ಅವೈಜ್ಞಾನಿಕ ಒಳಚರಂಡಿ ಕಾಮಗಾರಿ

ಲೋಕದರ್ಶನ ವರದಿ

ಪ್ರವೀಣ ಘೋರ್ಪಡೆ

ತಾಳಿಕೋಟೆ: ಪಟ್ಟಣದಲ್ಲಿ ಕನರ್ಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ನಿಮರ್ಿಸಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಿಮರ್ಾಣವಾಗಿದ್ದರ ಫಲವಾಗಿ ಒಳಚರಂಡಿ ಚೇಂಬರಿನಿಂದ ಮಲಮೂತ್ರವೆಲ್ಲವೂ ನಡುರಸ್ತೆಯಲ್ಲಿ ಹರಿತೊಡಗಿದೆ.

ಪಟ್ಟಣದ ಬಸ್ ನಿಲ್ದಾಣದ ಮುಂದುಗಡೆಯ ಜನದಟ್ಟನೆ ಹಾಗೂ ವಾಹನ ಸಂಚಾರ ಹೆಚ್ಚಿಗೆ ಇರುವ ಜೋಡುಪಥ ಮುಖ್ಯರಸ್ತೆಯಲ್ಲಿಯೇ 5 ದಿನಗಳ ಹಿಂದೆಯೇ ಈ ಘಟನೆ ಜರುಗಿದ್ದು ದುವರ್ಾಸನೆ ತಡೆಯಲು ಯಾರಿಂದಲೂ ಸಾದ್ಯವಾಗದ ಪರಿಣಾಮ ದುವರ್ಾಸನೆಯಿಂದ ರಸ್ತೆ ಪಕ್ಕದ ಅಂಗಡಿಕಾರರು ಹಾಗೂ ಜನರು ಮೂಗುಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಸಂಬಂದಿಸಿದ ಅಧಿಕಾರಿಗಳು ಮಾತ್ರ ಇಲ್ಲಿಯವರೆಗೆ ಕ್ಯಾರೇ ಎಂದಿಲ್ಲಾ.

ಪಟ್ಟಣದ ತಿಲಕ ರಸ್ತೆಯಲ್ಲಿಯ ಬಡಾವಣೆಯ ಜನರು ಹಾಗೂ ಕನ್ನಡ ಶಾಲಾ ಮೈಧಾನದ ಎದುರು ನಿಮರ್ಿಸಲಾದ ಶೌಚಾಲಯದ ಸಂಪರ್ಕವನ್ನು ಈ ಒಳಚರಂಡಿ ಚೆಂಬರ್ಗೆ ಅಳವಡಿಸಿದ ಪರಿಣಾಮ ಮುಖ್ಯರಸ್ತೆಯಲ್ಲಿರುವ ಎಲ್ಲ ಚೇಂಬರ್ಗಳಲ್ಲಿ ಮಲ ಮೂತ್ರ ತುಂಬಿಕೊಂಡಿದೆ ಆದರೆ ಬಸ್ ನಿಲ್ದಾಣದ ಮುಂದಿನ ಮುಖ್ಯರಸ್ತೆಯಲ್ಲಿನ ಚೇಂಬರ್ ಒಂದರಿಂದ ಮಲಮೂತ್ರವೆಲ್ಲವೂ ಹೊರಗಡೆ ಸಿಡಿದು ಉಕ್ಕಿ ಬರುತ್ತಾ ಮುಖ್ಯ ನಡುರಸ್ತೆಯಲ್ಲಿ ಹರಿಯತೊಡಗಿದೆ. ಚೇಂಬರ್ನಿಂದ ಹೊರಬಿದ್ದ ಮಲಮೂತ್ರವೆಲ್ಲವೂ ನಡುರಸ್ತೆಯಲ್ಲಿ ಹರಿಯುವದರ ಜೊತೆಗೆ ವಾಹನಗಳ ಸಂಚಾರದ ಸಮಯದಲ್ಲಿ ಕೆಲವರಿಗೆ ಮಲಮೂತ್ರ ಸಿಡಿದು ದುವರ್ಾಸನೆ ತಾಳದೇ ವಾಂತಿಗೆ ಕಾರಣವಾದ ಪ್ರಸಂಗಗಳು ಜರುಗುತ್ತಿವೆ. 

ಇನ್ನೂ ಈ ರಸ್ತೆಬದಿಯಲ್ಲಿರುವ ಹೋಟೇಲ್ಗಳಿಗೆ ಈ ದುವರ್ಾಸನೆಗೆ ಬೇಸತ್ತು ಹೋಟೇಲ್ಗಳಿಗೆ ತೆರಳುವದನ್ನು ನಿಲ್ಲಿಸಿದ್ದರಿಂದ ಹೋಟೇಲ್ಮಾಲಿಕರು ಪುರಸಭೆಯವರಿಗೆ ಸರಿಪಡಿಸಿಕೊಡಿ ಎಂಬ ಒತ್ತಾಯದ ಮಾತುಗಳನ್ನು ಹೇಳಿದರು ಯಾವುದೇ ಪ್ರಯೋಜನೆಗೆ ಬಂದಿಲ್ಲಾ.

   ಈ ಮುಖ್ಯ ರಸ್ತೆಯ ಮೂಲಕವೇ ಬಸ್ ನಿಲ್ದಾಣಕ್ಕೆ ದಿನನಿತ್ಯ ಸಾವಿರಾರು ಪ್ರಯಾಣಿಕರು ಮಲಮೂತ್ರದ ನಡುವೇಯೇ ಮೂಗುಮುಚ್ಚಿಕೊಂಡೇ ಸಂಚರಿಸತೊಡಗಿದ್ದಾರೆ ಈ ವ್ಯವಸ್ಥೆಯಿಂದ ಕೆಲವು ಮಹಿಳೆಯರು ಅಸಹ್ಯಪಟ್ಟುಕೊಂಡು ದಾರಿಬದಲಿಸಿ ನಿಲ್ದಾಣ ಪ್ರವೇಸಿಸುತ್ತಿರುವದು ಸಾಮಾನ್ಯವಾಗಿದೆ.

    ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಿಮರ್ಿಸಲಾಗಿದೆ ಸಂಪೂರ್ಣ ಕಳಪೆಮಟ್ಟದಿಂದ ಕೈಗೊಳ್ಳಲಾಗಿದೆ ಎಂದು ಪುರಸಭಾ ಸದಸ್ಯ ಮಲ್ಲಿಕಾಜರ್ುನ ಪಟ್ಟಣಶೆಟ್ಟಿ ಅವರು ಈ ಹಿಂದೆ ಸಾಕಷ್ಟು ಭಾರಿ ಪ್ರತಿಭಟನೆಗಳನ್ನು ನಡೆಸಿದ್ದರಲ್ಲದೇ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ತಲೆ ಮೇಲೆ ಕಲ್ಲುಹೊತ್ತು ಪ್ರತಿಭಟನೆ ನಡೆಸಿ ಇಡೀ ರಾಜ್ಯದ ಗಮನವನ್ನು ಸೆಳೆದಿದ್ದರು. ಆ ಸಮಯದಲ್ಲಿ ಒಳಚರಂಡಿ ಮಂಡಳಿಯ ನಿದರ್ೇಶಕರು ಸ್ಥಳಕ್ಕೆ ಬೆಟ್ಟಿ ನೀಡಿ ತರ್ಡಪಾಟರ್ಿಯಿಂದ ಕಾಮಗಾರಿಯನ್ನು ತಪಾಸಣೆ ನಡೆಸಿ ಸೂಕ್ತಕ್ರಮಕೈಗೊಳ್ಳುವದಾಗಿ ಲೀಖಿತವಾಗಿ ಬರವಸೆಯನ್ನು ನೀಡಿದ್ದರು. 

ಆದರೆ ತರ್ಡಪಾಟರ್ಿ ಕೆಲೆವೆಡೆ ಅವೈಜ್ಞಾನಿಕವಾಗಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೆಲವು ಜಾಗೆಗಳನ್ನು ಗುರುತಿಸಿಕೊಟ್ಟಿದ್ದರು ಆದರೆ ತರ್ಡಪಾಟರ್ಿ ನೀಡಿದ ವರಧಿಗೂ ಬೆಲೆ ನೀಡದ ಕನರ್ಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಮೂಗಿಗೆ ತುಪ್ಪುಸವರಿದಂತೆ ಸರಿಪಡಿಸುವ ಬರವಸೆ ನೀಡಿದರು ಆದರೆ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯಲಿಲ್ಲಾ. ಕಾಮಗಾರಿ ಅಪೂರ್ಣಗೊಂಡಿದೆ ಎಂಬ ಹಿನ್ನೇಲೆಯಲ್ಲಿ ಇನ್ನೂ ಒಳಚರಂಡಿಯ ಉಸ್ತುವಾರಿ ಪುರಸಭೆಯು ಕೂಡಾ ವಹಿಸಿಕೊಂಡಿಲ್ಲಾ.

ಸುಮಾರು ಒಂದೇ ವರ್ಷದಲ್ಲಿ ಇಂತಹ ಎರಡ್ಮೂರು ಪ್ರಕರ್ಣಗಳು ಇದೇ ತರಹದ ಚೇಂಬರ್ ಸ್ಪೋಟಗೊಂಡು ಮುಖ್ಯರಸ್ತೆಯಲ್ಲಿಯೇ ಮಲಮೂತ್ರವೂ ಕೂಡಾ ಹರಿದು ಜನತೆಗೆ ದುವರ್ಾಸನೆಗೆ ರೋಶಿ ಹೋಗಿ ಪ್ರತಿಭಟನೆಯ ಹಾದಿಹಿಡಿಯುವ ಹೊತ್ತಿಗೆ ಕನರ್ಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಬೆಟ್ಟಿ ನೀಡಿ ದುರಸ್ಥಿಗೊಳಿಸಿ ತೆರಳಿದ್ದರು. ಆದರೆ ಮತ್ತೇ ಮತ್ತೊಂದು ಚೇಂಬರ್ದಿಂದ ಮಲಮೂತ್ರ ಉಕ್ಕಿ ಹರಿಯುತ್ತಿರುವದು ಒಳಚರಂಡಿ ಕಾಮಗಾರಿ ಕಳಪೆ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

ಈ ಅವೈಜ್ಞಾನಿಕ ಕಳಪೆಮಟ್ಟದ ಒಳಚರಂಡಿ ಕಾಮಗಾರಿಯಿಂದ ಇಡೀ ತಾಳಿಕೋಟೆ ಪಟ್ಟಣದ ಜನರಿಗೆ ಮತ್ತು ಮಹಿಳೆಯರಿಗೆ ಶಾಲಾ ಮಕ್ಕಳಿಗೆ ಮಲಮೂತ್ರದ ದುವರ್ಾಸನೆ ಸವಿಯುವದರೊಂದಿಗೆ ಅಸಹ್ಯೆಹುಟ್ಟಿಸುವಂತೆ ಮಾಡಿದೆ ಈ ಒಳಚರಂಡಿ ಕಾಮಗಾರಿಕೈಗೊಂಡ ಅಧಿಕಾರಿಗಳ ವಿರೂದ್ದ ಪಟ್ಟಣದ ಜನತೆ ರೋಶಿಹೋಗಿ ಪ್ರತಿಭಟನೆ ಹಾದಿ ಹಿಡಿಯುವ ಮುಂಚೆ ಮೇಲಾಧಿಕಾರಿಗಳು ಏಚ್ಚತ್ತುಕೊಳ್ಳಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

-----

ತಾಳಿಕೋಟೆ ಪಟ್ಟಣದಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಿಮರ್ಿಸಲಾಗಿದೆ ಎಂದು ಸಾಕಷ್ಟು ಭಾರಿ ಪ್ರತಿಭಟನೆಯನ್ನು ನಡೆಸಿದ್ದೆನೆ ಆದರೆ ಪುರಸಭೆಗೆ ನಿರ್ವಹಣೆಗೆ ಒಳಚರಂಡಿ ಮಂಡಳಿಯವರು ಹಸ್ತಾಂತರ ಮಾಡದೇ ಕೆಲವು ಮನೆಗಳ ಶೌಚಾಲಯಗಳಿಗೆ ಬಳಕೆಮಾಡಲು ಪೈಪಲೈನ್ಗಳನ್ನು ಜೋಡಿಸಿದ್ದಾರೆ ಅದೇ ರೀತಿಯಾಗಿ ತಿಲಕ ರಸ್ತೆಯ ಬಡಾವಣೆಗಳಲ್ಲಿಯ ಹಾಗೂ ಸಾರ್ವಜನಿಕ ಶೌಚಾಲಯಗಳ ಸಂಪರ್ಕವೂ ಕೂಡಾ ನೀಡಿದ್ದಾರೆ ಕಳಪೆ ಕಾಮಗಾರಿಯಿಂದ ಅವೈಜ್ಞಾನಿಕ ಚೇಂಬರ್ ನಿಮರ್ಾಣದಿಂದ ಮಲಮೂತ್ರ ರಸ್ತೆಯಲ್ಲಿ ಹರಿಯತೊಡಗಿದೆ ದಿವರ್ಾಸನೆಯಿಂದ ಪಟ್ಟಣದ ಜನರು ಬೇಸತ್ತು ಹೋಗಿದ್ದಾರೆ ಈಗಾಗಕೇ ಈ ಕಳಪೆ ಕಾಮಗಾರಿ ಕುರಿತು ಎಸಿಬಿಗೆ ದೂರು ಸಲ್ಲಿಸಿದ್ದೇನೆ ಮುಂದಿನ ಹಂತದಲ್ಲಿ ರಾಜ್ಯ ಲೋಕಾಯುಕ್ತಗೆ ದೂರು ಸಲ್ಲಿಸುತ್ತೇನೆ. ಅಧಿಕಾರಿಗಳ ಮೇಲೆ ಕ್ರಮ ಆಗುವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ.

ಮಲ್ಲಿಕಾಜರ್ುನ ಪಟ್ಟಣಶೆಟ್ಟಿ

 ಪುರಸಭಾ ಸದಸ್ಯರು

------

ಶಾಸಕ ನಡಹಳ್ಳಿ ಸೂಚನೆಗೆ ಕಿಮ್ಮತ್ತಿಲ್ಲಾ

ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಪ್ರವಾಸಿ ಮಂದಿರದಲ್ಲಿ ಕೈಗೊಂಡು ವಿವಿಧ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಳಚರಂಡಿ ಕಾಮಗಾರಿ ಪುರಸಭೆಗೆ ಹಸ್ತಾಂತರ ಕುರಿತು ಚಚರ್ೆನಡೆದಾಗ ನಿಮರ್ಿಸಿದ ಕಾಮಗಾರಿಯನ್ನು ಮೊದಲು ಒಂದು ವರ್ಷ ಮೇಂಟೆನೇನ್ಸ್ ಮಾಡಿ ಎಲ್ಲವೂ ಸರಿಹೋದರೆ ಪುರಸಭೆಗೆ ಹಸ್ತಾಂತರ ಬಗ್ಗೆ ವಿಚಾರ ಮಾಡೋಣ ಒಳಚರಂಡಿ ಕಾಮಗಾರಿಯ ಬಗ್ಗೆ ಸಾಕಷ್ಟು ಜನರು ಸರಿಯಾಗಿ ಕಾಮಗಾರಿ ಯಾಗಿಲ್ಲಾವೆಂಬ ದೂರಿದೆ ಇಂದಿನಿಂದಲೇ ಮೇಟೆಂನ್ಸೇನ್ಸ್ ಮಾಡಲು ಪ್ರಾರಂಬಿಸಿ ಎಂದು ತಿಂಗಳ ಹಿಂದೆ ಸೂಚಿಸಿದರೂ ಇಲ್ಲಿಯ ವರೆಗೂ ಯಾವುದೇ ಕಾರ್ಯಗಳು ನಡೆಯದಿರುವದು ಶಾಸಕ ನಡಹಳ್ಳಿ ಅವರ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿರುವದು ಅಧಿಕಾರಿಗಳ ಗರ್ವಕ್ಕೆ ಸಾಕ್ಷೀಕರಿಸಿದೆ.