ಪ್ರತಿಕ್ಷಣವೂ ಕಲಿತವನೇ ನಿಜವಾದ ಶಿಕ್ಷಕ

ಧಾರವಾಡ ೧೦: "ಓದುವುದನ್ನು ಕೇವಲ ಹವ್ಯಾಸ ಮಾಡಿಕೊಳ್ಳಬಾರದು. ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ಮಸ್ತಕಕ್ಕೆ ತುಂಬಿಕೊಂಡರೆ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡಲು ಅನುಕೂಲ. ಜೀವನದಲ್ಲಿ ವೈಚಾರಿಕತೆ, ತಾರ್ಕಿ ಕ ಆಲೋಚನೆ, ಸೃಜನಶೀಲತೆ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು.ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾಧನೀಯ ಸಂಗತಿ, ಶಿಕ್ಷಕರು ಈ ಕುರಿತು ಕ್ರಿಯಾ ಸಂಶೋಧನೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಶಿಕ್ಷಕರಿಗೆ ಇಲಖೆಯಿಂದ ಪ್ರಶಂಸೆ ಸಿಗುತ್ತಿರಬೇಕು. ವಿದ್ಯಾರ್ಥಿ ಗಳನ್ನು ವಿಜ್ಞಾನಿಗಳನ್ನಾಗಿ ಮಾಡುತ್ತೇವೆಂದು ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಾಲದು, ನಾನು ವಿಜ್ಞಾನ-ತಂತ್ರಜ್ಞಾನ ಸಚಿವನಾಗಿದ್ದಾಗ ಸ್ವತಃ ವಿಜ್ಞಾನಿಗಳೊಂದಿಗೆ ಕುಳಿತು ಅಧ್ಯಯನ ಮಾಡಿದ್ದು ಇನ್ನೂ ಹಸಿರಾಗಿದೆ, ಹಾಗಾಗಿ ಶಿಕ್ಷಕರೆಲ್ಲ ಪ್ರತಿಕ್ಷಣವೂ ಕಲಿತಾಗ ಮಾತ್ರ ನಿಜವಾದ ಶಿಕ್ಷಕರಾಗಲು ಸಾಧ್ಯ ಎಂದು ಮಾಜಿ ಶಿಕ್ಷಣ ಸಚಿವರು ಹಾಗೂ ಶಾಸಕರಾದ ಬಸವರಾಜ ಹೊರಟ್ಟಿ ನುಡಿದರು.

ಅವರು ಇಂದು ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ರಾಯಾಪುರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜ್ಞಾನ ವಿಕಾಸ ಕೇಂದ್ರದಲ್ಲಿ ಅವ್ವ ಸೇವಾ ಟ್ರಸ್ಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಧಾರವಾಡ ಜಿಲ್ಲಾ ಪ್ರೌಢಶಾಲೆಗಳಲ್ಲಿ ವಿಜ್ಞಾನ ಬೋಧಿಸುವ ಶಿಕ್ಷಕರ ಜಿಲ್ಲಾ ಪರಿವಾರಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳಲ್ಲಿ ವಿಜ್ಞಾನ ಬೋಧಿಸುವ ಶಿಕ್ಷಕರ ಒಂದು ದಿನದ ಕಾಯರ್ಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜ್ಞಾನ ವಿಕಾಸ ಕೇಂದ್ರದ ನಿದರ್ೆಶಕರಾದ ಡಾ.ಪ್ರಕಾಶ ಭಟ್ಅವರು ಮಾತನಾಡಿ "ಎಲ್ಲ ಧರ್ಮಗಳಲ್ಲೂ ವೈಜ್ಞಾನಿಕ ಮನೋಭಾವನೆ ಬೆಳೆಯಬೇಕು, ಮಕ್ಕಳಲ್ಲಿ ಆಸಕ್ತಿ ಹುಟ್ಟುಹಾಕುವ ಪ್ರಯತ್ನ ಶಿಕ್ಷಕ ಮಾಡಬೇಕು. ಅನೇಕ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಜ್ಞಾನವೇ ಅಂತಿಮ. ಕ್ವಾಂಟಂ ಸಿದ್ಧಾಂತ, ಹೇಸನ್ಬರ್ಗರವರ ಸಿದ್ಧಾಂತಗಳನ್ನು ಅರ್ಥೈ ಸಿಕೊಳ್ಳರಿ" ಎಂದು ನುಡಿದರು.

ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಸ್ಥೆಯ ನಿರ್ದೇ ಶಕರಾದ ಡಾ.ಮಹೇಶ ದೇಸಾಯಿ ಮಾತನಾಡಿ "ಒಡೆದ ಕುಟುಂಬಗಳಿಂದ ಬಂದ ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ತಿರಸ್ಕೃತ ಮಕ್ಕಳಲ್ಲಿ ಮಾತ್ರ ಮನೋವೈಜ್ಞಾನಿಕ ಸಮಸ್ಯೆಗಳಿರುವುದಿಲ್ಲ, ಎಲ್ಲರಲ್ಲೂ ಇಂದಿನ ಜೀವನಶೈಲಿಯ ಪ್ರಭಾವದಿಂದ ಮಾನಸಿಕ ಅಸ್ವಸ್ಥತೆ ಎದ್ದು ಕಾಣುತ್ತದೆ. ನಾವೆಲ್ಲ ಗಮನಿಸಿ, ಗುರುತಿಸಿ ವೈದ್ಯರಲ್ಲಿಗೆ ಕೂಡಲೇ ಕಳುಹಿಸುವ ಕಾರ್ಯ ಮಾಡಬೇಕು" ಎಂದು ನುಡಿದರು.

ಡಿಮ್ಹಾನ್ಸ್ ಧಾರವಾಡದ ಸಹ ಪ್ರಾದದ್ಯಾಪಕರಾದ ಡಾ.ಗಾಯತ್ರಿ ಹೆಗಡೆ "ಡಿಸ್ ಲೆಕ್ಸಿಯಾ" ಕುರಿತು ಉಪನ್ಯಾಸ ನೀಡಿದರೆ, ಎಸ್.ಎಸ್.ಎಲ್.ಸಿ ವಿಜ್ಞಾನ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾದ ಸಂತೋಷ ನಾಯ್ಕ "ವಿಜ್ಞಾನ ಪ್ರಶ್ನೆ ಪತ್ರಿಕೆ ವಿನ್ಯಾಸ" ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕರಾದ ಗಜಾನನ ಮನ್ನೀಕೇರಿ ಅವರು ಮಾತನಾಡಿ "ಶಿಕ್ಷಕರಲ್ಲಿ ಸ್ಪಧರ್ಾತ್ಮಕವಾಗಿ ಮಕ್ಕಳನ್ನು ತಯಾರಿಸುವ ಛಲ ಬೇಕು. ಪರೀಕ್ಷೆಯಲ್ಲಿ ಗುಣಾತ್ಮಕ ಅಂಕ ಗಳಿಸುವಂತೆ ಶ್ರಮವಹಿಸಬೇಕು. ಕಾಯರ್ಾಗಾರಗಳಿಂದ ನವಚೈತನ್ಯ ಲಭಿಸುತ್ತದೆ, ಇದು ಮಕ್ಕಳಿಗೆ ತಲುಪಬೇಕು" ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ವಿಜ್ಞಾನ ವಿಷಯ ಪರಿವೀಕ್ಷಕರಾದ ಸಂಜಯ ಮಾಳಿ ಪ್ರಸ್ತಾವಿಕವಾಗಿ ಮಾತನಾಡುತ್ತ "ವಿಜ್ಞಾನ ಶಿಕ್ಷಕರೆಂದರೆ ಶಿಸ್ತು, ಸಂಯಮ ಮತ್ತು ಕಠಿಣ ಪರಿಶ್ರಮಕ್ಕೆ ಅನ್ವರ್ಥಕನಾಮ. ಈ ಕಾರ್ಯಾ ಗಾರದಿಂದ ಉತ್ತಮ ಕೌಶಲಗಳನ್ನು ರೂಢಿಸಿಕೊಂಡು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ" ಎಂದು ನುಡಿದರು.

ಕಾರ್ಯಾ ಗಾರದಲ್ಲಿ ಬಿಇಒಗಳಾದ ವಿದ್ಯಾ ನಾಡಿಗೇರ, ಉಮಾದೇವಿ ಬಸಾಪೂರ, ಇಲಾಖೆಯ ಅಧಿಕಾರಿಗಳಾದ ಬಸವಲಿಂಗಯ್ಯ ದುಬ್ಬದಮರಡಿ, ಪೂಣರ್ಿಮಾ ಮುಕ್ಕುಂದಿ, ರೇಖಾ ಭಜಂತ್ರಿ, ಪ್ರಕಾಶ ಭೂತಾಳೆ, ಕ್ಷೇತ್ರ ಸಮನ್ವಯಾಧಿಕಾರಿಗಳು, ಇಸಿಒಗಳು ಪಾಲ್ಗೊಂಡಿದ್ದರು.

ಶ್ರೀಧರ ಪಾಟೀಲ ಕುಲಕರ್ಣಿ ನಿರೂಪಿಸಿದರು, ನಾಗರಾಜ ಬೋಗಾರ ಸ್ವಾಗತಿಸಿದರು, ಟಿ.ಎಸ್.ಚೌಗಲೆ ಪ್ರಾರ್ಥಿ ಸಿದರು, ಸುಜಾತಾ ಚವ್ಹಾಣ ವಂದಿಸಿದರು, ವಿ.ಎಸ್.ರೇಶ್ಮಿ, ವಿರುಪಾಕ್ಷಪ್ಪ ಹುದ್ದಾರ, ಡಿ.ಪಿ.ದೊಡ್ಡಮನಿ, ಸಂಜೀವಕುಮಾರ ಭೂಶೆಟ್ಟಿ, ಸಾಯಿಬಣ್ಣ ರೂಗಿ, ಎನ್.ಸಿ.ಪಾಟೀಲ. ಪ್ರಮೋದ ವಾದೀರಾಜ, ಪ್ರಕಾಶ ಭೂತಳ, ಆರ್.ಸಿ.ಪಾಟೀಲ, ಬಿ.ಡಿ.ಹೊಳೆಯಣ್ಣವರ ವೈ.ಜಿ.ಕರೀಕಟ್ಟಿ, ಸಂತೋಷ ವಿಜಾಪೂರ  ಮುಂತಾದವರು ಉಪಸ್ಥಿತರಿದ್ದರು. ಕಾರ್ಯಾ ಗಾರದಲ್ಲಿ ಒಟ್ಟು 413 ಜನ ಪ್ರೌಢಶಾಲೆ ಶಿಕ್ಷಕರು ಭಾಗವಹಿಸಿದ್ದರು.