ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹೆಚ್ಚು ಚರ್ಚೆಯಾಗಬೇಕು

There should be more discussion about the development of North Karnataka in the Belgaum winter sess

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹೆಚ್ಚು ಚರ್ಚೆಯಾಗಬೇಕು 

ಹುಬ್ಬಳ್ಳಿ  09 : ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚೆಯಾಗಲಿ, ವಿನಾಕಾರಣ ವಿರೋಧ ಪಕ್ಷಗಳು ಕಾಲಹರಣ ಮಾಡಬಾರದೆಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು.  

ಪತ್ರಿಕಾ ಪ್ರಕಟಣೆ ನೀಡಿರುವ ದಿನಾಂಕ: 09 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ, ಯುಕೆಪಿ ಯೋಜನೆಯನ್ನು ರಾಷಿೊಥಯ ಯೋಜನೆ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವದು, ಡಾ:ನಂಜುಂಡಪ್ಪ ವರದಿ, ಡಾ: ಪರಮಶಿವಯ್ಯ ವರದಿ ಮೇಲೆ ಬೆಣ್ಣೆಹಳ್ಳ ಹಾಗೂ ಇತರೆ ಎಲ್ಲ ಉಪ ಹಳ್ಳಗಳನ್ನು ಅಗಲೀಕರಣ ಮಾಡಿ ರೈತರ ಜಮೀನು ಹಾಗೂ ಗ್ರಾಮಗಳಿಗೆ ನೀರು ಬರದಂತೆ ತಡೆಯಲು ಪ್ರವಾಹ ನಿಯಂತ್ರಣ ಮಾಡುವದು, ರೈತರಿಗೆ ಬೆಳವಿಮೆ ಹಾಗೂ ಬೆಳೆ ಪರಿಹಾರ ದೊರೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವದು, ಬೆಂಗಳೂರು ತಹರ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟ, ವಿಜಯಪುರ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ ಪ್ರಾರಂಭಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕು, ಈ ಎಲ್ಲ ವಿಷಯಗಳ ಕುರಿತು ವಿರೋಧ ಪಕ್ಷಗಳು ಮಾತನಾಡಬೇಕೆ ಹೊರತು ವಿನಾಕಾರಣ ಕಾಲಹರಣ ಮಾಡಬಾರದೆಂದು ಎಲ್ಲ ಶಾಸಕರುಗಳಿಗೆ ಕೋನರಡ್ಡಿ ಮನವಿ ಮಾಡಿದ್ದಾರೆ.