ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಜಾತಿ-ಧರ್ಮ ಇಲ್ಲ: ಮಲ್ಲಿಕಾರ್ಜುನ ಭಜಂತ್ರಿ

There is no caste or religion in the field of education and music: Mallikarjuna Bhajantri

ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಜಾತಿ-ಧರ್ಮ ಇಲ್ಲ: ಮಲ್ಲಿಕಾರ್ಜುನ ಭಜಂತ್ರಿ 

ಭಾಗ್ಯನಗರ 10: ಗಾನಾಮೃತ ಸಂಗೀತ ಪ್ರತಿಷ್ಠಾನ (ರಿ) ಭಾಗ್ಯನಗರ, ಇವರ ವತಿಯಿಂದ " ನಾದ ತರಂಗಿಣಿ " ಸಾಂಸ್ಕೃತಿಕ ಕಾರ್ಯಕ್ರಮ ಭಾಗ್ಯನಗರದ ಬಯಲು ವೇದಿಕೆ, ಜನತಾ ಕಾಲೋನಿಯಲ್ಲಿ ನಡೆಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ ಭಜಂತ್ರಿ ಅವರು , ಎಲ್ಲಾರು ಜಾತಿ - ಧರ್ಮ ಎಂದು ಬಡಿದಾಡುತ್ತಾರೆ, ಆದರೆ ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾತ್ರ ಜಾತಿ ಧರ್ಮ ಎನ್ನದೆ ಸೇವೆ ಸಲ್ಲಿಸುತ್ತಾರೆ, ಸಂಗೀತಕ್ಕೆ ಅಂತಹ ಶಕ್ತಿ ಇದೆ. ಸಂಗೀತದಲ್ಲಿ ಜಾತಿ ಧರ್ಮ ಎಂದು ಇದ್ದಿದ್ದರೆ, ಒಬ್ಬ ಮಹಾನ್ ತಬಲಾ ವಾದಕ ಪಂಡಿತ್ ಝಾಕೀರ್ ಹುಸೇನ್, ಮಹಾನ್ ಗಾಯಕ ಯೇಸುದಾಸ್, ಕಣ್ಣಿಲ್ಲದೆ ಸಾವಿರಾರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ ಪುಟ್ಟರಾಜ ಗವಾಯಿಗಳು, ಇರುತ್ತಿರಲಿಲ್ಲ.  

ಮುಖ್ಯ ಅತಿಥಿಗಳಾದ ಮತ್ತು ಭಾಗ್ಯನಗರದ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಹೊನ್ನೂರು ಸಾಬ್ ಭೈರಾಪುರ ಅವರು ಮಾತನಾಡಿ, ಜೀವನ ಎಂದರೆ ಕೇವಲ ಬದುಕುವುದಲ್ಲ, ಉತ್ತಮ ನಾಗರಿಕರಾಗಿ ಬದುಕುವುದು, ನಮ್ಮ ಕರ್ತವ್ಯದ ಮೇಲೆ ಆತ್ಮಗೌರವವಿದ್ದರೆ ಮಾತ್ರ ಬದುಕಲು ಸಾಧ್ಯ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಮನಸ್ಸಿನ ಭಾರವನ್ನು ಕಳೆಯುತ್ತವೆ, ಭಾಗ್ಯನಗರದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಕೊರತೆ ಇಲ್ಲ ಎಂದರು. ಅಧ್ಯಕ್ಷತೆಯನ್ನು  ವಿಜಯಲಕ್ಷೀ ಮ್ಯಾಗಡೆ ವಹಿಸಿದ್ದರು, ಉದ್ಘಾಟನೆ ಮಲ್ಲಿಕಾರ್ಜುನ ಭಜಂತ್ರಿ, ಮುಖ್ಯ ಅತಿಥಿಗಳಾದ ಹೊನ್ನೂರು ಸಾಬ್ ಭೈರಾಪುರ, ಮಂಜುಳಾ ಮ್ಯಾಗಳಮನಿ, ಪರಶುರಾಮ ದಲಭಂಜನ, ಕೆಂಚ್ಚಪ್ಪ ಮ್ಯಾಗಡೆ, ಉಪಸ್ಥಿತರಿದ್ದರು.  

ನಂತರ ಮಂಗಳವಾದ್ಯ ಶಹನಾಯಿ ವಾದನ ಮಲ್ಲಿಕಾರ್ಜುನ ಭಜಂತ್ರಿ ಗದಗ , ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಅಧಿತಿ ಕುಲಕರ್ಣಿ ಕೊಪ್ಪಳ, ವಚನ ಗಾಯನ ಶಂಕ್ರಯ್ಯ ಗುರುಮಠ ಹುಬ್ಬಳ್ಳಿ, ಹಾರ್ಮೋನಿಯಂ ಸೋಲೋ ರಾಮಚಂದ್ರ​‍್ಪ ಉಪ್ಪಾರ, ಜಾನಪದ ಗೀತೆ ಭಾಷಾ ಹಿರೇಮನಿ ಕಿನ್ನಾಳ, ಸುಗಮ ಸಂಗೀತ ಸ್ಪಂದನ ಕೆ ಎಮ್ ಗಂಗಾವತಿ, ಭರತನಾಟ್ಯ ಅಪರ್ಣಾ ಹೆಗಡೆ ಹಾಗೂ ತಂಡ, ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೊಳಗಿತು. ವಾದ್ಯವೃಂದದ ಹಾರ್ಮೋನಿಯಂ ರಾಘವೇಂದ್ರ ಕೋಣಿ, ಕೀಬೋರ್ಡನಲ್ಲಿ ಕೆ ಪ್ರಕಾಶ್ ರಾಯದುರ್ಗ, ಬಾನ್ಸೂರಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ್, ತಾಳವಾದ್ಯ ಕೃಷ್ಣ ಸೊರಟೂರ, ಮೆರುಗು ನೀಡಿದರು.