ಲೋಕದರ್ಶನ
ವರದಿ
ಗದಗ 30: ಬದುಕು ಒಂದು ಹೂದೋಟ. ಈ ತೋಟದಲ್ಲಿ ಶಾಂತಿ ವಿಶ್ವಾಸ ಪ್ರೀತಿ ವಾತ್ಸಲ್ಯ ಮೊದಲಾದ ದೈವಿ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ ಮತ್ತು ಬಲ ದೊರಕಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ಜಗದ್ಗುರು ಪಂಚಾಚಾರ್ಯ
ಮಾಂಗಲ್ಯ ಮಂದಿರದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಮೃತವಾಹಿನಿ-57
ರಲ್ಲಿ ಪರಮ ತಪಸ್ವಿ ಲಿಂ.
ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ನೆನಹು ನಮನ ಸಮಾರಂಭದ ಸಾನ್ನಿಧ್ಯ
ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನೆಯ ಅಂಗಳ ಕಸಗೂಡಿಸಿ
ಹಸನಗೊಳಿಸಬಹುದು. ಆದರೆ ಮನದ ಅಂಗಳದ
ಕಸವನ್ನು ಹಸನಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಶಾಂತಿ ನೆಮ್ಮದಿಯ ಬದುಕಿಗೆ ಗುರುವಿನ ಜ್ಞಾನ ಬೋಧಾಮೃತವೊಂದೇ ಆಶಾಕಿರಣ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅವಶ್ಯಕ. ಹೊಸತನದ
ಜೊತೆಗೆ ಹಿರಿತನದ ಕಳೆ ಮೇಳೈಸಿದಾಗ ಬದುಕಿಗೆ
ಬೆಲೆ ಬಲ ಬರುವುದರಲ್ಲಿ ಅನುಮಾನವಿಲ್ಲ.
ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭೌತಿಕ ಸಂಪತ್ತನ್ನು ತೃಣ ಸಮಾನವಾಗಿ ಕಂಡವರು.
ಧರ್ಮದ ಅಧ್ಯಾತ್ಮ ಸಂಪತ್ತೇ ನಿಜವಾದ ಸಂಪತ್ತು ಎಂದು ತಿಳಿದು ಭಕ್ತ
ಸಮುದಾಯಕ್ಕೆ ಸಂಸ್ಕಾರ ಸಂಸ್ಕೃತಿ ಅರುಹಿದ ಪರಮಾಚಾರ್ಯರು. ಧರ್ಮ-ಜಾತಿಗಳ ಸಂಘರ್ಷದಲ್ಲಿ
ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಅವರ ಸಂದೇಶ
ಭಾವೈಕ್ಯತೆಗೆ ಹಾಗೂ ಸಾಮರಸ್ಯ ಬದುಕಿಗೆ
ಸಾಕ್ಷಿಯಾಗಿದೆ ಎಂದ ಅವರು ಗದಗ
ಮಹಾನಗರದಲ್ಲಿ ಅವರ 36ನೇ ವರುಷದ ಪುಣ್ಯ
ಸ್ಮರಣೋತ್ಸವದ ಅಂಗವಾಗಿ ನೆನಹು ನಮನ ಸಮಾರಂಭ ಹಮ್ಮಿಕೊಂಡಿರುವುದು
ಹೆಮ್ಮೆಯ ಸಂಗತಿ ಎಂದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ
ಶಿವಾಚಾರ್ಯರು, ಅಡ್ನೂರು ಪಂಚಾಕ್ಷರ ಶಿವಾಚಾರ್ಯರು, ಸೂಡಿ ಡಾ|| ಕೊಟ್ಟೂರು
ಬಸವೇಶ್ವರ ಶಿವಾಚಾರ್ಯರು, ನರೇಗಲ್ಲ ಮಲ್ಲಿಕಾಜರ್ುನ ಶಿವಾಚಾರ್ಯರು, ಅಬ್ಬಿಗೇರಿ ಸೋಮಶೇಖರ ಶಿವಾಚಾರ್ಯರು ಪಾಲ್ಗೊಂಡು ಲಿಂ. ರಂಭಾಪುರಿ ವೀರಗಂಗಾಧರ
ಜಗದ್ಗುರುಗಳವರ ಘನ ವ್ಯಕ್ತಿತ್ವವನ್ನು ಕೊಂಡಾಡಿದರು.
ಗದಗ ಜಿಲ್ಲಾ ಪಂಚಾಯತ
ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ನಗರಸಭಾ ಅಧ್ಯಕ್ಷ ಸುರೇಶ ಕಟ್ಟಿಮನಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಲ್ಲಿಕಾಜರ್ುನ ಸುರಕೋಡ, ಶಿವಣ್ಣ ಮುಳಗುಂದ, ವಿಜಯಕುಮಾರ ಗಡ್ಡಿ, ಮಧುಸೂಧನ ಪುಣೇಕರ, ಕುಮಾರ ಸಂಜಯ ಬಾಗಮಾರ ಮೊದಲಾದವರು
ಗಣ್ಯ ಅತಿಥಿಗಳಾಗಿ ಪಾಲ್ಗೊಂಡು ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಪಡೆದರು.
ಮಹಿಳಾ ಘಟಕದ ಆದ್ಯಕ್ಷೆ ಶಾರದಾ
ಹಿರೇಮಠ, ಕಾರ್ಯದಶರ್ಿ ಲಲಿತಾ ಬಾಳಿಹಳ್ಳಿಮಠ, ಯುವ ಘಟಕದ ಅಧ್ಯಕ್ಷ
ಅನಿಲ ಅಬ್ಬಿಗೇರಿ, ಕಾರ್ಯದಶರ್ಿ ವಿಜಯಕುಮಾರ ಹಿರೇಮಠ, ಬಸವರಾಜ ಕೂಗು ಪಾಲ್ಗೊಂಡಿದ್ದರು.
ಪೀಠದ ಗುರುಕುಲದ ಸಾಧಕರಿಂದ
ವೇದಘೋಷ, ವಿರುಪಾಪೂರ ಮಲ್ಲಯ್ಯಸ್ವಾಮಿ ಹಿರೇಮಠ ಗವಾಯಿಗಳಿಂದ ಭಕ್ತಿ ಸಂಗೀತ ಜರುಗಿತು. ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ
ಬಸಣ್ಣ ಮಲ್ಲಾಡದ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದಶರ್ಿ ವ್ಹಿ.ಕೆ. ಗುರುಮಠ
ನಿರೂಪಿಸಿದರು.