ಹುಬ್ಬಳ್ಳಿ 21: ಟಾ.ಟಾ ಎ.ಸಿ.ಇ ವಾಹನದ ಡಿಸ್ಕ ಸಮೇತ ಮೂರು ಗಾಲಿಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಂದ 2,06,000 ರೂ ಗಳ ಮಾಲ ವಶಪಡಿಸಿಕೊಳ್ಳಲಾಗಿದೆ.
ಸೋನಿಯಾಗಾಂಧಿ ನಗರ ಹುಬ್ಬಳ್ಳಿ ನಿವಾಸಿ ಗುರುನಾಥ ಉರ್ಫ ಗುರ್ಯಾ ಅಯ್ಯಪ್ಪ ಕುರಿಯವರ(26) ಬಂಧಿತ ಆರೋಪಿಯಾಗಿದ್ದು, ಈತ
ಜ.12ರಂದು ಹುಬ್ಬಳ್ಳಿ ಕಕರ್ಿಬಸವೇಶ್ವರ ನಗರದಲ್ಲಿ ರಾತ್ರಿ ವೇಳೆಯಲ್ಲಿ ನಿಲ್ಲಿಸಿದ ಟಾ.ಟಾ ಎ.ಸಿ.ಇ ವಾಹನದ ಡಿಸ್ಕ ಸಮೇತ ಇದ್ದ 3 ಗಾಲಿಗಳನ್ನು ಕಳುವು ಮಾಡಿದ್ದ.
ಕಕರ್ಿಬಸವೇಶ್ವರ ನಗರ ಹುಬ್ಬಳ್ಳಿ ನಿವಾಸಿ ಲಕ್ಷ್ಮಣ ರಂಗಣ್ಣ ನಾಯಕ ಈ ಬಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹು-ಧಾ ನಗರ ಪೊಲೀಸ್ ಆಯುಕ್ತ ದಿಲೀಪ್ ಆರ್., ಉಪ-ಪೊಲೀಸ್ ಆಯುಕ್ತರಾದ ಡಿ.ಎಲ್ ನಾಗೇಶ ಮತ್ತು ಎಮ್.ವ್ಹಿ ಮಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅರುಣಕುಮಾರ್ ವ್ಹಿ ಸಾಳುಂಕೆ, ಪಿ.ಎಸ್.ಐ ಎಸ್.ಆರ್.ಕಿತ್ತೂರ ಮತ್ತು ಸಿಬ್ಬಂದಿ ಹೆಚ್.ಎಮ್.ನಾಯಕ್, ಜೆ.ಸಿ.ರಜಪೂತ್, ಪಿ.ಎಸ್.ತಗಡಿನಮನಿ, ಎಸ್.ಎಮ್.ತಿರಕಣ್ಣವರ, ಡಿ.ಆರ್ ಪಮ್ಮಾರ್, ಎಫ್.ಎಚ್ ನದಾಫ, ಮಂಜುನಾಥ ಯಲ್ಲಕ್ಕನವರ, ಜಿ.ವಿ ಹಿರೇಮಠ ರವರನ್ನು ಒಳಗೊಂಡ ವಿಶೇಷ ತಂಡ ತನಿಖೆ ಮಾಡಿ ಆರೋಪಿಯನ್ನು ಬಂಧಿಸಿ, ಆತನಿಂದ 2,06,000=00 ರೂ ಮೌಲ್ಯದ ಒಂದು ಟಾ.ಟಾ ಎ.ಸಿ.ಇ ವಾಹನ ಮತ್ತು ಡಿಸ್ಕ ಸಮೇತ ಇದ್ದ 3 ಗಾಲಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಪೊಲೀಸ್ ಆಯುಕ್ತ ದಿಲೀಪ್ ಆರ್., ಅವರು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಿ, ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.