ಶಬರಿಮಲೆಯಲ್ಲಿ ಬಿಗುವಿನ ಪರಿಸ್ಥಿತಿ, ಹೆಚ್ಚಿನ ಭದ್ರತೆ

ಕೊಚ್ಚಿ,  26  ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಮಂಗಳವಾರ ಕೇರಳ ಶಬರಿಮಲೆ ದೇವಾಲಯದ ಪ್ರವೇಶಕ್ಕೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.    ನಾನು ಇಂದು ಏನೇ ಆಗಲಿ ದೇವರ ದರ್ಶನ ಪಡೆದೇ ತೀರುತ್ತೇನೆ. ಯಾರಾದರೂ ನನಗೆ ಅಡ್ಡಿ ಮಾಡಿದರೆ ಕೋಟರ್್ ಮೊರೆ ಹೋಗುತ್ತೇನೆ. ಈಗಾಗಲೇ ಸುಪ್ರೀಂಕೋಟರ್್ ಎಲ್ಲ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಹುದು ಎಂದು ತೀಪು ಕೊಟ್ಟಿದೆ. ಈಗ ಸುಪ್ರೀಂಕೋರ್ಟ  ನ ವಿಸ್ತೃತ ಪೀಠ ವಿಚಾರಣೆ ನಡೆಸುತ್ತಿದ್ದರೂ, ಹಿಂದಿನ ಆದೇಶಕ್ಕೆ ತಡೆ ಕೊಟ್ಟಿಲ್ಲ. ಇದನ್ನು ಪ್ರತಿಭಟನಾಕಾರರು ಅರಿತುಕೊಳ್ಳಬೇಕು ಎಂದು ತೃಪ್ತಿ ದೇಸಾಯಿ ತಿರುಗೇಟು ಕೊಟ್ಟಿದ್ದಾರೆ.    ನಾನು ಶಬರಿಮಲೆಗೆ ಬರುವ ವಿಚಾರವನ್ನು ಪೊಲೀಸ್ ಅಧಿಕಾರಿಗಳಿಗೆ ಮೊದಲೇ ತಿಳಿಸಿ, ರಕ್ಷಣೆ ಕೊಡುವಂತೆ ಮನವಿ ಮಾಡಿದ್ದೇನೆ. ಆದರೆ ನನ್ನ ಮನವಿಗೆ ಪೊಲೀಸರು ಸ್ಪಂದಿಸಿಲ್ಲ. ಇದೂ ಕೂಡ ನ್ಯಾಯಾಲಯದ ಉಲ್ಲಂಘನೆಯಾಗಲಿದೆ ಎಂದಿದ್ದಾರೆ.    ಈ ನಡುವೆ ಅಯ್ಯಪ್ಪ ದೇವಾಲಯದ ಕರ್ಮ ಸಮಿತಿ ಸದಸ್ಯರು ತೃಪ್ತಿ ದೇಸಾಯಿ ಅವರನ್ನು ದೇವಾಲಯದ ಆವರಣ ಪ್ರವೇಶ ಮಾಡದಂತೆ ತಡೆಯಲು ಸಿದ್ಧರಾಗಿದ್ದಾರೆ. ಹೀಗಾಗಿ ಅಲ್ಲಿ ಒಂದು ರೀತಿ ಬಿಗುವಿನ ವಾತಾವರಣ ನಿಮರ್ಾಣವಾಗಿದೆ. ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.