13 ವರ್ಷಗಳ ಬಳಿಕ ಜಪಾನ್ನಲ್ಲಿ ಪಿಜಿಎ ಟೂರ್ ಆಡಲಿರುವ ಟೈಗರ್ವುಡ್


 ವಾಷಿಂಗ್ಟನ್, ಏ 24 (ಕ್ಸಿನುವಾ) ಜಪಾನ್ನಲ್ಲಿ ಪ್ರಸಕ್ತ ವರ್ಷದ ಕೊನೆಯಲ್ಲಿ ನಡೆಯುವ ಪಿಜಿಎ ಟೂರ್ನಲ್ಲಿ ಭಾಗವಹಿಸುವುದಾಗಿ ವಿಶ್ವ ಶ್ರೇಷ್ಠ ಗಾಲ್ಫ್ ತಾರೆ ಟೈಗರ್ವುಡ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಕ್ಟೋಬರ್ನಲ್ಲಿ ನಡೆಯುವ ಝೋಝೋ ಚಾಂಪಿಯನ್ಶಿಪ್ ಉದ್ಘಾಟನಾ ಟೂರ್ನಿ  ಆಡಲು ಜಪಾನ್ಗೆ ತೆರಳಲು ಉತ್ಸುಕನಾಗಿದ್ದೇನೆ" ಎಂದು 43ರ ಪ್ರಾಯದ 2019ರ ಮಾಸ್ಟರ್ ಚಾಂಪಿಯನ್ ಟ್ವೀಟ್ ಮಾಡಿದ್ದಾರೆ.  13 ವರ್ಷದ ಬಳಿಕ ಜಪಾನ್ನಲ್ಲಿ ಟೈಗರ್ ವುಡ್ ಭಾಗವಹಿಸುತ್ತಿರುವುದು ಇದೇ ಮೊದಲು. 2006ರಲ್ಲಿ ಡನ್ಲಪ್ ಫೋನಿಕ್ಸ್ನಲ್ ಟೂನರ್ಿಯ ಪ್ಲೇಆಫ್ನಲ್ಲಿ ಪಡ್ರೈಗ್ ಹ್ಯಾರಿಂಗ್ಟನ್ ವಿರುದ್ಧ ಸೋಲು ಅನುಭವಿಸಿದ್ದರು.  ಪಿಜಿಎ ಟೂರ್ನ ಒಂದು ಭಾಗವಾದ 'ಝೋಝೋ' ಟೂನರ್ಿಯು ಅಕ್ಟೋಬರ್ 24 ರಿಂದ 27 ರವರೆಗೆ ಟೋಕಿಯೋದ ಗಾಲ್ಫ್ ಚಿಬಾ ನರಸಿನ್ಹೊ ಕೌಂಟ್ರಿ ಕ್ಲಬ್ನಲ್ಲಿ ನಡೆಯಲಿದೆ.