ರಿಯೋ ಡಿ ಜನೈರೊ, ಮೇ 8 ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬ್ರೆಜಿಲ್ ಫುಟ್ಬಾಲ್ ತಂಡದ ಮಾಜಿ ನಾಯಕ ಥಿಯಾಗೊ ಸಿಲ್ವಾ ಮುಂಬರುವ ಕೊಪಾ ಅಮೆರಿಕಾ ಟೂರ್ನಿ ಯಲ್ಲಿ ಆಡುವುದು ಅನುಮಾನವಾಗಿದೆ. ಕಳೆದ ಏ.14ರಿಂದ ಬಲ ಮೊಣಕಾಲು ನೋವಿನಿಂದ ಬಳಲುತ್ತಿರುವ ಪ್ಯಾರಿಸ್ ಸೈಂಟ್ ಜರ್ಮನ್ ರಕ್ಷಣಾ ಆಟಗಾರ ಅಥ್ರೋಸ್ಕೋಪಿಗೆ ಒಳಗಾಗಿದ್ದರು. ಇದರಿಂದ ಅವರು ಸಂಪೂರ್ಣ ಗುಣಮುಖರಾಗಲು ಇನ್ನೂ ಕನಿಷ್ಟ ನಾಲ್ಕು ವಾರಗಳ ಅಗತ್ಯವಿದೆ.
ಸಿಲ್ವಾ ಪತ್ನಿ ಇಸಾಬೆಲ್ಲಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ"ಇದೀಗ ಚೇತರಿಸಿಕೊಳುವ ಸಮಯ" ಎಂದು ಪೋಸ್ಟ್ ಮಾಡಿದ್ದಾರೆ. ಮುಖ್ಯ ತರಬೇತುದಾರ ಟೀಟೆ ಅವರು ಕೊಪಾ ಅಮೆರಿಕಾ ಟೂರ್ನಿ ಗೆ ಬ್ರೆಜಿಲ್ ತಂಡವನ್ನು ಮೇ.17 ರಂದು ಪ್ರಕಟಿಸಲಿದ್ದಾರೆ. 78 ಬಾರಿ ಬ್ರೆಜಿಲ್ ತಂಡವನ್ನು ಪ್ರತಿನಿಧಿಸಿರುವ ಸಿಲ್ವಾ, ಅಂತಿಮ 23 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಜೂನ್. 14 ರಿಂದ ಜುಲೈ 7ರವರೆಗೆ ಬ್ರೆಜಿಲ್ನ ಐದು ನಗರಗಳಲ್ಲಿ ಕೊಪಾ ಅಮೆರಿಕಾ ಟೂನರ್ಿ ನಡೆಯಲಿದೆ. ಬ್ರೆಜಿಲ್ 'ಎ' ಗುಂಪಿನಲ್ಲಿ ಬೊಲಿವಿಯಾ, ಪೆರು ಹಾಗೂ ವೆನೆಜುವೆಲಾ ತಂಡಗಳೊಂದಿಗೆ ಗುಪು ಹಂತದಲ್ಲಿ ಸೆಣಸಲಿದೆ.