ಇಂಜಿನಿಯರಿಂಗ್ ಕಾಲೇಜಿನ ಮೂವರು ಅಧ್ಯಾಪಕರಿಗೆ ಪಿಎಚ್‌ಡಿ ಪದವಿ ಪ್ರದಾನ
ಬಳ್ಳಾರಿ 17: ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ಎಂಜಿನಿಯರಿಂಗ್ ಕಾಲೇಜು ಮೂವರು ಅಧ್ಯಾಪಕರಿಗೆ ಪಿಎಚ್‌ಡಿ ಪದವಿ ಪ್ರದಾನ ನೀಡಲಾಗಿದೆ. ಡಾ. ಲಿಂಗನಗೌಡ ಆರ್ ಪರ್ಫಾರ್ಮೆನ್ಸ್ ಇಂಪ್ರೂವ್ಮೆಂಟ್ ಇನ್ ಕ್ಯಾಸ್ಕ್ಯಾಡೇಡ್ ಮುಲ್ಟಿಲೆವೆಲ್ ಇನ್ವರ್ಟರ್ ಫೆಡ್ ಓಪನ್ ಎಂಡ್ ವೈಂಡಿಂಗ್ ಇಂಡಕ್ಷನ್ ಮೋಟಾರ್ ಡ್ರೈವ್, ವಿಷಯಕ್ಕೆ ಪಿಎಚ್‌ಡಿ ಪದವಿ ಪ್ರದಾನ, ಡಾ.ರಾಖೀ ಪಾಟಿಲ್ “ಡಿಸೈನ್ ಅಂಡ್ ಆಪ್ಟಿಮೈಸೇಶನ್ ಸಿಯರ್‌ಪಿನ್ಸ್ಕಿ ಫ್ರ್ಯಾಕ್ಟಲ್ ಆಂಟೆನಾ ಯೂಸಿಂಗ್ ಕಂಪ್ಯೂಟೇಶನಲ್ ಟೆಕ್ನಿಕ್ಸ್ ಫಾರ್ ಮಲ್ಟಿಬ್ಯಾಂಡ್ ಅಪ್ಲಿಕೇಶನ್ಸ್ ವಿಷಯಕ್ಕೆ ಪಿಎಚ್‌ಡಿ ಪದವಿ ಪ್ರದಾನ, ಡಾ. ಪ್ರಶಾಂತ್ ಕೇಣಿ, ಟೆಕ್ನಿಕ್ಸ್ ಫಾರ್ ಡಿಟೆಕ್ಟಿಂಗ್ ದೇ ಸೈಬರ್ ಅಟ್ಯಾಕ್ಸ್ ಆನ್ ಆಟೋಮೊಟಿವ್ ಫಂಕ್ಷನಲ್ ಸೇಫ್ಟಿ ಸಿಸ್ಟಮ್ಸ್ ವಿಷಯಕ್ಕೆ ಪಿಎಚ್‌ಡಿ ಪದವಿ ಪ್ರದಾನ ನೀಡಲಾಗಿದೆ. ಅವರ ಸಾಧನೆಗೆ ಸ್ಪೂರ್ತಿ ನೀಡಿದ ವಿಭಾಗದ ಮುಖ್ಯಸ್ಥರು ಹಾಗೂ ವಿಭಾಗದ ಪ್ರಧ್ಯಾಪಕರು, ಸಿಬ್ಬಂದಿವರ್ಗದವರು, ಪ್ರಾಂಶುಪಾಲರು ಡಾ.ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರು ಡಾ.ಸವಿತಾ ಸೋನೊಳಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳು ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಬೈಲುವದ್ದಿಗೇರಿ ಎರಿ್ರಸ್ವಾಮಿ, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪ್ರಭು ಸ್ವಾಮಿ ಬಿ.ಎಂ, ಮತ್ತು ಬಾಡದ ಪ್ರಕಾಶ್, ಆರ್.ವೈ.ಎಮ್.ಇ.ಸಿ ಕಾಲೇಜಿಯಲ್ಲಿ ಇತರರು ಹೆಚ್ಚಿನ ಪಿ.ಹೆಚ್.ಡಿ ಪದವಿಗಳು ಸಾಧಿಸಲು ಶುಭಹಾರೈಸಿದರು ಹಾಗೂ ಬಳ್ಳಾರಿಯ ಆರ್‌ವೈಎಂಇಸಿಯ ವಿದ್ಯಾರ್ಥಿಗಳು, ಕುಟುಂಬಸ್ಥರು ಹಾಗೂ ಸ್ನೇಹಿತರು ಡಾಕ್ಟರೇಟ್ ಪದವಿಗೆ ಅಭಿನಂದನೆ ಸಲ್ಲಿಸಿದ್ದಾರೆ.