ಲೋಕದರ್ಶನ ವರದಿ
ಯಲಬುಗರ್ಾ: ಟಿಪ್ಪು ಸುಲ್ತಾನ ಅಪ್ರತಿಮ ಹೋರಾಟಗಾರ ಎಂದು ಪಪಂ ಮಾಜಿ ಅಧ್ಯಕ್ಷ ಅಕ್ತರಸಾಬ ಖಾಜಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡು ಕಂಡ ಧಿಮಂತ ನಾಯಕರಲ್ಲಿ ಟಿಪ್ಪು ಸುಲ್ತಾನ ಒಬ್ಬರಾಗಿದ್ದಾರೆ. ಅವರ ಆಡಳಿತಾವಧಿಯಲ್ಲಿ ಮಸೀದಿಗಳಿಗಿಂತ ಹೆಚ್ಚಿನ ಅನುಧಾನವನ್ನು ದೇವಾಲಯಗಳಿಗೆ ನೀಡಿದ್ದರು. ದೇಶಕ್ಕಾಗಿ ಹೋರಾಟ ನಡೆಸಿದ ಟಿಪ್ಪು ಸುಲ್ತಾನ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ದೇಶದ್ರೋಹಿ ಎಂದು ಬಿಂಬಿಸಿದರು ಅದೆಲ್ಲಾ ಸುಳ್ಳು ಎಂದರು.
ಬಿಜೆಪಿಯವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಯಂತಿ ವಿರೋಧ ಮಾಡುತ್ತಿದ್ದಾರೆ. ಎಲ್ಲರೂ ಇಂದಿನ ಆಧುನಿಕ ಸಮಾಜದಲ್ಲಿ ಎಲ್ಲರೂ ಒಂದಾಗಿ ಬದುಕು ಕಟ್ಟಿಕೊಳ್ಳಬೇಕು. ಟಿಪ್ಪು ಇತರ ಧರ್ಮದ ಬಗ್ಗೆ ಗೌರವ ಹೊಂದಿದ್ದನು ಎಂದರು.ಆದರೆ ಅಲ್ಪಸಂಖ್ಯಾತರ ಪರವಾಗಿ ಇದ್ದೆವೆ ಎನ್ನುವ ಕಾಂಗ್ರೆಸ್ ನಾಯಕರು ಯಾರು ಸಹಿತ ಇಂದು ನಮ್ಮ ಕಾರ್ಯಕ್ರಮಕ್ಕೆ ಬಾರದೆ ಇರುವದು ದುರಂತವಾಗಿದೆ ಸರಕಾರ ಇಷ್ಟೊಂದು ಕಟ್ಟುಪಾಡು ವಿದಿಸಿರುವದು ತಪ್ಪು ನಾವೇನು ಭಯೋತ್ಪಾದಕರಲ್ಲಾ ನಾವು ಇತರೆ ಸಮುದಾಯದಿಂದ ಉತ್ತಮ ಬಾಂದವ್ಯ ಹೊಂದಿದ್ದೆವೆ ಆದ ಕಾರಣ ನಮಗೂ ಇತರೆ ಜಯಂತಿಗೆ ನೀಡುವ ಮಾನ್ಯತೆಯನ್ನು ನೀಡಬೇಕು ಎಂದರು.
ತಾಪಂ ಅಧ್ಯಕ್ಷೆ ಲಕ್ಷ್ಮಿ ಗೌಡ್ರ ಮಾತನಾಡಿ ಟಿಪ್ಪು ಒಬ್ಬ ಅಪ್ರತಿಮ ಹೋರಾಟಗಾರನಾಗಿದ್ದ ಎನ್ನುವದು ಗೊತ್ತಿರುವ ವಿಷಯ ಹಾಗೂ ಅವರ ಸಾಹಸ ಹಾಗೂ ದೈರ್ಯ ಇತರರಿಗೆ ಮಾದರಿಯಾಗಿವೆ ಅವರು ಕೇಲವು ತಪ್ಪು ಮಾಡಿರಬಹುದು ಆದರೆ ಅದನ್ನ ಬಿಟ್ಟು ಅವರು ಬ್ರೀಟಿಷರೊಂದಿಗೆ ಹೋರಾಡಿದ ಹಾಗೂ ದೇಶ ದ್ರೋಹಿಗಳಿಗೆ ನಡುಕ ಹುಟ್ಟುವಂತೆ ಮಾಡಿದ್ದರು ಎಂದರು.
ನೀಲಮ್ಮ ಚಳಗೇರಿ ಟಿಪ್ಪು ಕುರಿತು ಮಾತನಾಡಿದರು, ಹಾಗೂ ತಹಶೀಲ್ದಾರ ರಮೇಶ ಅಳವಂಡಿಕರ ಮಾತನಾಡಿದರು, ಅಧಿಕಾರಿಗಳಾದ ಉಮಾಪತಿ ಶೆಟ್ಟರ್, ಯು ಮಂಡಸೊಪ್ಪಿ, ಬಸವರಾಜ ವಟಗಲ್, ಶರಣಮ್ಮ, ಆರೋನ್ ರಷಿದ್, ಎಸ್ ವ್ಹಿ ಭಜಂತ್ರಿ, ನಾಗೇಶ, ಸಂಕನಗೌಡ್ರ, ಲಿಂಗನಗೌಡ, ಪಪಂ ಸದಸ್ಯ ರಿಯಾಜ್ ಅಹ್ಮದ್ ಖಾಜಿ, ಸಮಾಜದ ಅಧ್ಯಕ್ಷರಾದ ಮೈಬೂಸಾಬ ಮಕಾಂದರ, ಮುಖಂಡರಾದ ಮೌಲಾಹುಸೇನ ಬುಲ್ಡಿಯಾರ, ಅಂದಾನಗೌಡ ಉಳ್ಳಾಗಡ್ಡಿ, ಎಚ್ ಎಚ್ ಹಿರೇಮನಿ, ಮೌಲಾಸಾಬ ಚೆರ್ಮನ್ ಮೂಧೋಳ, ಅಕ್ತರಸಾಬ ವಣಗೇರಿ, ಅಲ್ಲಾಸಾಬ ವಾಲಿಕಾರ, ಗೌಸುಸಾಬ ಕನಕಗಿರಿ, ಅಲ್ಲಾಸಾಬ ಬಳೂಟಗಿ, ಕೆ ಆಯ್ ಮುಲ್ಲಾ, ರೈಮನಸಾಬ ರೇವಡಿಹಾಳ, ಮೊಹಮ್ಮದಸಾಬ ಕೊಪ್ಪಳ, ಇಮಾಮಹುಸೇನ ಸಂಕನೂರು, ದಾದು ಎಲಿಗಾರ, ಶ್ಯಾಮೀದಸಾಬ ತಾಳಕೇರಿ, ಸೇರಿದಂತೆ ಅನೇಕರು ಹಾಜರಿದ್ದು ಟಿಪ್ಪು ವೃತ್ತದಲ್ಲಿರುವ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.