ಬೆಳಗಾವಿಯಲ್ಲಿ ಎರಡನೇ ಶನಿವಾರಕ್ಕೊಮ್ಮೆ ಈ ಚಿತ್ರಕಲಾ ಪ್ರದರ್ಶನ : ಶ್ರೀರಾಮಡು

ಬೆಳಗಾವಿ27 : ಗಡಿನಾಡಾದ ಬೆಳಗಾವಿಯಲ್ಲಿ ಶ್ರೀಮಾತಾ ಗ್ಲಾಸ್ ಅಟರ್್ ಗ್ಯಾಲರಿಯು ಚಿತ್ರಕಲಾ ಪ್ರದರ್ಶನ ಮಾಡುತ್ತಿರುವುದರಿಂದ ಕಲೆಗಾರರಿಗೆ ಪ್ರೊತ್ಸಾಹ ನೀಡುತ್ತಿದೆ ಎಂದು ಕಸ್ತೂರಿ ವಾಹಿನಿಯ ಜಿಲ್ಲಾವರದಿಗಾರ ಸಂತೋಷ ಶ್ರೀರಾಮಡು ಹೇಳಿದರು 

ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶ್ರೀಮತಿ ಗ್ಲಾಸ್ ಆಟರ್್ ವತಿಯಿಂದ ಹಮ್ಮಿಕೊಂಡ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಎಲೆ ಮರೆಯ ಕಾಯಂತೆ ಮರೆಯಾಗಿ ಉಳಿದ ಕಲಾವಿದರನ್ನು ಬೆಳಕಿಗೆ ತರುವ ಉತ್ತಮ ಪ್ರಯತ್ನವನ್ನು ಶ್ರೀಮಾತಾ ಗ್ಲಾಸ್ ಅಟರ್್ ಗ್ಯಾಲರಿಯು ಮಾಡುತ್ತಿದ್ದು ಇದರಿಂದ ಕಲಾಕಾರರಿಗೆ ಒಂದು ಉತ್ತಮ ವೇಧಿಕೆ ಸಿಕ್ಕಂತಾಗುತ್ತದೆ. ಪ್ರತಿ ಎರಡನೇ ಶನಿವಾರಕ್ಕೊಮ್ಮೆ ಈ ಚಿತ್ರಕಲಾ ಪ್ರದರ್ಶನ ನಡೆಯಲಿದ್ದು ಈ ಪ್ರದರ್ಶನವನ್ನು ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಬೃಹತ್ ಚಿತ್ರಕಲಾ ಪ್ರದರ್ಶನ ಕೇಂದ್ರವನ್ನು ಸ್ಥಾಪಿಸಲು ಪ್ರೇರಕವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಪಿ.ಐ.ಹುಲಕುಂದ, ದಿಲಿಪ ಕಾಳೆ,ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.