ಇದು ಮೈಸೂರು ಬಜೆಟ್: ಬಸವರಾಜ ಕ್ಯಾವಟರ್ ವ್ಯಂಗ್ಯ
ಕೊಪ್ಪಳ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಮೈಸೂರಿಗೆ ಮಾತ್ರ ಸೀಮಿತವಾದಂತಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ 31 ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತ ಬಜೆಟ್ ಮಂಡನೆಯಾಗಿಲ್ಲ.ಹೆಚ್ಚು ಅನುದಾನ, ಯೋಜನೆಗಳನ್ನು ಮೈಸೂರಿನ ಪಾಲು ಮಾಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಉಳಿದ ಜಿಲ್ಲೆಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ, ಅಲ್ಪ ಸಂಖ್ಯಾತರ ತುಷ್ಠಿಕರಣ ಸದರಿ ಬಜೆಟ್ ಮೂಲಕ ಕಂಡು ಬರುತ್ತಿದೆ. ಹೆಸರಿಗೆ ಮಾತ್ರ ಬಜೆಟ್ ನಲ್ಲಿ ಸರ್ವ ಜನಾಂಗಕ್ಕೂ ನ್ಯಾಯ ಒದಗಿಸುವ ಬಜೆಟ್ ಇದಾಗಿದೆ ಎನ್ನುವ ವ್ಯಾಖ್ಯವಾಗಿದೆ.
ಆದರೆ, ವಾಸ್ತವದಲ್ಲಿಲ್ಲ ಎನ್ನುವುದು ಗಮರ್ನಾಹ ಸಂಗತಿ. ಕೇವಲ ಒಂದು ವರ್ಗ ಓಲೈಸುವುದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಎಂದುಕೊಂಡಿದ್ದಾರೆ.ಇದಲ್ಲದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. 371 - ಜೆ ಹೋರಾಟದ ಫಲವಾಗಿ ದೊರೆತ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಟ್ಟು ಅನುದಾನ ಕ್ರೂಢಿಕರಿಸಿ, ಬಿಡುಗಡೆ ಮಾಡುವುದು ಬಿಟ್ಟು ಹಂಚಿಕೆ ಮಾಡಲಾಗಿದೆ, ಇದು ಸರಿಯಲ್ಲ. ಇನ್ನೂ ಸಾಲ ಮಾಡುವ ಪ್ರಮಾಣ ಗಣನೀಯ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯದ ಪ್ರತಿಯೊಬ್ಬರ ಮೇಲೆ ಸಾಲದ ಹೊರೆಯನ್ನು ಸರಕಾರ ಹೇರುತ್ತಿದೆ. ಬಜೆಟ್ ಮೂಲಕ ಈ ವಿಚಾರ ತಿಳಿದು ಬಂದಿದೆ.
ಹೀಗಾಗಿ ಇದು ಸಾಲದ ಬಜೆಟ್ ಅಂದರೇ ತಪ್ಪಾಗಲಾರದು ಎಂದು ವಿಶ್ಲೇಷಿಸಿದ್ದಾರೆ.ಇನ್ನೂ ಕೊಪ್ಪಳ ಜಿಲ್ಲೆಗೂ ಹೇಳಿಕೊಳ್ಳುವಂತ ಯೋಜನೆ ಘೋಷಿಸಿಲ್ಲ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದಂತೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಬೇಕು. ಕೇವಲ ಘೋಷಣೆ ಮಾಡಿ ಕೈ ಬಿಡಬಾರದು. ಈ ಹಿಂದಿನ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳು ಹಾಗೆ ಉಳಿದಿವೆ, ವಿನಹ ಅನುಷ್ಠಾನಗೊಂಡಿಲ್ಲ. ಹೀಗಾಗಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯೂ ಈ ಸಾಲಿಗೆ ಸೇರಬಾರದು ಎಂದು ಆಗ್ರಹಿಸಿದ್ದಾರೆ.*ಡಾ. ಬಸವರಾಜ್ ಎಸ್ ಕ್ಯಾವಟರ್*ರಾಜ್ಯ ಕಾರ್ಯಕಾರಿಣಿ ಸದಸ್ಯರು, ಕೊಪ್ಪಳ