ಸಮಾಜ ಸೇವೆಯಲ್ಲಿ ಸಂತೋಷವಿದೆ : ವರುಣಗೌಡ್ರ

There is happiness in social service: Varuna Gowdra

ಸಮಾಜ ಸೇವೆಯಲ್ಲಿ ಸಂತೋಷವಿದೆ : ವರುಣಗೌಡ್ರ  

ಶಿಗ್ಗಾವಿ 24 : ಯಾವುದೇ ಪಲಾಫೇಕ್ಷೆ ಇಲ್ಲದೆ ಮಾಡುವ ನಿಸ್ವಾರ್ಥ ಸೇವೆಯೂ ನಿಜವಾದ ಸಮಾಜ ಸೇವಕರ ಗುಣವನ್ನು ಸೂಚಿಸುತ್ತದೆ ಎಂದು ವರುಣಗೌಡ ಪಾಟೀಲ ಹೇಳಿದರು. 39 ನೇ ಜನ್ಮ ದಿನದ ಅಂಗವಾಗಿ ದಂಪತಿ ಸಮೇತವಾಗಿ ಹುಬ್ಬಳ್ಳಿಯ ಮಹಾವೀರ ಕೃತಕ ಕೈ ಕಾಲು ಜೋಡಣ ಕೇಂದ್ರಕ್ಕೆ ಭೇಟಿ ನೀಡಿ ಇಬ್ಬರು ಬಡ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ ಮಾಡಿಸಿ ನಂತರ ಮಾತನಾಡಿದ ಅವರು ನಮ್ಮ ತಂದೆಯವರ ಕಾಲದಿಂದಲೂ ಸಮಾಜ ಸೇವೆ ಧಾರ್ಮಿಕ ಸೇವೆ ಮಾಡುತ್ತ ಬಂದಿದ್ದೇವೆ ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ನಮ್ಮ ತಂದೆಯವರು ನಮಗೆ ಪ್ರೇರಣೆ.   ಬಡವರ ಕೂಲಿಕಾರ್ಮಿಕರ ಕಷ್ಟಗಳಲ್ಲಿ ಭಾಗಿಯಾಗುವದು ಖುಷಿ ತರುತ್ತದೆ ನಮ್ಮ ಹತ್ತಿರ ಇರುವ ಅಲ್ಪ ಸ್ವಲ್ಪದರಲ್ಲಿಯೇ ಇನ್ನೊಬ್ಬರಿಗೂ ಹಂಚಿ ತಿನ್ನುವ ಗುಣ ಇಂದಿನ ದಿನಗಳಲ್ಲಿ ಬರಬೇಕಿದೆ. ಅಂತಹ ವಿಚಾರಗಳನ್ನು ನಮ್ಮ ಮನೆಯ ಮಕ್ಕಳಿಗೆ ಹಾಗೂ ಇಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ ನಮ್ಮ ಎಲ್ಲ ಕೆಲಸಗಳಿಗೆ ನಮ್ಮ ಕುಟುಂಬದ ಪ್ರೋತ್ಸಾಹ ಸಹಕಾರವಿದೆ ಎಂದರು.ಈ ಸಂದರ್ಭದಲ್ಲಿ ನಾಗರಾಜ್ ಕ್ಯಾಬಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.