ಕಲೆ ಸಾಹಿತ್ಯ ಸಂಸ್ಕೃತಿಯ ಉಳಿವಿಗೆ ಇಚ್ಛಾಶಕ್ತಿ ಅಗತ್ಯವಾಗಿದೆ: ಬಸವರಾಜ ಹೊರಟ್ಟಿ

ಲೋಕದರ್ಶನ ವರದಿ

ಬೆಂಗಳೂರು 28:  ಉತ್ತರ ಕನರ್ಾಟಕದ ಕಲೆ ಸಾಹಿತ್ಯ ಸಂಸ್ಕೃತಿಯ ಅಳಿವು ಉಳಿವುಗೆ ನಮ್ಮ ಇಚ್ಚಾಶಕ್ತಿಯ ಕೊರತೆ ಇದೆ. ಸಾಂಸ್ಕೃತಿಕ ರಾಜಕಾರಣದಿಂದ ಪ್ರಾದೇಶಿಕ ಅಸಮತೋಲನವು ಸಾಂಸ್ಕೃತಿಕ ವಲಯವನ್ನು ಪ್ರವೇಶಿಸಿರುವುದು ದುರಂತವಾಗಿದೆ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಅವರು ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಿನ್ನ ಸಂಜೆ ಆಯೋಜಿಸಿದ ಉತ್ತರ ಕನರ್ಾಟಕದ ಕಲೆ ಸಂಸ್ಕೃತಿ ಅಳಿವು ಉಳಿವು ಕುರಿತು ವಿಚಾರ ಸಂಕಿರಣ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ನಮ್ಮ ನೆಲದ ಭಾಷೆಗೆ ಅದರದೇ ಆದ ಸೊಗಡು ಇದೆ. ನಮ್ಮ ಭಾಗದ ಕಲೆಗೆ ತನ್ನದೇ ಆದ ಬೆಲೆ ಇದೆ ಹೀಗಾಗಿ ನಮ್ಮತನದ ಅಸ್ಮಿತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಉತ್ತರ ಕನರ್ಾಟಕದ ಸಮಗ್ರ ಅಭಿವೃದ್ಧಿಗಾಗಿ ಒಗ್ಗಾಟ್ಟಾಗಿ ಶ್ರಮಿಸಬೇಕೆದೆ ಎಂದು ಹೇಳಿದರು.

     ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ನ್ಯಾಯಮೂತರ್ಿ ಅರಳಿನಾಗರಾಜ ಈ ಸಂದರ್ಭದಲ್ಲಿ ಮಾತನಾಡಿ ಕನ್ನಡ ಸಾವಿರಾರು ವರ್ಷಗಳ ಇತಿಹಾಸ ಸಂಸ್ಕೃತಿ ಹೊಂದಿದ ಭಾಷೆ. ಜಗತ್ತಿನ ಎಲ್ಲಾ ಭಾಷೆಗಳಿಗಿಂತ ಭಿನ್ನ ಹಾಗೂ ಸಂಪತ್ ಭರಿತವಾದ ಭಾಷೆಯಾಗಿದೆ. ಆದರೆ ಇಂದಿನ ಯುವಜನಾಂಗ ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆಬಲಿಯಾಗಿ ಮಾತೃ ಭಾಷೆಯ ಉಪಯೋಗವನ್ನು ಕಡಿಮೆ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಪ್ರತಿಷ್ಠಾನ ಕೊಡಮಾಡುವ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ, ಅಥಣಿ ಮೋಟಗಿ ಮಠದ ಪ್ರಭುಚನ್ನ ಬಸವ ಸ್ವಾಮಿಜೀ ಮಾತನಾಡಿ ಉತ್ತರ ಕನರ್ಾಟಕದ ಕಲೆ ಸಂಸ್ಕೃತಿ ವಿಶಿಷ್ಠವಾದದ್ದು, ನಮ್ಮ ಯುವಜನಾಂಗ ಅದರ ಹಿರಿಮೆಯನ್ನು ಕಾಪಾಡಿಕೊಳ್ಳಬೇಕು. ಪಾಶ್ಚಾತ್ಯ  ಸಂಸ್ಕೃತಿಯಿಂದ ಯುವಜನಾಂಗ ದಾರಿತಪ್ಪುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯರಾದ ನಾವು ಮಕ್ಕಳಿಗೆ ಕನ್ನಡದ ಸಂಸ್ಕೃತಿ ಕಲೆ ಸಾಹಿತ್ಯವನ್ನು ಪ್ರೀತಿಸುವ ವಾತಾವರಣ ನಿಮರ್ಿಸಬೇಕಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕನ್ನಡ ಭಾಷಾ ವಿದ್ವಾಂಸ ಕೈಪಾಶೇಷಾದ್ರಿ. ಸಾಹಿತಿ, ಸಿ.ಕೆ.ನಾವಲಗಿ, ಪ್ರೋಮೈತ್ರೇಯಿಣಿ, ಗದಗೆಪ್ಪಗೌಡರ್ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಮಾತನಾಡಿದರು.

ಆರಂಭದಲ್ಲಿ ವಿಜಯಲಕ್ಷ್ಮೀ ಪುಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಯಮಕನಮರಡಿ, ನಿರ್ಮಲಾ ಬಟ್ಟಲ್ ಕಾರ್ಯಕ್ರಮ ನಿರೂಪಸಿದರು. ರುದ್ರಣ್ಣ ಚಂದರಗಿ ಆಭಾರ ಮನ್ನಿಸಿದರು.