ಲೋಕದರ್ಶನ ವರದಿ
ಯಲುಬುಗರ್ಾ: ಕನರ್ಾಟಕದಲ್ಲಿ ಬ್ರಿಟೀಷರನ್ನು ಎದುರು ಹಾಕಿಕೊಂಡು, ಆಂಗ್ಲರಿಗೆ ಕನರ್ಾಟಕ ಬಿಟ್ಟು ತೊಲಗಿ ಎಂದು ಪ್ರಪ್ರಥಮವಾಗಿ ಸಿಡಿದೆದ್ದ ರಾಜ, ವೀರ ಯೋಧ ಟಿಪ್ಪು ಸುಲ್ತಾನ್, ಎಂದು ಯಲಬುಗರ್ಾ ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಗ್ರಾಂ.ಪಂ. ಅಧ್ಯಕ್ಷರಾದ ಬಸವರಾಜ ಗಟ್ಟೆಪ್ಪನವರ್ ರವರು ಮಾತನಾಡಿದರು.
ಚಾಣಾಕ್ಷ್ಯತನ, ಧೈರ್ಯಶಾಲಿಯಾಗಿದ್ದ ಹೈದರಲಿಯು ಬ್ರಿಟೀಷರನ್ನು ಕನರ್ಾಟಕದಿಂದ ಹೊರದೂಡುವ ಛಲತೊಟ್ಟಿದ್ದನು. ಅದರ ಒಂದು ಪರಿಣಾಮವಾಗಿ ಇತಿಹಾಸ ಸೃಷ್ಠಿಸುವ ನಾಲ್ಕು ಆಂಗ್ಲೋ ಮೈಸೂರ್ ಯುದ್ದಗಳು ನಡೆದಿರುವುದೇ ಸಾಕ್ಷಿ. ತಂದೆಯ ಅನಾರೋಗ್ಯದಿಂದ ಯುದ್ದದ ಸಮಯದಲ್ಲೇ ಸಾವನ್ನಪ್ಪುವ ಕಾರಣ ಟಿಪ್ಪು ತನ್ನ ಚಿಕ್ಕ ವಯಸ್ಸಿನಲ್ಲಿಯೇ ರಣರಂಗಕ್ಕಿಳಿದು ತಂದೆಯ ಛಲದಂತೆ ಆಂಗ್ಲರನ್ನು ಕನರ್ಾಟಕದಿಂದ ಓಡಿಸಲು ಯುದ್ದ ಮುಂದು ವರೆಸುತ್ತಾನೆ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ನಾಡಿಗಾಗಿ ತನ್ನ ಮಕ್ಕಳನ್ನೇ ಬ್ರಿಟೀಷರಿಗೆ ಒತ್ತೆ ಇಡುತ್ತಾನೆ. ಇಂತಹ ಒಬ್ಬ ದೇಶಾಭಿಮಾನಿಯನ್ನು ನೆನೆಯುವುದರಲ್ಲಿ ತಪ್ಪಿಲ್ಲ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಪಿಡಿಓ ಅಬ್ದುಲ್ ಗಫರ್ ಬಳಿಗೇರ ರವರು, ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಅನೇಕ ಬಗೆಯ ಸುಧಾರಣೆಗಳನ್ನು ತಂದವನು, ಭೂ ಮಾಪನ, ನಾಣ್ಯ ಪದ್ದತಿಯಲ್ಲಿ ಹೊಸ ಬದಲಾವಣೆ, ಸೈನ್ಯಾಡಳಿತದಲ್ಲಿಯೂ ಕೂಡಾ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಎಂದರು. ಗ್ರಾಮದ ಯುವಕ ಜಾಫರ್ ಶರೀಪ್ ಮಾತನಾಡಿದರು.
'ಹಸಿವಾದವರೂ ಊಟ ಮಾಡುತ್ತಾರೆ, ಹಸಿವಿಲ್ಲದವರಲ್ಲ, ಹಾಗೆಯೇ ಟಿಪ್ಪುವಿನ ಮೇಲೆ ಅಭಿಮಾನವಿದ್ದವರು, ಇತಿಹಾಸವನ್ನು ಗೌರವಿಸುವವರು ಜಯಂತಿಯನ್ನ ಆಚರಿಸುತ್ತಾರೆ. ಟಿಪ್ಪು ದೇಶದ್ರೋಹಿ ಅಲ್ಲ, ಇತಿಹಾಸವನ್ನು ತಿರುಚುತ್ತಿರುವ, ಹಿಂದು ಮುಸ್ಲಿಮರ ನಡುವೆ ಒಡಕನ್ನು ಸೃಷ್ಠಿಸುತ್ತಿರುವ, ಕೋಮುಗಳ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿರುವವರು ದೇಶದ್ರೋಹಿಗಳು, ರಾಜಕೀಯವಾಗಿ ಇತಿಹಾಸವನ್ನು ಬದಲಾಯಿಸಲು ಹೊರಟಿರುವವರು ದೇಶದ್ರೋಹಿಗಳು ಎಂದು ಮಾತನಾಡಿದರು. ಇನ್ನೊಬ್ಬ ಗ್ರಾಮಸ್ಥರಾದ ಶಬ್ಬೀರ್ ಲೇಕಲಿಯವರು ಮಾತನಾಡಿ ಟಿಪ್ಪು ಆಂಗ್ಲರನ್ನು ಎದುರಿಸಿದ ಕನ್ನಡದ ಮೊದಲ ವೀರ ಯೋಧ, ಆಂಗ್ಲರ ಶಸ್ತ್ರಾಸ್ತ್ರಬಲಕ್ಕೆ ಪ್ರತಿಯಾಗಿ ಮೊಟ್ಟ ಮೊದಲ ಬಾರಿಗೆ ಯುದ್ದ ವಿಮಾನವನ್ನು ಬಳಸಿದ ಕೀತರ್ಿ ಟಿಪ್ಪುವಿಗೆ ಸಲ್ಲುತ್ತದೆ, ಟಿಪ್ಪು ದುರಾಡಳಿತ ಮಾಡಿಲ್ಲ, ಕನ್ನಡದ ಅನೇಕ ರಾಜರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದ- ಹೌದು ಅದು ರಾಜನೀತಿಯಲ್ಲವೇ.. ಒಬ್ಬ ರಾಜನಾದವನು ತನ್ನ ಒಂದು ಸಾಮ್ರಾಜ್ಯದ ರಕ್ಷಣೆಗಾಗಿ ಬೇರೆ ಸಾಮ್ರಾಜ್ಯಗಳ ಮೇಲೆ ಆಕ್ರಮಣ ಮಾಡುವುದು ತಪ್ಪಲ್ಲ ಇಂದು ಇದನ್ನೇ ತಪ್ಪು ಎನ್ನುವ ಕೆಲವರು ಇತಿಹಾಸಕ್ಕೆ ಅಗೌರವ ತೋರುತಿದ್ದಾರೆ. ಇಲ್ಲಿ ಯಾರು ಟಿಪ್ಪು ವಿರೋಧಿಗಳು ಇಲ್ಲ. ಕೊಮುಗಳ ಹೆಸರಿನ ಮೇಲೆ ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ, ಓಟ್ಬ್ಯಾಂಕ್ಗಾಗಿ ಜಯಂತಿಯನ್ನ ವಿರೋಧಿಸುತಿದ್ದಾರೆ ಎಂದರು. ಗ್ರಾಮಸ್ಥರಾದ ವಿರುಪಣ್ಣ ಮೂಲಿಮನಿ, ಹಾಸಿಂ ಸಾಬ, ಮಾಬುಸಾಬ, ಹನುಮಗೌಡ ಪೋಲಿಸ್ಪಾಟೀಲ್, ಅಶೋಕ ಸಜ್ಜನ, ಶಿವಣ್ಣ ಬೆವಿನಗಿಡದ, ಮಾಂತಪ್ಪ, ಪಾಪುಸಾಬ, ಡಾ;ಬಾಷಸಾಬ, ಉಮೇಶ ತಲ್ಲೂರ್, ಡಾ; ಮುತ್ತಾರಲಿ, ಹುಸೇನ್ ಆಲಂ, ಪಂಪಣ್ಣ ಹಂಪಣ್ಣವರ ಸುರೇಶ ಭಜಂತ್ರಿ, ಮಂಜುನಾಥ ಸಜ್ಜನ ಜಿಲಾನ್, ಸುರೇಶ ಚೌಡ್ಕಿ, ಇಫರ್ಾನ್, ಪಾಪು, ಕಾಸಿಂ ಅಲಿ, ಕಾಳಪ್ಪ, ಮಂಜುನಾಥ ಮಾಲಿಪಾಟೀಲ, ಯಲ್ಲಪ್ಪ ಸೇರಿದಂತೆ ಗ್ರಾಮಸ್ಥರು ಮತ್ತು ಗ್ರಾಂ.ಪಂ.ಸದಸ್ಯರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.