ಶೇಡಬಾಳ : ಉಗಾರ ಖುರ್ದ ಪಟ್ಟಣದ ಚೆನ್ನಮ್ಮ ಸರ್ಕಲ್ನಲ್ಲಿ ಸೋಮವಾರ ದಿ. 12 ರಂದು ಜರುಗಿದ ಕಬ್ಬು ಬೆಳೆಗಾರರ ಸಭೆಯಲ್ಲಿ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರುವುದನ್ನು ಪ್ರತಿಭಟಿಸಿ ಉಗಾರ ಬುದ್ರುಕ, ಕುಸನಾಳ, ಮೋಳವಾಡ, ಶೇಡಬಾಳ ಮೊದಲಾದ ಗ್ರಾಮಗಳಲ್ಲಿ ಮಂಗಳವಾರ ದಿ. 13 ರಂದು ಸ್ವಯಂ ಘೋಷಿತ ಬಂದ್ ಆಚರಿಸಲಾಯಿತು.
ಸೋಮವಾರ ದಿ. 12 ರಂದು ಅಥಣಿಯಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ರೈತ ಮುಖಂಡರ ಹಾಗೂ ಸಕ್ಕರೆ ಕಾಖರ್ಾನೆಗಳ ಅಧಿಕಾರಿಗಳ ಸಭೆಯನ್ನು ಮುಗಿಸಿ ಸಂಜೆ 7 ಗಂಟೆಯ ಹೊತ್ತಿಗೆ ಉಗಾರ ಖುರ್ದದ ಚೆನ್ನಮ್ಮ ವೃತ್ತದಲ್ಲಿ ರೈತ ಮುಖಂಡ ಶೀತಲಗೌಡ ಪಾಟೀಲರು ಮಾತನಾಡುತ್ತಿದ್ದಾಗ ಯಾರೋ ಕಿಡಿಗೇಡಿಗಳು ಕಲ್ಲು ಎಸೆದ ಪರಿಣಾಮವಾಗಿ ರೈತ ಅಜೀತ ಅಕಿವಾಟೆ ಇತನ ತಲೆಗೆ ತೀವ್ರವಾಗಿ ಗಾಯವಾಗಿತ್ತು. ಇದನ್ನು ಪ್ರತಿಭಟಿಸಿ ಕಬ್ಬು ಬೆಳೆಗಾರರು ಮೇಲಿನ ಗ್ರಾಮಗಳಲ್ಲಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ರೈತರ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿದ್ದಾರೆ.
ಉಗಾರ ಬುದ್ರುಕ ಗ್ರಾಮದಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡ ಶೀತಲಗೌಡ ಪಾಟೀಲ ಮಾತನಾಡಿ ಕಳೆದ ವರ್ಷದ ಹಂಗಾಮಿನಲ್ಲಿ ನುರಿಸಿದ ಕಬ್ಬಿಗೆ 2900 ರೂ. ನೀಡುವುದಾಗಿ ಸಕ್ಕರೆ ಕಾಖರ್ಾನೆಗಳೇ ಮಾತು ನೀಡಿದ್ದವು. ಅದನ್ನು ಈಡೇರಿಸದೇ 2500 ರೂ. ಮಾತ್ರ ನೀಡಿ ರೈತರಿಗೆ ದ್ರೋಹ ಬಗೆದಿವೆ. ಅಲ್ಲದೇ ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ದರ ಘೋಷಿಸಿ ಸಕ್ಕರೆ ಕಾಖರ್ಾನೆಗಳನ್ನು ಪ್ರಾರಂಭಿಸಿ ಎಂದು ಶಾಂತಿಯುತವಾಗಿ ಜರುಗುತ್ತಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಹತ್ತಿಕ್ಕಲು ಸಕ್ಕರೆ ಕಾಖರ್ಾನೆಗಳ ಮಾಲೀಕರೇ ತಮ್ಮ ಕಾಮರ್ಿಕರಿಂದ ರೈತರ ಸಭೆಯ ಮೇಲೆ ಕಬ್ಬು ತೂರಾಟ ಮಾಡಿದ್ದಾರೆಂದು ಆರೋಪಿಸಿದರು. ಅಲ್ಲದೇ ರೈತರಲ್ಲಿಯೇ ಒಡಕು ಮೂಡಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಹೇಳಿದರು. ಅವರು ಕಳೆದ ಹಂಗಾಮಿನಲ್ಲಿ ಬರಬೇಕಾಗಿರುವ ಬಾಕಿ ಹಣ ಹಾಗೂ ಪ್ರಸಕ್ತ ಹಂಗಾಮಿನ ದರ ಘೋಷಿಸುವವರೆಗೂ ಸಕ್ಕರೆ ಕಾಖರ್ಾನೆಗಳನ್ನು ಪ್ರಾರಂಭ ಮಾಡಲು ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ನಿನ್ನೆಯ ಘಟನೆಯನ್ನು ಖಂಡಿಸಿ ಉಗಾರ ಬುದ್ರುಕ ಗ್ರಾಮದ ಮಹಾವೀರ ಸರ್ಕಲ್ದಲ್ಲಿ ಟಾಯರ್ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ರೈತರು ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಶೀತಲಗೌಡ ಪಾಟೀಲ, ಅಪ್ಪಾಸಾಬ ಚೌಗಲಾ, ಪ್ರಮೋದ ಮಗದುಮ, ಸಚೀನ ಕುಸನಾಳೆ, ಮನೋಜ ಕುಸನಾಳೆ, ಸುನೀಲ ಶಿಂಧೆ, ಸುಶಾಂತ ಮಗದುಮ, ಪ್ರಮೋದ ಹೊಸುರೆ ಸೇರಿದಂತೆ ನೂರಾರು ರೈತರು ಇದ್ದರು.
ಅಜ್ಞಾತರ ಕಲ್ಲೇಟಿನಿಂದ ರೈತ ಗಾಯ
ಕಾಗವಾಡ: ಉಗಾರ ಖುರ್ದ ಪಟ್ಟಣದಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಕಬ್ಬು ಬೆಳೆಗಾರ ರೈತನ ಮೇಲೆ ಯಾರೋ ಅಜ್ಞಾತರು ಕಲ್ಲು ಎಸೆದಿದ್ದು. ತೆಲೆಗೆ ಏಟುಬಿದ್ದು ಗಾಯಗೊಂಡ ಘಟಣೆ ಸಂಭವಿಸಿದೆ.
ಉಗಾರ ಬುದ್ರುಕ ಗ್ರಾಮದ ಕಬ್ಬು ಬೆಳೆಗಾರ ರೈತ ಅಜೀತ ಅಪ್ಪಣ್ಣಾ ಅಕಿವಾಟೆ[60] ಗಾಯಗೊಂಡ ವ್ಯಕ್ತಿಯಾಗಿದಾರೆ.
ಸೋಮವಾರ ದಿ. 12ರಂದು ಅಥಣಿಯ ತಹಸೀಲ್ದಾರ ಕಾಯರ್ಾಲಯದಲ್ಲಿ ಚಿಕ್ಕೋಡಿ ಎ.ಸಿ. ತಾಲೂಕಿನ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾಖರ್ಾನೆಗಳ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು. ಸಂಜೆ ಸಭೆ ಬಳಿಕ ಮರಳಿ ಉಗಾರಕ್ಕೆ ಬರುವಾಗ ರಾಣಿ ಚೆನ್ನಮ್ಮಾ ವೃತ್ತದಲ್ಲಿ ಕೆಲ ಜನ ಜಮಾಯಿಸಿದರು ಇದನ್ನು ಕೇಳುವಾಗ ಸಕ್ಕರೆ ಕಾಖರ್ಾನೆ ಎದುರಿಂದ ಓರ್ವ ಕಲ್ಲು ಬೀಸಿದನು. ಇದರಲ್ಲಿ ಉಗಾರ ಬುದ್ರುಕ ಗ್ರಾಮದ ಅಜೀತ ಅಪ್ಪಣ್ಣಾ ಅಕಿವಾಟೆ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಸಕ್ಕರೆ ಕಾಖರ್ಾನೆ ಆಸ್ಪತ್ರೆಯಲ್ಲಿ ಉಪಚರಿಸಿ, ಹೆಚ್ಚಿನ ಉಪಚಾರಕ್ಕಾಗಿ ಮೀರಜ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಕಬ್ಬು ಬೆಳೆಗಾರ ಹೋರಾಟಗಾರ ಶೀತಲ ಪಾಟೀಲ ತಿಳಿಸಿದರು.
ನನ್ನನ್ನು ಗುರಿ ಮಾಡಿದ್ದರು:
ಉಗಾರ ಕಬ್ಬು ಬೆಳೆಗಾರ ಹೋರಾಟಗಾರರಾದ ಶೀತಲ ಪಾಟೀಲ ಇವರು ಉಗಾರ ಸಕ್ಕರೆ ಕಾಖರ್ಾನೆಯವರ ಮೇಲೆ ಗಂಭೀರ ಆರೋಪ ಮಾಡಿದ್ದು, ನಾನು ಕಬ್ಬಿಗೆ ಸೂಕ್ತ ದರ ನೀಡಿರಿ ಎಂದು ಬೇಡುತ್ತಿದ್ದೇನೆ. ಇದು ಕಾಖರ್ಾನೆಯವರಿಗೆ ಕಹಿ ಅನುಭವವಾಗುತ್ತಿದೆ. ಕಾರಣ ನನ್ನನ್ನು ಗುರಿಯಿಟ್ಟು ಕಲ್ಲು ಎಸೆದಿದ್ದರು. ಆದರೆ, ನಮ್ಮ ಗ್ರಾಮದ ಹಿರಿಯ ರೈತನ ತಲೆಗೆ ಕಲ್ಲು ಪೆಟ್ಟು ಬಿದ್ದಿದೆ. ರೈತರ ಮೇಲೆ ಸಕ್ಕರೆ ಕಾಖರ್ಾನೆಯವರ ದಬ್ಬಾಳಿಕೆ ನಾನು ಸಮಸ್ತ ರೈತರ ಪರವಾಗಿ ಖಂಡಿಸುತ್ತೇನೆ ಎಂದು ಶೀತಲ ಪಾಟೀಲ ಹೇಳಿದರು. ಈ ವೇಳೆ ಉಗಾರ ಖುರ್ದ, ಉಗಾರ ಬುದ್ರುಕ, ಕುಸನಾಳ, ಮೋಳವಾಡ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.