ಮೈ ನವಿರೇಳಿಸಿದ ಕಂಚವೀರರ ಶಸ್ತ್ರ ಪವಾಡ
ಹೂವಿನಹಡಗಲಿ 15: ಸುಕ್ಷೇತ್ರ ಮೈಲಾರ ಮೈಲಾರಲಿಂಗೇಶ್ವರ ಜಾತ್ರೆಯ ಎರಡನೇ ದಿನ ಶನಿವಾರ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ನೇತೃತ್ವದಲ್ಲಿ ಕಂಚಾವೀರರಿಂದ ಶಸ್ತ್ರ ಪವಾಡ ಹಾಗೂ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ನಡೆದವು.ಕಂಚಾವೀರರು ಪ್ರಾರಂಭದಲ್ಲಿ ತಮ್ಮ ಪವಾಡ ಶಸ್ತ್ರಗಳನ್ನು ಪೂಜಿಸಿದ ನಂತರ ಗುರು ವೆಂಕಪ್ಪಯ್ಯನವರಿಂದ ಆಶೀರ್ವಾದ ಪಡೆದರು. ಅವಿವಾಹಿ ಯವಕರು ತಮ್ಮ ಕಾಲಿನ ಮೀನಗಂಡದಲ್ಲಿ ಸುಮಾರು 4 ಅಡಿ ಉದ್ದದ ಕಬ್ಬಿಣದ ಸರಳನ್ನು ದಾಟಿಸುವ ಪವಾಡ ನೋಡುಗರನ್ನು ಮೈನವಿರೇಳಿಸಿದಂತೆ ಕಂಚಾವೀರರು ಪವಾಡಗಳನ್ನು ನಡೆಸಿಕೊಟ್ಟರು. ದೇವಸ್ಥಾನದ ಇಒ ಹನುಮಂತಪ್ಪ. ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ.ಧಾರ್ಮಿಕ ಇಲಾಖೆ ಆಯುಕ್ತೆ ಸವಿತಾ. ಮತ್ತು ದೇವಸ್ಥಾನದ ಇಒ ಹನುಮಂತಪ್ಪ .ತಹಶಿಲ್ದಾರ ಜಿ. ಸಂತೋಷ ಕುಮಾರ.ತಾ.ಪಂ.ಇಒ ಎಂ.ಉಮೇಶ್. ಡಿವ್ಯೆಎಸ್ಪಿ ವೆಂಕಟಪ್ಪನಾಯ್ಕ.ಸಿಪಿಐ ದೀಪಕ್ ಬೋಸರೆಡ್ಡಿ ಇದ್ದರು.