ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ ಕ್ವಾರ್ಟರ್ ಫೈನಲ್ಗೆ ಲೊವ್ಲಿನಾ, ಕೇರಳ ಬಾಕ್ಸರ್ಗಳಿಂದಲೂ ಉತ್ತಮ ಪ್ರದರ್ಶನ

ಲೋಕದರ್ಶನ ವರದಿ

ವಿಜಯನಗರ 04:ಇನ್ಸ್ ಪೈರ್ ಇನ್ ಸ್ಟಿಟ್ಯೂಟ್ ಆಫ್ ಸ್ಪೋಟ್ಸ್ರ್ ನಲ್ಲಿ ಜೆಎಸ್ ಡಬ್ಲ್ಯೂ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ಎಲೈಟ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಮೂರನೇ ದಿನವಾದ ಗುರುವಾರ ಕಳೆದ ನವೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕದೊಂದಿಗೆ ಅಭಿಯಾನ ಪೂರ್ಣಗೊಳಿಸಿದ್ದ ಲೊವ್ಲಿನಾ ಬೋಗರ್ೊಹೈನ್ ವಾಕ್ಓವರ್ ಪಡೆದು ಸುಲಭವಾಗಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಚಾಂಪಿಯನ್ಷಿಪ್ನ ಅತ್ಯಂತ ಆಸಕ್ತಿದಾಯಕ ವಿಷಯ ಎಂದರೆ ಕೇರಳದ ದಿವ್ಯ ಗಾಣೇಶ್(69ಕೆಜಿ), ಇಂದ್ರಾ ಕೆ.ಎ.(75ಕೆಜಿ), ಅನಸ್ವರಾ ಪಿ.ಎಂ.(81+ಕೆಜಿ) ಮತ್ತು ಫೌಸಿಯಾ ಎ.ಟಿ.(81ಕೆಜಿ) ಸೇರಿದಂತೆ ನಾಲ್ವರು ಬಾಕ್ಸರ್ಗಳು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರೊಂದಿಗೆ ಹರಿಯಾಣದ ನಾಲ್ವರು ಬಾಕ್ಸರ್ಗಳು ಸಹ ಎಂಟರ ಘಟ್ಟಕ್ಕೆ ಮುನ್ನಡೆದಿದ್ದಾರೆ. ಈ ಮಧ್ಯೆ, ರೈಲ್ವೇಯ ಮೂವರು, ದೆಹಲಿ, ಪಂಜಾಬ್, ಚಂಡೀಗಢ ಮತ್ತು ಆಲ್ ಇಂಡಿಯಾ ಪೊಲೀಸ್ ನಿಂದ ತಲಾ ಇಬ್ಬರು ಬಾಕ್ಸರ್ಗಳು ಹಾಗೂ ರಾಜಸ್ಥಾನ್ನಿಂದ ಓರ್ವ ಬಾಕ್ಸರ್ ಕ್ವಾರ್ಟರ್ ಫೈನಲ್ಸ್ಗೆ ದಾಪುಗಾಲಿಟ್ಟಿದ್ದಾರೆ.

ಆಲ್ ಇಂಡಿಯಾ ಪೊಲೀಸ್ನ ನೇಹಾ ಜಾಧವ್ ವಿರುದ್ಧ ಫೌಸಿಯಾ ವಾಕ್ ಓವರ್ ಪಡೆದದ್ದನ್ನು  ಹೊರತುಪಡಿಸಿ, ದಿವ್ಯಾ ಜಾಧವ್ 5-0 ಅಂತರದಲ್ಲಿ ತಮಿಳುನಾಡಿನ ಎಸ. ಪ್ರೀತಿ ವಿರುದ್ಧವು, ಇಂದ್ರಾ ಗುಜರಾತ್ ನ ರಿಯಾ ಉಪಾಧ್ಯಾಯ ವಿರುದ್ಧವು, ಅನಸ್ವರಾ 5-0 ಅಂತರದಲ್ಲಿ ಮಹಾರಾಷ್ಟ್ರದ ಶಯಾನ್ ಪಥಾನ್ ವಿರುದ್ಧವು ಗೆದ್ದು ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ಮುನ್ನಡೆದಿದ್ದಾರೆ.

2017ರ ವಿಶ್ವ ಯೂತ್ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತೆ ಅನುಪಮಾ ಆಂಧ್ರಪ್ರದೇಶದ ರವಿ ಚಂದ್ರಿಕಾ ಬಾಲ್ಗಾ ವಿರುದ್ಧ ವಾಕ್ ಓವರ್ ಪಡೆದ ಏಕೈಕ ಹರಿಯಾಣ ಬಾಕ್ಸರ್ ಎನಿಸಿದರು. ಉಳಿದಂತೆ ಹರಿಯಾಣದ ನಿಶಾ, ನುಪೂರ್ ಮತ್ತು ಪೂಜಾ ರಾಣಿ ತಮ್ಮ ಎದುರಾಳಿಗಳ ವಿರುದ್ಧ ಸುಲಭವಾಗಿ ಗೆದ್ದು ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.

69ಕೆಜಿ ಯ ವೆಲ್ಟರ್ವೇಟ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಆಂಧ್ರಪ್ರದೇಶದ ಮರಾಠಮ್ಮ ಸೈತಿವಾದ ವಿರುದ್ಧ ವಾಕ್ ಓವರ್ ಪಡೆದ ಲೋವ್ಲಿನಾ, ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು. ಮುಂದಿನ ಸುತ್ತಿನಲ್ಲಿ ಲೊವ್ಲಿನಾ ಗುಜರಾತ್ನ  ಮಿಥ್ರೆಮ್ ಜಾಗಿದಾರ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ದಿನದ ಪ್ರಮುಖ ಆಕರ್ಷಣೆಯ ಮಿಡಲ್ವೇಟ್ ವಿಭಾಗದ ಪಂದ್ಯದಲ್ಲಿ ರೈಲ್ವೇಸ್ನ ನೀತು ಆಂಧ್ರಪ್ರದೇಶದ ಕಲಾವತಿ ವಿರುದ್ಧ 3-2 ವಿರುದ್ಧ ಜಯ ಗಳಿಸಿದ್ದಾರೆ. ಇದೇ ವಿಭಾಗದ ಮತ್ತೊಂದು ಪಂದ್ಯದಲ್ಲಿ ಚಂಡೀಗಢದ ಅವ್ನೀತ್ ಕೌರ್ ಇದೇ ಅಂತರದಲ್ಲಿ ಶಲಾಖ್ ವಿರುದ್ಧ ಪ್ರಯಾಸದ ಜಯ ಗಳಿಸಿದರು.