ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿಲ್ಲ- ಅಧ್ಯಕ್ಷ ನಿಂಗನಗೌಡ ಬೇವೂರ

ಲೋಕದರ್ಶನ ವರದಿ

ಕೊಪ್ಪಳ 16: ತಾಲೂಕಿನ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ, ಸಂಘದ ಮೇಲೆ ವಿನಾಕಾರಣ ಆರೋಪವನ್ನು ಸಂಘದ ಮಾಜಿ ಅಧ್ಯಕ್ಷ ಖಾಜಾಹುಸೇನ್ ದೊಡ್ಡಮನಿ ಮಾಡುತ್ತಿದ್ದಾರೆ ಎಂದು ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗನಗೌಡ ಬೇವೂರ ಸ್ಪಷ್ಟಪಡಿಸಿದರು. 

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಅವರು ನಮ್ಮ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿರುವುದಿಲ್ಲ ಹಾಗೂ ಹೊಸ ಗೋದಾಮ ನಿಮರ್ಾಣಕ್ಕೆ ಸಂಘದ ಸರ್ವ ಸದಸ್ಯರ ಅನುಮತಿ ಪಡೆದಿರುತ್ತದೆ ಅಲ್ಲದೆ, ಕಾಮಗಾರಿಯ ಟೆಂಡರ್ ಕರೆದಿರುವ ಕುರಿತು ಪತ್ರಿಕಾ ಪ್ರಕಟಣೆ ನೀಡಿರುತ್ತದೆ, ಸಂಘವು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಹೊಸ ಗೋದಾಮ ನಿಮರ್ಾಣದ ವಿಷಯ ಪ್ರಸ್ತಾಪಿಸಿ ಸದಸ್ಯರ ಒಪ್ಪಿಗೆ ಪಡೆದು, ಠರಾವಿನ ಪ್ರಕಾರ ಉಪನಿಬಂಧಕರು ಹಾಗೂ ಸಹಾಯಕ ನಿಬಂಧಕರು ಸಹಕಾರ ಸಂಘಗಳ ಕಾರ್ಯಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪಡೆದಿರುತ್ತೆವೆ ಎಂದು ತಿಳಿಸಿದರು. ಮತ್ತು ಪಡಿತರ ವಿತರಣೆಯಲ್ಲಿ ಕೇಳಿ ಬಂದಿರುವ ಆರೋಪದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವು ನಡೆದಿರುವುದಿಲ್ಲ. ನಮ್ಮ ಸಹಕಾರ ಸಂಘವು ಪಡಿತರ ವಿತರಣಾ ನಿಯಮಾವಳಿ ಪ್ರಕಾರ ಆಹಾರ ಸಾಮಾಗ್ರಿಗಳನ್ನು ಪ್ರತಿ ತಿಂಗಳು ಸರಿಯಾಗಿ ವಿತರಿಸಲಾಗುತ್ತಿದೆ. ಮಾಜಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಈ ಹಿಂದೆ ಮಾಡಿರುವ ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾಗಿದೆ, ಕಾರ್ಯದಶರ್ಿ ಹಾಗೂ ಅಧ್ಯಕ್ಷರ ತೆಜೋವಧೆ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಗಳನ್ನು ನೀಡಲಾಗಿದೆ. ಸಹಕಾರ ಸಂಘದ ಮೇಲೆ ಮಾಡಿರುವ ಆರೋಪವು ಮೇಲ್ನೋಟಕ್ಕೆ ಸುಳ್ಳು ಎಂದು ಅಧ್ಯಕ್ಷ ನಿಂಗನಗೌಡ ಬೇವೂರ ತಿಳಿಸಿದರು.

ಸಹಕಾರ ಸಂಘದ ಉಪಾಧ್ಯಕ್ಷ ತಾತಪ್ಪ ಕೋಳುರು, ನಿದರ್ೇಶಕರಾದ ವೀರಭದ್ರಪ್ಪ ಆಡೂರ, ಶಂಭುಲಿಂಗಯ್ಯ ಹಿರೇಮಠ, ಕಾರ್ಯದಶರ್ಿ ಸುಭಾಷ ಬೇವಿನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದರು.