ವಿಜಯಪುರ ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ವ್ಯವಸ್ಥೆ: ದೂರು

ಲೋಕದರ್ಶನ ವರದಿ

ವಿಜಯಪುರ 09 : ವಿಜಯಪುರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಪೊಲೀಸ್ ನಿಷ್ಕಿಯವಾಗಿದೆ ಎಂದು ದಯೆ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಪಡೇಕನೂರ  ದೂರಿದ್ದಾರೆ.

ಈ ಕುರಿತು ಪತ್ರಿಕ ಹೇಳಿಕೆ ನೀಡಿರುವ ಅವರು,  ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿದರೆ ಜನರಲ್ಲಿ ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ವಾರಕ್ಕೊಂದರಂತೆ ಕೊಲೆ, ಮಕ್ಕಳಾದಿಯಾಗಿ ಮಹಿಳೆಯರ ಮೇಲೆ ಬಲಾತ್ಕಾರ, ಅತ್ಯಾಚಾರ, ಮಾಂಗಲ್ಯ ಸರ ಅಪಹರಣ, ಮಯರ್ಾದಾ ಹತ್ಯೆ, ಸರಣಿ ಕಳ್ಳತನ, ಅಪರಿಚಿತ ಶವ ಪತ್ತೆ, ಮಕ್ಕಳ ಅಪಹರಣ, ಗೂಂಡಾಗಿರಿ, ಅಕ್ರಮ ಮರುಳು ಸಾಗಾಣಿಕೆ ಮುಂತಾದ ಹಲವು ಕಾನೂನು ಬಾಹಿರ ಚಟುವಟಿಕೆಗಳು ಜಿಲ್ಲೆಯಾದ್ಯಂತ ಅವ್ಯಾಹತವಾಗಿ ನಡೆಯುತ್ತಲೇ ಇವೆ. ನಗರ, ಜಿಲ್ಲೆಯಲ್ಲಿ ಪೊಲೀಸ್ ಗಸ್ತು ಕಾಣುತ್ತಿಲ್ಲ. ಇದರಿಂದಾಗಿ ಪುಂಢ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಇವೆಲ್ಲವುಗಳನ್ನು ಹದ್ದುಬಸ್ತಿನಲ್ಲಿ ಇಡಬೇಕಾದ ಪೊಲೀಸ್ ಇಲಾಖೆಯ ವರಿಷ್ಠರು, ಸಿಬ್ಬಂಧಿಗಳು ವ್ಯರ್ಥ ಕಾಲ ಹರಣದಲ್ಲಿ ತೊಡಗಿದ್ದಾರೆ. ಪೊಲೀಸ್ ಕಚೇರಿಗಳನ್ನು ಮೋಜಿನ ತಾಣವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡಬೇಕಾದ ಪೊಲೀಸ ಅಧಿಕಾರಿಗಳೇ ಸುಪಾರಿ ಕೊಲೆಯಲ್ಲಿ ಶ್ಯಾಮೀಲಾಗಿ ಕನರ್ಾಟಕ ಪೊಲೀಸರ ಮಾನ ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ರಕ್ಷಕರಾಗಬೇಕಿದ್ದ ಪೊಲೀಸರು ಭಕ್ಷಕರಾಗಿದ್ದನ್ನು ಕಂಡು ಜಿಲ್ಲೆಯ ಜನರು ಪ್ರಾಣಾ ಭೀತಿಯಲ್ಲಿ ಬದುಕುವಂತಾಗಿದೆ. ಹಿರಿಯ ಅಧಿಕಾರಿಗಳಿಗೆ ಕೆಳ ಹಂತದ ಸಿಬ್ಬಂಧಿ ಮೇಲೆ ಯಾವುದೇ ನಿಯಂತ್ರಣವಿಲ್ಲಾ ಹಾಗೂ ಪೊಲಿಸ್ ವರಿಷ್ಟಾಧಿಕಾರಿಗಳು ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ನಿಷ್ಕ್ರೀಯವಾಗಿದೆ. 

ಅಪರಾಧ ಚಟುವಟಿಕೆಗಳನ್ನು ತಹಬದಿಗೆ ತರಬೇಕಾದ ಜವಾಬ್ದಾರಿ ಹೊಂದಿದ ಪೊಲೀಸರು ಕೇವಲ ತಮಗೆ ಆಯ ಕಟ್ಟಿನ ಸ್ಥಳದಲ್ಲಿ ವಗರ್ಾವಣೆ ಬಯಸುವುದು, ಸಕರ್ಾರದ ಆಗು ಹೋಗುಗಳ ಬಗ್ಗೆ ಚಚರ್ಿಸುವುದು, ಇವುರುಗಳು ದಿನನಿತ್ಯದ ಕರ್ತವ್ಯ ಮಾಡಿಕೊಂಡಿದ್ದಾರೆ. ಕೂಡಲೇ ಪೊಲೀಸ್ ಇಲಾಖೆಯ ವರಿಷ್ಠರು ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಬದಲಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ರೇಷ್ಮಾ ಪಡೇಕನೂರ ಮನವಿ ಮಾಡಿದ್ದಾರೆ.