ಶಿಕ್ಷಕರಲ್ಲಿರುವ ಪ್ರತಿಭೆ ಅನಾವರಣಗೊಳ್ಳಬೇಕು: ನರಸನಗೌಡರ

ಲೋಕದರ್ಶನ ವರದಿ

ಮುಧೋಳ 21: ಶಿಕ್ಷಕರಲ್ಲಿಯೂ ಸಹ ಹಲವಾರು ಪ್ರತಿಭೆಗಳಿದ್ದು ಅವುಗಳ ಕೇವಲ ನಾಲ್ಕು ಗೋಡೆಯ ಮದ್ಯ ಮಾತ್ರ ಉಪಯೋಗವಾಗದೆ ಸಮಾಜದ ಎದುರಿಗೆ ಪ್ರಜ್ವಲಿಸಬೇಕಾಗಿದೆ ಎಂದು ಬಿಆರ್ಸಿಓ ಮಹಾಂತೇಶ ನರಸನಗೌಡರ ಹೇಳಿದರು. ಅವರು ನಗರದ ರನ್ನ ಮಾದರಿ ಶಾಲೆಯ ಆವರಣದಲ್ಲಿ ಶಿಕ್ಷಕರ ಕಲ್ಯಾಣ ನಿದಿ,ಬೆಂಗಳೂರು,ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷನಾಧಿಕಾರಿಗಳ ಕಾಯರ್ಾಲಯದ ಆಶ್ರಯದಲ್ಲಿ ನಡೆದ 2018-19 ನೇ ಸಾಲಿನ ಮುಧೋಳ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪಧರ್ೆಗಳಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ಪ್ರತಿಯೋರ್ವ ಶಿಕ್ಷಕರಲ್ಲಿಯೂ ಒಂದು ವಿಶೇಷ ಪ್ರತಿಭೆಯಿದ್ದ ಅದನ್ನು ಪ್ರದರ್ಶನ ಮಾಡಲು ಯಾವೂದೇ ಹಿಂದೇಟು ಹಾಕದೆ  ಸಕರ್ಾರದ ಈ ವೇದಿಕೆಯನ್ನು ಸದೂಪಯೋಗಪಡಿಸಿಕೊಳ್ಳಿ,  ಸ್ಪಧರ್ಾತ್ಮಕ ಯುಗದಲ್ಲಿ ಶಿಕ್ಷಕರಲ್ಲಿನ ಪ್ರತಿಭೆಗಳನ್ನು ಹೊರಹೊಮ್ಮಿಸಲು ಸಹಪಠ್ಯ ಚಟುವಟಿಕೆಗಳು ಅಗತ್ಯವಾಗಿವೆ. ನಮ್ಮ ತಾಲ್ಲೂಕಿನ ಶಿಕ್ಷಕರು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಹೆಸರನ್ನು ತರುವ ಕಾರ್ಯ ನಮ್ಮ ಶಿಕ್ಷಕರ ಮೇಲಿದೆ ಎಂದು ಅವರು ಹೇಳಿದರು.

ಚಿತ್ರ ಬರೆಯುವ ಮೂಲಕ ಚಾಲನೆ ನೀಡಿದ ಮಂಟೂರ ಸಕರ್ಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್.ಟಿ.ಶಿವಶರಣರ ಮಾತನಾಡಿ ತಾಲ್ಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ  ಪ್ರತಿಭೆಗಳಿದ್ದರೂ ಇಂತಹ ವೇದಿಕೆಯನ್ನು ಸದೂಪಯೋಗ ಮಾಡಿಕೊಳ್ಳದಿರುವದು ವಿಷಾದದ ಸಂಗತಿ, ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು  ಹೇಳಿದರು.

     ಸಹ ಪಠ್ಯೇತರ ಚಟುವಟಿಕೆಗಳ ನೋಡಲ್ ಅಧಿಕಾರಿ ಎಸ್.ಎಸ್.ತಾರಾಪುರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಎಸ್.ಎ.ಗೋಟ್ಯಾಳಕರ, ಸಂಗೀತ ಮತ್ತು ನೃತ್ಯ ಅಕಾಡೆಮಿಯ ಹಣಮಂತ ಸೋರಗಾವಿ, ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ  ಪ್ರಾಧ್ಯಾಪಕ ಎಂ.ಎಸ್ ಪಟ್ಟಣಶೆಟ್ಟಿ, ಎಸ್.ಆರ್.ಕಂಠಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಈರಣ್ಣ ಕಿತ್ತೂರ, ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ, ಚಿತ್ರಕಲಾ ಶಿಕ್ಷಕರ ಸಂಘದ ತಾಲ್ಲೂಕಾ ಅಧ್ಯಕ್ಷ ಎ.ಎಸ್.ಶೇಗುಣಸಿ  ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಸ್ಪಧರ್ೆಗಳಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪುರಸ್ಕಾರ, ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಬಿ ಆರ್ ಸಿ ಕೇಂದ್ರದ ಎಲ್ಲ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.ಸಿ.ಆರ್.ಪಿ.ಮಂಜುಳಾ ಕಲ್ಯಾಣಿ ಪ್ರಾಥರ್ಿಸಿದರು. ಬಿ.ಆರ್.ಪಿ ವಿ.ಎಸ್.ಉಪ್ಪಿನ ಸ್ವಾಗತಿಸಿದರು. ಬಿ.ಆರ್.ಪಿ ಎಸ್.ಎಂ.ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಬಿ.ಐ.ಇ.ಆರ್.ಟಿ ಮಹೇಶ ದಿವಾಣ ವಂದಿಸಿದರು.