ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ : ದುಂಡಿಗೌಡ್ರ

Theater artists need to be encouraged : Dundigowdra

ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ : ದುಂಡಿಗೌಡ್ರ

ಶಿಗ್ಗಾವಿ 15  :ಅಳಿವಿನಂಚಿನಲ್ಲಿರುವ ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.  ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ "ಹಡೆದವ್ವನ ಧರ್ಮ ಸಂಕಟ" ನಾಟಕ ವನ್ನ ಉದ್ಘಾಟಿಸಿ ಮಾತನಾಡಿದ ಅವರು ನಮ್ಮಲ್ಲಿ ಬಹಳಷ್ಟು ಸೌಹಾರ್ದತೆಯಿದೆ, ಬಹಳಷ್ಟು ಸೌಹಾರ್ದತೆ ಇರುವ ಗ್ರಾಮವೆಂದರೆ ಅದು ಹಿರೆಬೆಂಡಿಗೇರಿ ಗ್ರಾಮವಾಗಿದೆ, ಕಲಾವಿದರು ಬಹಳಷ್ಟು ಜನ ಈ ಗ್ರಾಮದಲ್ಲಿ ಇದ್ದಾರೆ ಜೊತೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವ ಜನರೂ ಈ ಗ್ರಾಮದಲ್ಲಿ ಇದ್ದಾರೆ, ಜಾತ್ರೆಗಳು ನಮ್ಮ ಸಂಸ್ಕೃತಿಯನ್ನ ಬಿಂಬಿಸುವ ಹಬ್ಬಗಳು ಆ ಹಬ್ವಗಳ ಆಚರಣೆಗಳಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತವೆ ಎಂದರು.  ಎಪಿಎಂಸಿ ಮಾಜಿ ಅದ್ಯಕ್ಷ ತಿಪ್ಪಣ್ಣ ಸಾತಣ್ಣವರ ಮಾತನಾಡಿ ಜೀವಂತ ಕಲೆಯೆಂದರೆ ಅದು ನಾಟಕ ಮಾತ್ರ, ಕಲೆಗೆ ಪ್ರೋತ್ಸಾಹಕರು ಇದ್ದಾಗ ಮಾತ್ರ ಕಲೆ ಉಳಿಸಲು ಸಾದ್ಯವಿದೆ ಎಂದರು.    ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ,ಹಿರೇಬೆಂಡಿಗೇರಿ ಗ್ರಾಮ ಪಂಚಾಯತಿ ಅದ್ಯಕ್ಷೆ ಈರವ್ವ ಹಡಪದ, ಶಿವಾನಂದ ಮ್ಯಾಗೇರಿ, ಖಜಾಮೋಹಿನುದ್ದಿನ, ಮಂಜುನಾಥ ಕಾರಡಗಿ, ಕೊಟ್ರ​‍್ಪ ಕೊಟ್ಟರ​‍್ಪನವರ, ಬಸವರಾಜ ಶಿಗ್ಗಾಂವ, ಚಿನ್ನಪ್ಪ ಕುಂದಗೋಳ, ನಾಗರಾಜ ಪಟ್ಟಣಶೆಟ್ಟಿ ಸೇರಿದಂತೆ ಇತರರು ಹಾಜರಿದ್ದರು ಬಸವರಾಜ ಶಿಗ್ಗಾವ ಹಾಗೂ ಶರೀಫ ಮಾಕಪ್ಪನವರ ರೈತ ಗೀತೆ ಪ್ರಸ್ತುತಪಡಿಸಿದರು ರಮೇಶ ಸಾತಣ್ಣವರ ಕಾರ್ಯಕ್ರಮ ನಿರೂಪಿಸಿದರು.