ಸಿರಿಧಾನ್ಯ ಖಾದ್ಯಗಳ ಬಳಕೆ ಹಿ ಸ್ಥಳೀಯ ಸಂಪ್ರದಾಯದ ಉಳಿಕೆ

The use of cereal dishes is a remnant of local tradition

ಸಿರಿಧಾನ್ಯ ಖಾದ್ಯಗಳ ಬಳಕೆ ಹಿ ಸ್ಥಳೀಯ ಸಂಪ್ರದಾಯದ ಉಳಿಕೆ 

ಧಾರವಾಡ 07: ಜನರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆಯನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕಾಗಿದೆಯೆಂದು ಡೀನ್ ಸಮುದಾಯ ವಿಜ್ಞಾನ ಕಾಲೇಜ್ ಕೃಷಿ ವಿಶ್ವವಿದ್ಯಾಲಯದ  ಪ್ರಾಧ್ಯಾಪಕರಾದ ಡಾ. ಹೇಮಲತಾ.ಎಸ್ ಅವರು ತಿಳಿಸಿದರು. 

ಅವರು ಡಿಸೆಂಬರ 5, 2024 ರಂದು ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಬಹಳ ಸಹಾಯಕವಾಗಿವೆ. ಈ ಆಹಾರಗಳ ಲಾಭ ಉಪಯಕ್ತತೆ ಮತ್ತು ಬಳಕೆ ಕುರಿತಂತೆ ಹೆಚ್ಚಿನ ರೀತಿಯಲ್ಲಿ ವ್ಯಾಪಕ ಅರಿವು ಮೂಡಿಸುವ ದಿಶೆಯಲ್ಲಿ ಈ ರೀತಿಯ ಸ್ಪರ್ಧೆಗಳು ಬಹಳಷ್ಟು ಉಪಯೋಗಕಾರಿ ಎಂದು ತಿಳಿಸಿದರು. 

 ಅದೇ ತೆರನಾಗಿ ಪಾರಂಪರಿಕ ಆಹಾರ ಪದ್ದತಿಗಳು ನಶಿಸಿ ಹೋಗುತ್ತಿದ್ದು, ಅಳಿವಿನಂಚಿನಲ್ಲಿವೆ. ಪಾರಂಪರಿಕ ಆಹಾರ ಪದ್ದತಿಗಳ ಪೌಷ್ಟಿಕಾಂಶದ ಮಹತ್ವ ಮತ್ತು ಅವುಗಳ ಪ್ರಯೋಜನಗಳನ್ನು ಮುಂದಿನ ಪೀಳಿಗೆಗೆ ತಿಳಿಪಡಿಸಿ ಸಾಂಪ್ರದಾಯಿಕತೆಯನ್ನು ಮುಂದೆ ಕೊಂಡೊಯ್ಯುವುದು, ಪ್ರಚಲಿತ ಕಾಲಘಟ್ಟದಲ್ಲಿ ಅತೀ ಅವಶ್ಯಕವಾಗಿದೆಯೆಂದು ತಿಳಿಸಿ ಸಾರ್ವಜನಿಕರಲ್ಲಿ ಪ್ರಾಚೀನ ಆಹಾರ ಪದ್ದತಿಗಳ ಬಗ್ಗೆ ಸದಾಭಿಪ್ರಾಯವನ್ನು ಮೂಡಿಸುವಲ್ಲಿ ಈ ರೀತಿಯ ಸ್ಪರ್ಧೆಗಳು ನಿರಂತರವಾಗಿ ನಡೆಯಬೇಕಾದ ಅಗತ್ಯತೆ ಕುರಿತು ತಿಳಿಸಿದರು.  

ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಸಿರಿಧಾನ್ಯಗಳ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಪ್ಯಾಕಿಂಗ್‌ಗಳಿಗೆ ಸರಕಾರದಿಂದ ದೊರೆಯುವ ಸವಲತ್ತು ಮತ್ತು ಸಹಾಯಧನಗಳ ಕುರಿತಂತೆ ವಿವರ ನೀಡಿದರು. 

 ಸ್ಪರ್ಧೆಯಲ್ಲಿ ಹುಬ್ಬಳ್ಳಿ, ಕುಂದಗೋಳ, ಧಾರವಾಡ ಕಲಘಟಗಿ ತಾಲ್ಲೂಕುಗಳಿಂದ 21 ಸ್ಪರ್ಧಾರ್ಥಿಗಳು ಭಾಗವಹಿಸಿ, ನವಣೆ, ಸಜ್ಜೆ, ಹಾರಕ, ಬರಗು, ಸಾವೆ ಹಾಗೂ ಜೋಳದ ಧಾನ್ಯಗಳಿಂದ ತಯಾರಿಸಿದ ಒಟ್ಟು 21 ವಿವಿಧ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು. ಸ್ಪರ್ಧೆಯ ತೀರ​‍್ುಗಾರರಾಗಿ ಡಾ. ಹೇಮಲತಾ ಎಸ್, ಡಾ. ವೀಣಾ ಜಾದವ ಮತ್ತು ಡಾ. ವಿದ್ಯಾ ಸಂಗಣ್ಣವರ ಅವರು ಭಾಗವಹಿಸಿದ್ದರು.  

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕರಾದ ಜಯಶ್ರೀ ಹಿರೇಮಠ, ಡಾ. ಸಂದೀಪ ಆರ್‌.ಜಿ, ಹುಸೇನಸಾಬ, ಸಹಾಯಕ ಕೃಷಿ ನಿರ್ದೇಶಕರಾದ ಗೀತಾ ಕಡಪಟ್ಟಿ, ಸುಷ್ಮಾ ಮಳಿಮಠ ಹಾಗೂ ಕೃಷಿ ಅಧಿಕಾರಿಗಳಾದ ಮಾಲತೇಶ ಪುಟ್ಟಣ್ಣವರ, ಪೃಥ್ವಿ ಟಿ.ಪಿ ಎಂ, ಹರೀಶ, ಶ್ರೀಕಾಂತ ಪಾಟೀಲ, ವಿಜಯಾ ಅಂಗಡಿ, ಕುಮಾರ ಲಮಾಣಿ, ಯಾಸ್ಮಿನ್ ಮುಕಾಸಿ, ಪೂರ್ಣಿಮಾ ಮೇಘಣ್ಣವರ, ಈಓ್ಘಖ ಯೋಜನೆಯ ಸಿಬ್ಬಂದಿ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸರ್ವ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಸಿಹಿ ಖಾದ್ಯಗಳ ವಿಭಾಗದಲ್ಲಿ ಅನಿತಾ ರಾಜು ಅವರು ಪ್ರಥಮ ಸ್ಥಾನ, ವೆಂಕಟೇಶ ಜೋಶಿ ಅವರು ದ್ವಿತೀಯ ಸ್ಥಾನ ಹಾಗೂ  ತನುಜಾ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ. ಖಾರದ ಖಾದ್ಯಗಳ ವಿಭಾಗದಲ್ಲಿ ವಿಜಯಾ ಕುಲಕರ್ಣಿ ಅವರು ಪ್ರಥಮ ಸ್ಥಾನ, ಅಕ್ಷತಾ ಉಪಕಾರಿ ಅವರು ದ್ವಿತೀಯ ಸ್ಥಾನ ಹಾಗೂ ಗಿರಿಜಾ ಸಿಹಿರೇಕಲ್ಲ ತೃತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಶೋಭಾ. ಕು. ಅಡಗಿಮಠ ಅವರು ಪ್ರಥಮ ಸ್ಥಾನ, ಯಲ್ಲವ್ವ ಕದಂ ಅವರು ದ್ವಿತೀಯ ಸ್ಥಾನ ಹಾಗೂ ಕಾವ್ಯಾ. ವಿ. ತೃತೀಯ ಸ್ಥಾನ ಪಡೆದಿದ್ದಾರೆ.