ಲೋಕದರ್ಶನ ವರದಿ
ಧಾರವಾಡ11: ಮಾಹಿತಿ ಕೊರತೆ ಹಾಗೂ ಸಂಕೋಚ ಸ್ವಭವದಿಮದ ಮಾತ್ರ ಉತ್ತರ ಕನರ್ಾಟಕದ ವಿದ್ಯಾಥಿಗಳು ಉದ್ಯೊಗ ವಂಚಿತರಾಗುತ್ತಿದ್ದಾರೆ ಆದರೆ ಅವರ ಪ್ರತಿಭೆಗೇನೂ ಕೊರತೆ ಇಲ್ಲ. ಅವಕಾಶ ದೊರೆತರೆ ಅವರು ಸಹ ಎಲ್ಲರ ಸರಿ ಸಮಾನರಾಗಿ ಸ್ಪಧರ್ೆಯೊಡ್ಡಬಲ್ಲರು ಎಂದು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಇನ್ಪೋಹಾಲಿಕ್ ರಿಸರ್ಚ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದರು.
ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಪ್ರತಿ ವರ್ಷವೂ ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸುತ್ತ ಉತ್ತರ ಕನರ್ಾಟಕದ ಎಲ್ಲ ಕಾಲೇಜುಗಳ ವಿದ್ಯಾಥಿಗಳಿಗೆ ಇದರಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿದೆ. ಪ್ರತಿಭಾವಂತ ವಿದ್ಯಾಥರ್ಿಗಳ ಆಯ್ಕೆಗಾಗಿ ಕಂಪನಿಗಳು ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಬೇಕು ಎಂದು ಹೇಳಿದರು.
ಈ ಸಂದರ್ಶನದಲ್ಲಿ 235 ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಅಂತಿಮ ಹಂತದ ಸಂದರ್ಶನಕ್ಕೆ 23 ವಿದ್ಯಾಥಿಗಳು ಆಯ್ಕೆಯಾಗಿದ್ದಾರೆ.
ಇನ್ಪೋಹಾಲಿಕ್ ರಿಸರ್ಚನ ಪ್ರಶಾಂತ ಹೆಬ್ಬಾರ, ದೀಪಕ ಕುಮಾರ ಮೋದಿ, ಪೂಜಾ ಮುಧೋಳ್ಕರ್, ಪವನ ಮುಧೋಳ್ಕರ್, ಗೀತಾ. ಎನ್, ಸುನು ರಿಚೆಲ್, ಗಾಯತ್ರಿ. ಜಿ ಹಾಗೂ ಜೆ.ಎಸ್.ಎಸ್ ನ ಉದ್ಯೋಗಾಧಿಕಾರಿ ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು.