ದಿ. ಮೋಹನ ಸಹಜ ಮಾನವೀಯ ಭಾವುಕ ಜೀವಿ: ಗೊಂಡಬಾಳ

ಲೋಕದರ್ಶನ ವರದಿ

ಕೊಪ್ಪಳ 08: ಧಾರವಾಡದ ಹಿರಿಯ ಸಾಹಿತಿ, ವಿದ್ವಾಂಸ, ಪತ್ರಕರ್ತ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ನಾಗಮ್ಮನವರ್ ಅವರ ನಿಧನಕ್ಕೆ ನಗರದ ತಾಲೂಕ ಪಂಚಾಯತಿ ಸ್ವರಭಾರತಿ ಸಂಸ್ಥೆಯ ಕಛೇರಿಯಲ್ಲಿ ವಿವಿಧ ಪ್ರಗತಿಪರರು ಸೇರಿ ಶ್ರದ್ಧಾಂಜಲಿ ಸಮಪರ್ಿಸಿದರು.

ಈ ವೇಳೆ ಮಾತನಾಡಿದ, ಅವರ ಒಡನಾಡಿ ಉತ್ತರ ಕನರ್ಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದಶರ್ಿ ಮಂಜುನಾಥ ಜಿ. ಗೊಂಡಬಾಳ, ಪ್ರತ್ಯೇಕತೆ ಕೂಗು ಬಂದಾಗಲೆಲ್ಲ ಅದರ ಸಾಧಕ, ಬಾಧಕಗಳ ಬಗ್ಗೆ ತುಂಬಾ ಗಂಭೀರವಾಗಿ ಚಿಂತಿಸುತ್ತಿದ್ದ ಅವರು ಉತ್ತರ ಕನರ್ಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಕಟ್ಟುವಲ್ಲಿ ತುಂಬಾ ಶ್ರಮಿಸಿದ್ದರು, ಅವರು ಅದರ ಉಪಾಧ್ಯಕ್ಷರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಸಾಹಿತ್ಯದಲ್ಲಿ ಸಹ ವಿಭಿನ್ನವಾದ ಪ್ರಯೋಗ ಮತ್ತು ಕ್ರಿಯಾಶೀಲತೆ ಉಳಿಸಿಕೊಂಡ ಅವರು, ಜೀವನ ಮೌಲ್ಯಕ್ಕೆ ಒತ್ತುಕೊಟ್ಟ ಸಹಜ ಮಾನವೀಯ ಭಾವುಕ ಜೀವಿಯಾಗಿದ್ದರು ಎಂದರು.

ಹಿರಿಯ ಪತ್ರಕರ್ತ ರಮೇಶ ಸುವರ್ೆ, ಕಲಾವಿದ ಬಿ. ಎನ್. ಹೊರಪೇಟಿ, ಅಂತರಾಷ್ಟ್ರೀಯ ಕರಾಟೆ ತರಬೇತುದಾರ ಶ್ರೀನಿವಾಸ್ ಪಂಡಿತ್, ಬರಹಗಾರ ನಾಗರಾಜನಾಯಕ ಡೊಳ್ಳಿನ್, ಸಹಕಾರಿ ಧುರೀಣ ಗವಿಸಿದ್ದಪ್ಪ ಕಕರ್ಿಹಳ್ಳಿ, ಮುಖಂಡ ವಿರೇಶ ಮಹಾಂತಯ್ಯನಮಠ, ರಾಜಶೇಖರ ಲಾಡಿ, ಮಹೇಶ ಪುರೋಹಿತ್, ಮಾರುತಿ ಬಳಿಗಾರ ಇತರರು ಇದ್ದರು. ಸಭೆಯ ಮುನ್ನ 2 ನಿಮಿಷ ಮೌನಾಚರಣೆ ಮಾಡಿ ನಂತರ ನುಡಿನಮನ ಸಲ್ಲಿಸಲಾಯಿತು.