ಲೋಕದರ್ಶನ ವರದಿ
ಹೂವಿನಹಡಗಲಿ : ಪ್ರಸ್ತುತ ದಿನಗಳಲ್ಲಿ ಧರ್ಮದಿಂದ ಜಾತಿ ಸಂಘರ್ಷ ನಡೆಯುತ್ತಿದ್ದು ಅವರ ವಿರುದ್ಧ ಎಚ್ಚರವಹಿಸಿ,ಮನುಷ್ಯತ್ವ ವಿರೋಧಿಗಳ ಮಾತು ಕೇಳದೇ ನಿಮ್ಮ ಆತ್ಮಸಾಕ್ಷಿ,ಮನಸಾಕ್ಷಿ ವಿರುದ್ಧ ನಡೆದುಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಪಶ್ಚಿಮ ಕಾಲ್ವಿಯಲ್ಲಿ ಗುರುವಾರ ಬೀರಲಿಂಗೇಶ್ವರ ದೇಗುಲ ಉದ್ಘಾಟನೆ, ಮೂತರ್ಿಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಹಾಗೂ ಕಾಗಿನೆಲೆ ಶ್ರೀಗಳ 60ನೇ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ಜಾತಿಗೆ ದಾರ್ಶನಿಕರು,ಶರಣರು ಸೀಮಿತವಾಗಿಲ್ಲ.ಮನುಷ್ಯನಲ್ಲಿ ನಂಬಿಕೆಗಳು ಬೇಕು ಹೊರತು ಮೂಢನಂಬಿಕೆ,ಅಪನಂಬಿಕೆ ಇರಬಾರದು,ದೇವರು ಒಬ್ಬನೇ ನಾಮ ಹಲವು ಎಂದ ಅವರು ನಮ್ಮ ನಮ್ಮ ವೃತ್ತಿಯ ಮೇಲೆ ಜಾತಿಯನ್ನು ಮಾಡಿಕೊಂಡಿದ್ದೇವೆ ಜತೆಗೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ವಿದ್ಯೆಯನ್ನು ನೀಡಿದಾಗ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದರು.
ಕನಕ ಗುರುಪೀಠದ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀವರ್ಾಚನ ನೀಡಿ ದಾರ್ಶನಿಕರ ಜಯಂತಿಗಳು ಸಾಮರಾಸ್ಯದಿಂದ ಆಚರಿಸಬೇಕು ಹೊರತು ಮೋಜು,ಮಸ್ತಿಯಾಗಬಾರದು.ಕನಕದಾಸರ ಕೀರ್ತನೆಗಳ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅರಣ್ಯ ಸಚಿವ ಆರ್.ಶಂಕರ ,ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿದರು.ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ರೇವಣ್ಣಸಿದ್ದೇಶ್ವರ ಸ್ವಾಮೀಜಿ, ಹಂಪಸಾಗರದ ಶಿವಲಿಂಗರುದ್ರಮನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಸಾಹೇಬ್,ಕೃಷ್ಣಮೂತರ್ಿ,ಮೈಲಾರ ಕಾಣರ್ಿಕ ಗೊರವಪ್ಪ , ಮಾಜಿ ಶಾಸಕರಾದ ಶಿರಾಜ್ ಶೇಖ್, ನಂದಿಹಳ್ಳಿ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಅಧ್ಯಕ್ಷರಾದ ಎಂ.ಪರಮೇಶ್ವರಪ್ಪ, ಐಗೋಳ ಚಿದಾನಂದ, ವಾರದಗೌಸಮೊಹಿದ್ದೀನ್, ಬಸವನಗೌಡ ಪಾಟೀಲ, ಅಟವಾಳಗಿ ಕೊಟ್ರೇಶ,ಅರವಳ್ಳಿ ವೀರಣ್ಣ,ಕನರ್ಾಟಕ ಪ್ರದೇಶ ಕುರುಬರ ಸಂಘದ ನಿದರ್ೇಶಕ ಕಾಲ್ವಿ ಬಿ.ಹನುಮಂತಪ್ಪ, ಆರ್.ಎಸ್.ಎಸ್.ಎನ್.ಅಧ್ಯಕ್ಷ ಪಕ್ಕೀರಪ್ಪ ,ಜಿ.ಪಂ.ಸದಸ್ಯರಾದ ವೀಣಾ, ಎಸ್.ಎಂ.ಲಲಿತಮ್ಮ, ಕುಂಚೂರು ಶೀಲ, ಗುರುಸಿದ್ದಪ್ಪ, ಧರ್ಮ ದಶರ್ಿ ಕೆ.ಎಂ.ಹಾಲಪ್ಪ,ತಾಲೂಕು ಕುರುಬರ ಸಂಘದ ಅಧ್ಯಕ್ಷ ಬೀರಪ್ಪ,ಪುರಸಭೆ ಅಧ್ಯಕ್ಷೆ ಎಂ.ಮದರ್ಾನ್ ಬೀ,ತಹಶೀಲ್ದಾರ ಕೆ.ರಾಘವೇಂದ್ರರಾವ್ ಇದ್ದರು. ಇದೇ ಸಂದರ್ಭದಲ್ಲಿ 10ಜೊತೆ ಸಾಮೂಹಿಕ ವಿವಾಹಗಳು ಜರುಗಿದವು.