ಬಲಿಗೆಂದು ಮೀಸಲು ಇಟ್ಟಿದ್ದ ಕೋಣ ಹಸ್ತಾಂತರಿಸಿದ ಗ್ರಾಮಸ್ಥರು
ಕೊಪ್ಪಳ 20: ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಾಮಸಾಗರ ಗ್ರಾಮದ ಬಳಿಕುಂಬಳಾವತಿ ದ್ಯಾಮಂಬಿಕಾ ದೇವಿಗೆ ಬಲಿಗೆಂದು ಮೀಸಲು ಇಟ್ಟಿದ್ದ ಕೋಣವನ್ನು ಕುಂಬಳಾವತಿ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಸರಕಾರಕ್ಕೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ. ಹಾಗೂ ಹನುಮಸಾಗರ ಆರಕ್ಷಕ ಉಪನಿರಿಕ್ಷಕರು ಎಂ ಧನುಠಯ ಮತ್ತು ಗ್ರಾಮದ ಹಿರಿಯರಾದ ಸುಬ್ಬರಾವ್ ಕುಲಕರ್ಣಿ. ಮುತ್ತಣ್ಣ ನರಸಾಪುರ. ಸಿದ್ದಪ್ಪ ಸೂಡಿ. ಶರಣಪ್ಪ ಜಗ್ಗಲ ಹುಲ್ಲಪ್ಪ ವಡಿಗೇರಿ ಸೂಚಪ್ಪ ಭೋವಿ. ಮರೇಗೌಡ ಬೋಧುರು ಕಾರ್ಯಕರ್ತ ಶರಣಪ್ಪ ಕಮ್ಮಾರ ಹಾಗೂ ಗ್ರಾಮದ ಗುರು ಹಿರಿಯರು ಹಾಜರಿದ್ದರು. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಯಲ್ಲಿ ಕರ್ನಾಟಕ ಸರ್ಕಾರ. ಕೊಪ್ಪಳ ಜಿಲ್ಲಾ ಆಡಳಿತ. ಕುಷ್ಟಗಿ ತಾಲೂಕು ಆಡಳಿತ. ಹಾಗೂ ಪೊಲೀಸ್ ಇಲಾಖೆ. ಕುಂಬಳಾವತಿ ಶ್ರೀ ದ್ಯಾಮಾಂಬಿಕಾ ಜಾತ್ರೆಯಲ್ಲಿ ಯಾವುದೇ ಪ್ರಾಣಿಗಳ ಬಲಿಯಾಗದಂತೆ ಮುಂಜಾಗ್ರತವಾಗಿ ವ್ಯಾಪಾಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು. ಸದರಿ ವೇಳೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಸದರಿ ಜಾತ್ರೆಯಲ್ಲಿ ಯಾವುದೇ ಪ್ರಾಣಿ ಬಲಿ ನಡೆಯದೆ ಉತ್ತಮ ರೀತಿಯಲ್ಲಿ ಜಾತ್ರಾ ಮಹೋತ್ಸವ ಆಚರಿಸಿದ ಭಕ್ತ ಗ್ರಾಮಸ್ಥರಿಗೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಎಂ ದಯಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.