ಸತ್ಯ, ಶುದ್ಧ ಕಾಯಕದಿಂದ ಸಂತೃಪ್ತಿ ಜೀವನ ನಡೆಸಿ: ಡಾ. ಶಿರಹಟ್ಟಿ

ಲೋಕದರ್ಶನ ವರದಿ

ಶಿರಹಟ್ಟಿ 25: ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಸತ್ಯ ಹಾಗೂ ಶುದ್ಧ ಕಾಯಕದಿಂದ ಒಳ್ಳೆಯ ಕೆಲಸ ಮಾಡುವುದರ ಮೂಲಕ ನಿತ್ಯ ಅನ್ನ ದಾಸೋಹ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಅಂದಾಗ ಮಾತ್ರ ಪರಿಶುದ್ದ ಜೀವನ ನಡೆಸಲು ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್.ಆರ್. ಶಿರಹಟ್ಟಿ ಹೇಳಿದರು.

ಅವರು ಸ್ಥಳೀಯ ಪ್ರಭುಲಿಂಗ ಗುರುಸಿದ್ದಪ್ಪ ಹಲಸೂರ ಅವರ ಮಹಾಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ 4ನೇ ವರ್ಷದ ಶ್ರಾವಣ ಶರಣ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯನು ಸತ್ಯ, ಶುದ್ಧ ಕಾಯಕದಿಂದ ದಾನ, ಧರ್ಮದ ಗುಣಗಳನ್ನು ಬೆಳಸಿಕೊಂಡು ಹೋಗಬೇಕು, ಜಾತಿ ಹೆಸರಿನಲ್ಲಿ ಘರ್ಷಣೆ ಮಾಡದೆ, ಮಹಿಳೆಯನ್ನು ಶೋಷಣೆ ಮಾಡದೆ, ನಿನ್ನನ್ನು ನಂಬಿದ ಆಪ್ತರಿಗೆ ಮೋಸ ಮಾಡದೆ, ಧಾಮರ್ಿಕ ಆಚಾರ, ವಿಚಾರಗಳು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ನಂತರ ಹಿರಿಯ ಸಾಹಿತಿ ಕೆ.ಎ. ಬಳಿಗೇರ ಮಾತನಾಡಿ. 12ನೇ ಶತಮಾನದಲ್ಲಿ ಜಾತಿ ಪದ್ದತಿ, ಮಹಿಳೆಯರ ಶೋಷಣೆ, ಕಂದಚಾರಗಳು ತಾಂಡವಾಡುತ್ತಿದ್ದವು. ಇಂತಹ ಸಮಯದಲ್ಲಿ ಬಸವಣ್ಣನವರು ಸಮಾಜದಲ್ಲಿ ಬದಲಾವಣೆ ತರಲು ಕಲ್ಯಾಣದಲ್ಲಿ ಅನುಭವ ಮಂಟಪ ತರೆದರು. ಮಂಟಪದ ಕಿರ್ತನೆ ಹಾಗೂ ವಚನಗಳನ್ನು ಕೇಳಿ ದೇಶ- ವಿದೇಶಗಳಿಂದ ಸಾವಿರಾರು ಶರಣರು, ಕವಿಗಳು, ತತ್ವಜ್ಞಾನಿಗಳು ಬಂದರು. ಅದರಲ್ಲಿ ಸರ್ವ ಜಾತಿಯ ಸರ್ವ ವೃತ್ತಿಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳ ಬಗ್ಗೆ ಚಚರ್ಿಸುತ್ತಿದ್ದರು. ಅಲ್ಲದೇ ಸರ್ವ ಶರಣರು ಕುಡಿಕೊಂಡು ಸಮಾಜದ ಬದಲಾವಣೆಗೆ ನಿತ್ಯ ಶ್ರಮಿಸುತ್ತಿದ್ದರು. ಇಂತಹ ಮಹಾತ್ಮರು ಜನಿಸಿದ ಪುಣ್ಯ ಭೂಮಿಯಲ್ಲಿ ನಾವು ಬದುಕುತ್ತಿದ್ದವೆ. ಅವರ ತತ್ವ ಹಾಗೂ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಂತೃಪ್ತಿ ಜೀವನ ನಡೆಸಬೇಕು ಎಂದು ಹೇಳಿದರು.

ನಂತರ ಶಸಾಪ ತಾಲೂಕಾಧ್ಯಕ್ಷ ಎಫ್.ಎಸ್. ಅಕ್ಕಿ ಮಾತನಾಡಿ. 12ನೇ ಶತಮಾನದ ಅನುಭವ ಮಂಟಪದಲ್ಲಿ 35 ವಚನ ಕಾತರ್ಿಯರು ಹಾಗೂ 300ಕ್ಕೂ ಹೆಚ್ಚು ವಚನಕಾರರು ಕನ್ನಡ ಸಾಹಿತ್ಯವನ್ನು ಉತ್ತುಂಗದಲ್ಲಿ ಮೆರೆಯುವಂತೆ ಮಾಡಿದ್ದಾರೆ. ಕನ್ನಡಲ್ಲಿ ಹೊಸ ಹೊಸ ಕವನ, ಕಥೆ, ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಭಾಷೆಯನ್ನು ವಿಶ್ವ ಮಟ್ಟದಲ್ಲಿ ಬೆಳೆಯುವಂತೆ ಮಾಡಿದ್ದಾರೆ. ಇಂತಹ ಶರಣರ ವಚನಗಳನ್ನು ಇಂದಿನ ಯುವ ಜನಾಂಗ ಅಧ್ಯಯಾನ ಮಾಡಬೇಕು. ಅಲ್ಲದೇ ವಚನಗಳಲ್ಲಿರುವ ಅರ್ಥ, ಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂತಸದ ಜೀವನ ನಡೆಸಬೆಕು ಎಂದರು.

ವಿನಾಯಕ ಹಣಗಿ, ಶಿವಕುಮಾರ ನಾಗನೂರ, ಬಸವರಾಜ ಬಾಳಿಗೇರಿ, ದ್ರಾಕ್ಷಾಯಿಣಿ ಹಲಸೂರ, ಗೀತಾ ಹಲಸೂರ, ಜೋತಿ ಸಜ್ಜನಶಟ್ಟರ, ಬಿ.ಎಸ್. ಹಿರೇಮಠ, ಎಚ್.ಎಂ. ದೇವಗಿರಿ. ಹಾಲಪ್ಪ ಬಿಡ್ನಾಳ, ನಂದೀಶ ಕುಮಾರ ಹಲಸೂರ, ರಮೇಶ ಬಳೂಟಗಿ, ರಾಜು ಮಾತಾಡೆ.ಎಸ್.ಎಲ್. ಮುಳಗುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.