ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ: ಜೊಲ್ಲೆ

ರಾಯಬಾಗ 22: ಇವತ್ತಿನ ದಿನಮಾನಗಳಲ್ಲಿ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಯುವಕರಲ್ಲಿ ಅನುಭವ, ಶಿಕ್ಷಣ, ಒಳ್ಳೆಯ ಗೆಳೆತನ ಹಾಗೂ ಗುರಿ ಇದ್ದರೆ ಸಾಧಕರಾಗುವಲ್ಲಿ ಸಂದೇಹವೆ ಇಲ್ಲ. ಇಂತಹ ಅಡಗಿದ ಗುಣಗಳಿಗೆ ಅಭಿಪ್ರೇರಣೆ ನೀಡಲು ಯುವ ಸಮೂದಾಯಕ್ಕೆ ಇಂತಹ ವಿಶೇಷ ವ್ಯಕ್ತಿತ್ವ ವಿಕಸನದ ಜ್ಞಾನ ಅವಶ್ಯಕವಿದೆ ಎಂದು ಬಸವಜ್ಯೋತಿ ಯುಥ್ ಫೌಂಡೇಶನದ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.   

ಇತ್ತಿಚೆಗೆ ಪಟ್ಟಣದ ಬಿ.ಎ.ಚೌಗಲೆ ಪದವಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಅಂಗವಾಗಿ ಬಸವಜ್ಯೋತಿ ಯುಥ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು. 

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಬೆಳಗಾವಿಯ ರಮಾನಾಥ ಭೇಂಡಿಗೆರಿ ಮಾತನಾಡಿ, ಸಮಾಜದಲ್ಲಿ ನಮ್ಮ ಶಕ್ತಿಯನ್ನು ಹಾಗೂ ಕೌಶಲ್ಯವನ್ನು ಪ್ರದಶರ್ಿಸಬೇಕಾದರೆ ನಾವೂ ಒಬ್ಬ ಒಳ್ಳೆಯ ಕೇಳುಗರಾಗಬೇಕು. ಇದು ವಿದ್ಯಾಥರ್ಿ ಜೀವನದಲ್ಲಿ ಬಹಳ ಪರಿಣಾಮಕಾರಿಯಾದ ಕಾರ್ಯವನ್ನು ಮಾಡುತ್ತದೆ ಎಂದರು. 

     ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ನಿದರ್ೇಶಕ ವಿನಯ ಚೌಗಲೆ, ವಿಜಯ ರಾವೂತ ಹಾಗೂ ವಿವಿಧ  ಅಂಗ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. 

ಪ್ರಾಚಾರ್ಯ ಎಸ್.ಎಸ್.ದಿಗ್ಗೇವಾಡಿ ಸ್ವಾಗತಿಸಿದರು. ಉಪನ್ಯಾಸಕ ಆರ್.ವಾಯ್.ಯಮಗಾರ ನಿರೂಪಿಸಿದರು. ಡಿ.ಎಚ್.ಹಿಪ್ಪರಗಿ ವಂದಿಸಿದರು.