ಚಂದ್ರೇಗೌಡರ ಸಾಹಿತ್ಯದಲ್ಲಿ ಹೊಸತನ ಇದೆ: ಸಾಹಿತಿ ದೇಸಾಯಿ
ತಾಳಿಕೋಟೆ 21: ಕಳೆದ 70 ವರ್ಷಗಳಿಂದ ಮಕ್ಕಳ ಸಾಹಿತ್ಯ ಎನ್ನುವುದು ಇನ್ನೊಬ್ಬರನ್ನು ಪ್ರಭಾವಿಸಿಬೆಳೆದುಬಂದಿದೆ. ಕಾಲಕಾಲಕ್ಕೂ ನಿರ್ಲಕ್ಷಿತವಾಗುತ್ತ ಬಂದಿದ್ದು ಪಾಶ್ಚಾತ್ ದೇಶದಲ್ಲಿ ಅದರಲ್ಲೂ ಇಂಗ್ಲೀಷನಲ್ಲಿ ಮಕ್ಕಳ ಸಾಹಿತ್ಯ ಎಂದರೆ ಅದೇ ಉದ್ಯೋಗವಾಗಿದೆ ನಾವು ಹವ್ಯಾಸವಾಗಿ ಸ್ವೀಕರಿಸಿದ್ದೇವೆ. ಹೀಗಾಗಿ ಇಂಗ್ಲೀಷ್ ನಲ್ಲಿ ಮಕ್ಕಳ ಸಾಹಿತ್ಯ ಉತ್ಕೃಷ್ಟವಾಗಿದೆ ಎಂದು ಮಸ್ಕಿಯ ಮಕ್ಕಳ ಸಾಹಿತಿ ಗುಂಡುರಾವ್ ದೇಸಾಯಿ ಹೇಳಿದರು. ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಇತ್ತೀಚೆಗೆ ಧಾರವಾಡ, ಸಿದ್ಧಾಪುರ, ಬಳ್ಳಾರಿ, ಮಸ್ಕಿ, ಇಟಗಿ ಮತ್ತು ತಾಳಿಕೋಟೆ ಮಕ್ಕಳ ಸಾಹಿತ್ಯಾಸಕ್ತ ಗೆಳೆಯರ ಬಳಗದಿಂದ ಪ್ರೊ.ಚಂದ್ರಗೌಡ ಕುಲಕರ್ಣಿ ಅವರ “ಮಕ್ಕಳ ಕಾವ್ಯದ ಒಂದು ಸುದೀರ್ಘ ಪಯಣ” ಕುರಿತು ಒಂದಿಷ್ಟು ಸಹೃದಯ ಸಮಯ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ವಾತಾವರಣದ ನಡುವೆ ಕುರಿತು ಮಾತನಾಡಿದರು.1985ರಿಂದ ಇಂದಿನವರೆಗೂ ಮಕ್ಕಳ ಸಾಹಿತ್ಯ ರಚನೆಯಲ್ಲಿರುವ ಚಂದ್ರಗೌಡರ ಸಾಹಿತ್ಯದಲ್ಲಿ ಹೊಸತನವಿದೆ ಎಂದರು. ಸಿದ್ಧಾಪುರ(ಉ.ಕ)ದ ತಮ್ಮಣ್ಣ ಬೀಗಾರ ‘ವಸ್ತು ವಿಸ್ತಾರ’ಕುರಿತು ಮಾತನಾಡಿ, ಚಂದ್ರಗೌಡರ ಕವನಗಳಲ್ಲಿ ಪ್ರಾಣಿ ಪಕ್ಷಿ ಜಗತ್ತು, ಮಕ್ಕಳ ಸೋಜಿಗ, ಆಟಗಳ ಬಗ್ಗೆ ತಮ್ಮ ಅಂತರಂಗದ ತುಡಿತವನ್ನು ಮಕ್ಕಳ ಸಾಹಿತ್ಯದ ಮೂಲಕ ಬಿಚ್ಚಿಟ್ಟಿದ್ದಾರೆ ಎಂದರು.ಬಳ್ಳಾರಿಯ ಶಿವಲಿಂಗಪ್ಪ ಹಂದಿಹಾಳ- ‘ಕಲಾತ್ಮಕ ಅಭಿವ್ಯಕ್ತಿಯ ಹಂಬಲ’ ಕುರಿತು ಮಾತನಾಡಿ, ಕವಿಯೊಬ್ಬ ಕಲಾವಿದನಾಗಿ ಮೂಡಿಬರಬೇಕು. ಕವನ ಅಭಿವ್ಯಕ್ತಿಯಲ್ಲಿ ಪರಂಪರೆ ಮತ್ತು ಭವಿತವ್ಯದ ನಡುವೆ ವರ್ತಮಾನದ ಸಂದಿಗ್ಧತೆ ಇದೆ. ಚಂದ್ರಗೌಡರು 400ಪುಟಗಳಷ್ಟು ಮಕ್ಕಳ ಸಾಹಿತ್ಯ ರಚಿಸಿದ್ದು ವಿಶೇಷವಾಗಿದೆ ಎಂದರು.ಪ್ರೊ.ಶೇಷಾಚಲ ಹವಾಲ್ದಾರ(ಚೇಚಿ) ಕವಿಯ ಕೃತಿಯ ಬಗ್ಗೆ ಅವಲೋಕನ ಮಾಡಿದ ಅಪರೂಪದ ಸಹೃದಯ ಸಮಯ ನೀಡಿದ್ದು ಇದೇ ಮೊದಲು. ಚಿಲಿಪಿಲಿ ಎಂದೆ ಖ್ಯಾತರಾಗಿರುವ ಚಂದ್ರಗೌಡರು ಮಕ್ಕಳ ಸಾಹಿತ್ಯದ ಜೊತೆಗೆ ತ್ರಿಪದಿ, ಗದ್ಯ ಸಾಹಿತ್ಯ, ವ್ಯಕ್ತಿ ಚಿತ್ರ ರಚನೆಯಲ್ಲೂ ತಮ್ಮ ಛಾಪು ಮೂಡಿಸಿದ್ದು ಅವರು ಈ ಭಾಗದ ಶ್ರೇಷ್ಠಕವಿಯಾಗಿದ್ದಾರೆ ಎಂದು ಕೊಂಡಾಡಿದರು. ಮಕ್ಕಳ ಸಾಹಿತಿಗಳಾದ ಆನಂದ ಪಾಟೀಲ-‘ಗೆಳೆಯ ಮತ್ತು ಮಕ್ಕಳ ಸಾಹಿತ್ಯ ಪಯಣ, ವಿನಾಯಕ ಕಮತದ-‘ಕಾವ್ಯ ಸ್ಪಂದನ ನಿರ್ವಹಣೆ’ಮಾಡಿದರು. ಪ್ರೊ.ಚಂದ್ರಗೌಡ ಕುಲಕರ್ಣಿ(ಚಿಲಿಪಿಲಿ) ಕೃತಜ್ಞತೆ ಅರ್ಿಸಿದರು. ಸಾಹಿತಿ ಶ್ರೀಕಾಂತ ಪತ್ತಾರ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಅಶೋಕ ಹಂಚಲಿ ನಿರ್ವಹಿಸಿದರು. ಶಿಕ್ಷಕ ಅಪ್ಪಾಸಾಹೇಬಗೌಡ ಮೂಲಿಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ವಿ.ಎಸ್.ಕಾರ್ಚಿ, ಆರ್.ಎಸ್.ಪಾಟೀಲ ಕೂಚಬಾಳ, ಎಚ್.ಎಸ್.ಪಾಟೀಲ, ಆರ್.ಎಲ್.ಕೊಪ್ಪದ, ಎಂ.ಎಸ್.ಸಜ್ಜನ, ಸಹಯೋಗ ನೀಡಿದ್ದ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕಾ ಶರಣ ಸಾಹಿತ್ಯ ಪರಿಷತ್ತು, ತಾಲ್ಲೂಕಾ ಮಕ್ಕಳ ಸಾಹಿತ್ಯ ಪರಿಷತ್ತು ಸಹೃದಯಿ ಶಿಕ್ಷಕರ ಬಳಗ, ಕದಳಿ ವೇದಿಕೆ ಬಳಗದ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧೆಡೆಯಿಂದ ಆಗಮಿಸಿದ್ದ ಮಕ್ಕಳ ಸಾಹಿತಿಗಳು ಭಾಗವಹಿಸಿದ್ದರು.