ಧಾರವಾಡ ಕೇಂದ್ರ ಕಾರಾಗೃಹದಲ್ಲಿನ ಮಹಿಳಾ ಬಂಧಿಗಳಿಗೆ ಮೂರು ತಿಂಗಳ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರ
ಧಾರವಾಡ 28: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೇಂದ್ರ ಕಾರಾಗೃಹ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡ ಎಮ್ಮಿಕೇರಿಯ ಎಂಜಲ್ ಬ್ಯೂಟಿ ಸಲೂನ್ ಮತ್ತು ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಬಂಧಿಗಳಿಗೆ ಮೂರು ತಿಂಗಳ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರದ ಉದ್ಘಾಟಣಾ ಸಮಾರಂಭವನ್ನು ನಿನ್ನೆ (ಜ.27) ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಧಾರವಾಡ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜರೀನಾ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಬಂಧಿಗಳಿಗೆ ಬ್ಯೂಟಿ ಪಾರ್ಲರ್ ತರಬೇತಿ ಆಯೋಜಿಸಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಹಾಗೂ ಮಹಿಳಾ ಬಂಧಿಗಳು ಈ ತರಬೇತಿ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ, ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ. ಮಹದೇವ ನಾಯ್ಕ, ಹಾಗೂ ಉಪ ಅಧೀಕ್ಷರು ನಿರ್ಮಲಾ ಬಿ.ಆರ್. ಸಾಧನಾ ಸಂಸ್ಥೆಯ ಸಂಸ್ಥಾಪಕಿ ಡಾ. ಇಸಬೆಲಾ ಝೇವಿಯರ್, ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ, ಉಪಾಧ್ಯಕ್ಷೆ ವೆಂಕಮ್ಮ ಸೋಮಾಪೂರ, ಸದಸ್ಯರಾದ ಸವಿತಾ ಸರ್‌ನಾಡಗೌಡರ, ಅಕ್ಷತಾ, ಮತ್ತು ಎಂಜಲ್ ಬ್ಯೂಟಿ ಸಲೂನ್ ಮತ್ತು ಅಕಾಡೆಮಿ ಮುಖ್ಯಸ್ಥೆ ಅನಿತಾ ಜಕ್ಕಲಿ, ಪ್ರಿಸನ್ ಮಿನಸ್ಟರಿ ಇಂಡಿಯಾ ಸದಸ್ಯೆ ಸಿಸ್ಟರ್ ಸಾಲಿ ಡಿಸೋಜ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಶೈಲಜಾ ನಾಯ್ಕ, ವಂದನಾರೆ್ಣ ವೆಂಕಮ್ಮ ಸೋಮಾಪೂರ ನೆರವೇರಿಸಿದರು.