ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ವಕೀಲರ ಸಂಘದ ಕಾರ್ಯ ಶ್ಲಾಘನೀಯ
ಬ್ಯಾಡಗಿ 09: ವಕೀಲರು ತಮ್ಮ ಕೆಲಸದ ಒತ್ತಡದ ನಡುವೆ ಕ್ರೀಡೆಯಲ್ಲಿ ಭಾಗವಹಿಸಲು ತಾಲೂಕೂ ವಕೀಲರ ಸಂಘದಿಂದ ಏರಿ್ಡಸಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಧೀಶ ಜಿ ಎಲ್ ಲಕ್ಷ್ಮೀ ನಾರಾಯಣ ಹೇಳಿದರು.ತಾಲೂಕು ಕ್ರೀಡಾಂಗಣದಲ್ಲಿ ನಡೆದ ವಕೀಲರ ಸಂಘದ ಹಾರ್ಡ್ ಟೇನಿಸ್ ಕ್ರೀಕೆಟ ಪಂದ್ಯಾವಳಿಯ ವಿಜೆತರಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಮಾತನಾಡಿದರು ಮತ್ತು ಜಿಲ್ಲೆಯ ಎಲ್ಲಾ ತಾಲುಕಿನ ಸಂಘದ ವಕೀಲರು ಭಾಗವಹಿಸಿದ್ದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.ಜಿಲ್ಲಾ ಸಿ ವಿ ಲ್ ನ್ಯಾಯಾಧೀಶ ಮುತಾಲಿಕ ದೇಸಾಯಿ ಅವರು ಮಾತನಾಡಿ ವಕೀಲರು ನ್ಯಾಯಾಲಯದ ಕಾರ್ಯಗಳಲ್ಲಿ ಭಾಗವಹಿಸಿ ಕಕ್ಷಿದಾರರ ಪ್ರಕರಣಗಳಲ್ಲಿ ಮುಳುಗಿರುತ್ತಾರೆ ಆದರೆ ಈ ರೀತಿ ಕ್ರೀಡಾಕೂಟ ಹಮ್ಮಿಕೊಳ್ಳುವುದರ ಮುಖಾಂತರ ಅವರ ಕ್ರೀಡೆ ಪ್ರತಿಭೆಯನ್ನು ಗುರುತಿಸುವ ಕೆಲಸವಾಗುತ್ತದೆ ಎಂದು ಹೇಳಿದರು.ಈ ವೇಳೆ ಟೂರ್ನಮೆಂಟ್ ನಲ್ಲಿ ವೀಜೆತರಾದ ಪ್ರಥಮ ಬಹುಮಾನ ಬ್ಯಾಡಗಿ ವಕೀಲರ ಸಂಘದ ಂ ತಂಡವು ಪಡೆದುಕೊಂಡಿದೆ ದ್ವಿತೀಯ ಬಹುಮಾನವನ್ನು ರಾಣೇಬೆನ್ನೂರು ವಕೀಲರ ಸಂಘದ ತಂಡವು.ತೃತಿಯ ಬಹುಮಾನ ಬ್ಯಾಡಗಿ ನ್ಯಾಯಾಂಗ ಇಲಾಖೆಯವರು ಪಡೆದುಕೂಂಡಿರುತ್ತಾರೆ. ಈ ಸಮಯದಲ್ಲಿ ತಾಲೂಕು ನ್ಯಾಯಾಧೀಶ ಅಮೂಲ್ ಜೆ ಹಿರೆಕುಡಿ . ಕಾರ್ಯದರ್ಶಿ ಸುರೇಶ್ ವಗ್ಗನನವರ.ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಎನ್ ಬಾರ್ಕಿ ಹಾಗೂ ಉಪಾಧ್ಯಕ್ಷರಾದ ಶ್ರೀ ಬಿಜಿ ಹಿರೇಮಠ್ ಹಾಗೂ ಕಾರ್ಯದರ್ಶಿಯವರಾದ ಶ್ರೀ ಎಂ ಪಿ ಹಂಜಗಿ ಸಹ ಕಾರ್ಯದರ್ಶಿಯವರಾದ ಶ್ರೀ ಎನ್ ಬಿ ಬಳೆಗಾರ ಹಾಗೂ ಹಿರಿಯ ವಕೀಲರಾದ ಶ್ರೀ ಎಫ್‌ಎಂ ಮುಳುಗುಂದ ವಕೀಲರು ಪಿಆರ್ ಮಠದ ಶ್ರೀ ಪೀ ಸಿ ಸಿಗೆಹಳ್ಳಿ ಎಂ ಜೆ ಮುಲ್ಲಾ. ಆರ್ಸಿ ಶೆಡೆನೂರು. ಪಿಎಸ್ ಬನ್ನಿಹಟ್ಟಿ. ಎನ್ ಎಸ್ ಬಟ್ಟಲಕಟ್ಟಿ ಹಾಗೂ ಹಾವೇರಿ ರಾಣೆಬೆನ್ನೂರ್ ಹಿರೇಕೆರೂರು ವಕೀಲರ ಸಂಘಗಳ ಎಲ್ಲಾ ವಕೀಲರು ಉಪಸ್ಥಿತರಿದ್ದರು.