ಕಲ್ಯಾಣ ಹೆಬ್ಬಾಳ ಕಲ್ಯಾಣದ ಹೆಬ್ಬಾಗಿಲಾಗಿ ಪರಿವರ್ತನೆಯಾಗುವಲ್ಲಿ ಸಂಶಯವಿಲ್ಲ

ಲೋಕದರ್ಶನ ವರದಿ

ಯಮಕನಮರಡಿ 24:  ಎಲ್ಲ ಕಾಲ ಘಟ್ಟಗಳಲ್ಲಿ ಸರ್ವರಿಗೂ ಆದರ್ಶವಾಗಬಲ್ಲ ತತ್ವವೇ ಬಸವತತ್ವ ಆ ದಿಸೆಯಲ್ಲಿ ಕಲ್ಯಾಣ ಹೆಬ್ಬಾಳ ಕಲ್ಯಾಣದ ಹೆಬ್ಬಾಗಿಲಾಗಿ ಪರಿವರ್ತನೆಯಾಗುವಲ್ಲಿ ಸಂಶಯವಿಲ್ಲ ಸಾಮಾಜಿಕವಾಗಿ ಧಾಮರ್ಿಕವಾಗಿ ವೈದ್ಯ ಬಸವರಾಜ ಪಂಡಿತರು ಮಾಡುತ್ತಿರುವ ಕಾರ್ಯ ಸ್ತುತಿಗೆ ಅರ್ಹವಾದದು ಎಂದು ಗದಗದ  ಜಗದ್ಗುರು ಡಾ. ತೊಂಟದ ಸಿದ್ದರಾಮ ಮಹಾಸ್ವಾಮಿಗಳು  ಅಭಿಪ್ರಾಯ ಪಟ್ಟರು.

ದಿ.22 ರಲ್ಲಿ ಹೆಬ್ಬಾಳದಲ್ಲಿ ನಡೆದ ಬಸವ ಉತ್ಸವದ ಸಮಾರಂಭದಲ್ಲಿ ಬಸವಣ್ಣನವರ 109 ಅಡಿ ಪುತ್ಥಳಿಗೆ ಅಡಿಗಲ್ಲು ಹಾಗೂ ಲಿಂಗವಂತ ಸಾಧನ ಕೇಂದ್ರ ನಾಮಫಲಕ ಅನಾವರಣ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ 12 ನೇಯ ಶತಮಾನದ ಬಸವಣ್ಣನವರ ಹಾಗೂ ಶಿವ ಶರಣರ ಸಂದೇಶಗಳು 21 ನೇಯ ಶತಮಾನಕ್ಕೆ ಅಗತ್ಯವಾಗಿವೆ ವಿಜ್ಞಾನದ ಸುಳಿಯಲ್ಲಿ ಸಿಕ್ಕು ಮನುಷ್ಯ ಹಾಳಾಗುತ್ತಿದ್ದಾನೆ. 

ಲಿಂಗಾಯತರು ಸ್ವಾತಂತ್ರ್ಯ ಪೂರ್ವದಲ್ಲಿ ಅಗ್ರಸ್ಥಾನದಲ್ಲಿದ್ದರು ಆದರೆ ಲಿಂಗಾಯತರು ಇಂದು ಉಪಜಾತಿ ವಿಂಗಡಣೆಯಾಗಿ  ಅಳಿವಿನಂಚಿನಲ್ಲಿದ್ದಾರೆ, ಮುಂಬರುವ ಜನಗಣತಿಯ ವೇಳೆ ಸರಿಯಾಗಿ ಧರ್ಮವನ್ನು ನಮೂದಿಸಿ ಜಾಗೃತರಾಗಿ ಎಂದ ಅವರು ಕನ್ನಡ ಸಾಹಿತ್ಯಕ್ಕೆ ಗೌರವ ತಂದು ಕೊಟ್ಟ ಸಾಹಿತ್ಯವೇ ವಚನ ಸಾಹಿತ್ಯ ಬಸವಣ್ಣ ವಿಶ್ವಕ್ಕೆ ಮಾದರಿ ಎಂದರು. 

ವೇದಿಕೆಯಲ್ಲಿ ಬಸವ ಬೆಳವಿಯ ಬಸವ ದೇವರು, ಶಿರೂರ ನ  ಬಸವ ಸ್ವಾಮಿಗಳು, ವೇದಿಕೆಯಲ್ಲಿದ್ದರು. ಅರವಿಂದ ಜತ್ತಿ  "ವಚನ ಪಿತಾಮಹ ಫ,ಗು,ಹಳಕಟ್ಟಿ ಪ್ರಶಸ್ತಿ" ಸ್ವಿಕರಿಸಿ ಮಾತನಾಡಿ  ಮಾತನಾಡುವುದಕ್ಕಿಂತ ಪರಿವರ್ತನೆ ಆದರ್ಶಪ್ರಾಯವಾದದು  ವಚನದಿಂದ  ವ್ಯಕ್ತಿತ್ವದ ವಿಕಸನ ಸಾಧ್ಯ ಆ ನಿಟ್ಟಿನಲ್ಲಿ ಸುಮಾರು 17 ವರ್ಷದಲ್ಲಿ 18 ಲಕ್ಷ ಮಕ್ಕಳಿಗೆ ಪರಿವರ್ತನೆ ದಾರಿ ತಿಳಿಸಿದ್ದು ಅಲ್ಲಿಯವರೆಗೆ ಪರಿವರ್ತಣೆಯ ಪರ್ವ ಕಂಡಿರಲಿಲ್ಲ ಬಸವಣ್ಣವರ ವಚನದತ್ತ ನನ್ನ ಚಿತ್ತವನ್ನು ನನ್ನ 58 ನೇ ವರ್ಷದಲ್ಲಿ ಪ್ರಾರಂಬಿಸಿದ್ದು ಸುಮಾರು 23 ಭಾಷೆಗಳಲ್ಲಿ ವಚನಗಳನ್ನು ಸಮಪರ್ಿಸಿದ್ದೆನೆ ಈ ಕಾರ್ಯವನ್ನು ಇಂನ್ನೂ ನಾಲ್ಕು ಭಾಷೆಗಳಲ್ಲಿ ಅಂದರೆ ಪಶರ್ಿಯನ್, ಡೋಬ್ರಿ, ಅರೇಬಿಕ್, (ಕಾಶ್ಮಿರಿಯನ್) ಭಾಷೆಗಳಲ್ಲಿ ವಚನಗಳನ್ನು ಹೊರತರುವ ಕಾರ್ಯ ಮುಕ್ತಾಯದ ಹಂತದಲ್ಲಿದೆ   ಮುಂಬರುವ ಜುಲೈನಲ್ಲಿ ಅಮೇರಿಕದ ವಾಸಿಂಗ್ಟನ್ ನಲ್ಲಿ ನಡೆಯಲಿರುವ ಬಸವಣ್ಣನವರ ವಿಶ್ವ ಸಮ್ಮೆಳನದಲ್ಲಿ ಟ್ರಂಪ್ ಅವರು ವಿಶ್ವಕ್ಕೆ ತಿಳಿಸಿದಾಗ "ಲಿಂಗ ಮೆಚ್ಚಿ ಅಹುದ ಅಹುದೆ ದೆಂದಾಗ ನನ್ನ ಕಾಯಕ ಸಾರ್ಥಕತೆ ಕಾಣುತ್ತದೆ ಎಂದರು, ಯಾವುದೇ ಕಾರ್ಯವನ್ನು ಲಿಂಗನಿಷ್ಠೆಯಿಂದ ಮಾಡಿದಾಗ ಅದು ಶರಣರಿಗೆ ಪ್ರೀಯವಾಗುತ್ತದೆ ಎಂದರು. ಕನರ್ಾಟಕದ ಗಾಂಧಿ ಹಡರ್ೆಕರ ಮಂಜಪ್ಪ ಪ್ರಶಸ್ತಿ ವಿಜೇತರಾದ ದಾವಣಗೇರಿಯ ವಿ, ಸಿದ್ದರಾಮಣ್ಣ, ಮಾತನಾಡಿದರು.

ಹೊಸಪೆಟೆಯ ಡಾ.ಎಸ್,ಶಿವಾನಂದ ವಿಶ್ವಗುರು ಬಸವಣ್ಣ ಎಂಬ ವಿಷಯದ ಮೇಲೆ ತಮ್ಮ ಅನುಭಾವದ ನುಡಿಗಳನ್ನಾಡಿದರು, ವಚನ ಪಿತಾಮಹ ಫ,ಗು,ಹಳಕಟ್ಟಿ ಯವರ ಜೀವನ ದರ್ಶನ ಕುರಿತು ಡಾ.ಎಮ್.ಎಸ್. ಮಧಬಾವಿ ಮಾತನಾಡಿದರು, ಡಾ. ಬಸವರಾಜ ಪಂಡಿತ ವೇದಿಕೆಯಲ್ಲಿದ್ದರು. ವೇದಿಕೆಯಲ್ಲಿ ಮಹಾಂತೇಶ ಚೌಗಲಾ, ಸಿದ್ದು ಪಾಟೀಲ, ಅಶೋಕಪಾಟೀಲ, ಡಾ.ವಿಜಯ ಕುಡಚಿ, ಸಿದ್ದಲಿಂಗ ಬ್ಯಾಹಟ್ಟಿ, ಸೇರಿದಂತೆ ವಿವಿಧ ಶರಣರು ಅನುಭಾವಿಗಳು ಉಪಸ್ಥಿತರಿದ್ದರು. ಸಾಹಿತಿ ಶಿವಾನಂದ ಗುಂಡಾಳಿ, ಕಾರ್ಯಕ್ರಮಕ್ಕೆ ಸ್ವಾಗತಿಸಿ ಉಮಾ ಚೌಗಲಾ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶಿಕ್ಷಕರಾದ ಅಮ್ಮಿನಭಾವಿ, ವಂದಿಸಿದರು.