ಬಾಗಲಕೋಟೆ 11:
ಮಾನಸಿಕವಾಗಿ ಸಮಾಜದಿಂದ ನಿರ್ಲಕ್ಷತೆಗೆ ಒಳಗಾದವರು ಜೀವನ ನಡೆಸುವ ಹಕ್ಕು
ಕಾನೂನಿನಲ್ಲಿ ಇದ್ದು, ಅಂತವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಸಮಾಜದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಅನೀಲ
ಕಟ್ಟಿ ಹೇಳಿದರು.
ನಗರದ ಬಾಲಕಿಯರ ಸರಕಾರಿ
ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕ
ಹೊಂದಿದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದರೆ ಗುಣಪಡಿಸಲು ಸಾಧ್ಯವಾಗುತ್ತದೆ. ಮಾನಸಿಕ ವ್ಯಕ್ತಿಯನ್ನು ಅಸಡ್ಡೆಯಿಂದ ನೋಡದೆ ಅವರ ಜೊತೆ ಗೌರಯುತವಾಗಿ
ನಡೆದುಕೊಂಡಾಗ ಮಾತ್ರ ಅವರಿಗೆ ಮನೋಸ್ಥೈರ್ಯ ತುಂಬಿದಂತಾಗುತ್ತದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮಾನಸಿಕ ತಜ್ಷರಾದ ಡಾ.ವೀರಪ್ಪ ಪಾಟೀಲ
ಮಾತನಾಡಿ ಯಾವ ವ್ಯಕ್ತಿ ಮಾನಸಿಕವಾಗಿ
ಆರೋಗ್ಯವಾಗಿರುತ್ತಾನೆ ಅಂತವನಿಗೆ ಯಾವುದೇ ರೋಗಗಳು ಇರುವದಿಲ್ಲ. ಜಗತ್ತಿನಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ
ಪ್ರಯತ್ನ ಮಾಡುತ್ತಾನೆ. ಮಾನಸಿಕ ಕಾಯಿಲೆಗಳು ಖಿನ್ನತೆ, ಆತಂಕ, ಕುಡಿತದ ವ್ಯಸನ ಬುದ್ದಿ ಮಾಂದ್ಯತೆ ಇಂತಹ ಸಮಸ್ಯೆಗಳು ಮನುಷ್ಯನಲ್ಲಿ
ನೇರವಾಗಿ ಮಾನಸಿಕ ಸಮಸ್ಯೆಗಳಿಂದ ಬಳಲುವಂತೆ ಮಾಡುತ್ತವೆ ಎಂದರು. ಇವುಗಳಿಂದ ದೂರವಿರಬೇಕಾದರೆ, ಸರಿಯಾದ ಸಮಯದಲ್ಲಿ ನಿದ್ರೆ, ಪ್ರತಿದಿನ ವ್ಯಾಯಾಮ, ಮೊಬೈಲ್ ಉಪಯೋಗಿಸುವುದು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಅದ್ಯಕ್ಷತೆ ವಹಿಸಿದ್ದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲರಾದ ಆರ್.ಎಸ್.ದಡ್ಡಿ
ಮಾತನಾಡಿ ಎಲ್ಲರೂ
ತಾಳ್ಮೆಯಿಂದ ಸಕಾರಾತ್ಮಕ ಜೀವನ ನಡೆಸಿದಲ್ಲಿ ಮಾನಸಿಕ
ಖಾಯಿಲೆಯಿಂದ ದೂರ ಉಳಿಯಬಹುದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ
ಕಾರ್ಯದಶರ್ಿ ಸುಜಾತ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎ.ಎನ್.
ದೇಸಾಯಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ|| ಜಯಶ್ರೀ ಎಮ್ಮಿ,
ಕುಟುಂಬ ಕಲ್ಯಾಣಾಧಿಕಾರಿ ಡಾ|. ಡಿ.ಬಿ.ಪಟ್ಟನಶೆಟ್ಟಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ್ ಕಂಠಿ,
ಪವಾಡೆಪ್ಪ, ಎಮ್.ಬಿ ದೊಡ್ಡಪ್ಪನ್ನವರ.
ಹಾಗೂ ಸಿವಿಲ್ ನ್ಯಾಯಧೀಶರುಗಳಾದ ಸನ್ನಹನಮಗೌಡ, ಶಿಲ್ಪಾ, ಯೋಗೆಶ್ ಉಪಸ್ಥಿತರಿದ್ದರು. ಕೆ.ಆರ್.ಪವಾರ್
ವಂದಿಸಿದರು. ಎಸ್.ವಿ.ಮುರನಾಳ
ನಿರೂಪಿಸಿದರು.