶಕರಾದ ಡಾ.ರಾಮಚಂದ್ರ ಮಡಿವಾಳ ತೋಟಗಾರಿಕೆ ವಿಶ್ವ ವಿದ್ಯಾಲಯದ ವಿಜ್ಞಾನಿಯಾದ ಡಾ. ಲಕ್ಷ್ಮಣ ಪಡ್ನಾಡ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕರಾದ ಮಹೇಶ ಪಟ್ಟಣಶೆಟ್ಟಿರವರು ತಂಡದೊಂದಿಗೆ ರೈತರ ತೋಟಗಳಿಗೆ ಭೇಟಿ ನೀಡಿ ನಿರ್ವಹಣೆ ಕುರಿತು ಸಲಹೆ ನೀಡಿದರು.
ಅತಿಯಾದ ಮಳೆಯಿಂದ ಮತ್ತು ಮಣ್ಣಿನಲ್ಲಿರುವ ತೇವಾಂಶದ ಪರಿಣಾಮದಿಂದ ಈರುಳ್ಳಿ ಬೆಳೆಯಲ್ಲಿ ಪೋಟ್ಯಾಷಿಯಂ ಕೊರತೆಯಾಗಿ ತಿರುಪು ರೋಗ ಕಂಡುಬರುತ್ತದೆ.
ಈರುಳ್ಳಿ ಬೆಳೆಗಾರರು ಕೂಡಲೇ ನೀರಿನಲ್ಲಿ ಕರಗುವ ಪೋಟ್ಯಾಷ ಗೊಬ್ಬರವನ್ನು 5 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೇರಸಿ ಸಿಂಪರಿಸಬೇಕು.
3 ರಿಂದ 4 ದಿನಗಳ ನಂತರ, ಹೆಕ್ಸಾಕೋನೊಜಾಲ್ 1ಮಿ.ಲೀ/ಲೀ ಮತ್ತು ಥ್ರೀಪ್ಸ್ ಬಾಧೆಯ ಹತೋಟಿಗಾಗಿ ಥಯೋಮಿಥಾಕ್ಸಾಮ್ / ಂಛಿಣಚಿಡಿಚಿ 0.2 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೇರಸಿ ಸಿಂಪರಿಸಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಾಟರ್ಿಕ್ಲಿನಿಕ್ ಕೇಂದ್ರ ದೂ.ಸಂ: 0836-2447801 ನ್ನು ಸಂಪಕರ್ಿಸಬೇಕೆಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿದರ್ೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.