ಕಳಪೆ ಕ್ರಿಯಾಯೋಜನೆ ರೂಪಿಸಿದ ಅಧಿಕಾರಿಗಳ ಅಮಾನತು: ಮುಖ್ಯಮಂತ್ರಿಗಳಿಗೆ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ 24:ಜೀತವಿಲ್ಲವೆಂದು ಸಾರುವ ಸರಕಾರ ಜೀತದಾಳುಗಳ ಬಗ್ಗೆ ಕಳಪೆ 2018 ರ ಕ್ರಿಯಾಯೋಜನೆಯನ್ನು ರೂಪಿಸಿದ ಅಧಿಕಾರಿಗಳನ್ನು  ಸೇವೆಯಿಂದ ಅಮಾನತುಗೋಳಿಸಬೇಕು  ಎಂದು ಜೀತದಾಳು ಮತ್ತು ಕೃಷಿ ಕಾಮರ್ಿಕರ ಒಕ್ಕೂಟದ ರಾಜ್ಯಾದ್ಯಾಕ್ಷರಾದ ಕಿರಣ ಕಮಲ ಪ್ರಸಾದ ಕನರ್ಾಟಕದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೆಡೆದ ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಸಮಸ್ಯೆಗಳು ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ತೆಲೆಕೆಡಿಸಿಕೊಳ್ಳದ ಅಧಿಕಾರಿಗಳು ನಮಗೆ ಬೇಡವೇ ಬೇಡ ನಮಗೆ ಕೆಲಸ ಮಾಡುವ ಅಧಿಕಾರಿಗಳು ಬೇಕೆ ಹೊರತು ರಾಜಕೀಯ ಮಾಡುವ ಅಧಿಕಾರಿಗಳು ಬೇಡ ಎಂದು  ಅಧಿಕಾರಿಗಳ ಮೇಲೆ ಹರಿಹಾಯ್ದರು.

ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೂ ಬಡ ಜನರಿಗೆ ನ್ಯಾಯ ನೆಮ್ಮದಿ ಒದಗಿಸಬೇಕೆಂದು ಹಂಬಲಿಸುತ್ತಿರುವ ನಿಷ್ಟಾವಂತ ಅಧಿಕಾರಿಗಳು ತೆಲೆತಗ್ಗಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಬರುವ ಪೆಬ್ರುವರಿ ತಿಂಗಳು ರಾಜ್ಯ ಮಟ್ಟದ ಸಮಾವೇಶವನ್ನು ಶಾಸಕರ ಸಬಾಭವನದಲ್ಲಿ ಹಮ್ಮಿಕೊಳ್ಳಲು ಕ್ರಿಯಾಯೋಜನೆ ಮಾಡಿದ್ದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಾವೇಶ ಚಾಲನೆ ಗೊಳ್ಳಲಿದೆ ಅದರಲ್ಲಿ ಎಲ್ಲಾ ಇಲಾಖೆಯ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಹೇಳಿದರು.

ಮಾಜಿ ಜಿಲ್ಲಾ ಸಂಚಾಲಕ ತಿಪ್ಪಣ್ಣಾ ಕ್ಯಾಲಕೊಂಡ ಮಾತನಾಡಿ ಜಿಲ್ಲಾ ಮಟ್ಟದ ಸಮಾವೇಶವನ್ನು ಕೈಗೊಂಡು ಜಿಲ್ಲಾಧಿಕಾರಿಗಳು,ಉಪವಿಬಾಗಾಧಿಕಾರಿಗಳು, ತಾಲೂಕ ದಂಡಾದಿಕಾರಿಗಳು, ಗ್ರಾಮ ಲೆಕ್ಕಾದಿಕಾರಿಗಳು, ಚುನಾಯಿತ ಪ್ರತಿನಿದಿಗಳು ಎಲ್ಲರೂ ಉಪಸ್ಥಿತರಿರುವಂತೆ ಮಾಡಿ ಜೀತ ಪದ್ದತಿಯ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೆಕೆಂದರು. ಸಮಾಜಸೇವಕ ಹಾಗೂ ನ್ಯಾಯವಾದಿಗಳಾದ ಬಸವರಾಜ ಜೇಕಿನಕಟ್ಟಿ ಮಾತನಾಡಿ ಅಂಬೇಡ್ಕರ ತತ್ವದಡಿಯಲ್ಲಿ ಸುಮಾರು  ವರ್ಷಗಳಿಂದ ಅನೇಕ ಕೆಲಸ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ಇವರು ತಮ್ಮ ಜೀವನವನ್ನು ಜೀತ ವಿಮುಕ್ತ ಕನರ್ಾಟಕಕ್ಕೆ ಮೀಸಲಿರಿಸಿದ್ದಾರೆ ಎಂದರು. ನ್ಯಾಯವಾದಿ ಮಾರುತಿ ವಾಲ್ಮೀಕಿ ಮಾತನಾಡಿ ಜೀತಪದ್ದತಿಯ ಬಗ್ಗೆ ಇರುವ ಆಯೋಗಗಳು ಹೆಸರಿಗೆ ಮಾತ್ರ ಇವೆ ಎಂದು ಮಾಮರ್ಿಕವಾಗಿ ಹೇಳಿದರು.

ಈ ಸಂದರ್ಭದಲ್ಲಿ ಜೀವಿಕ ಜಿಲ್ಲಾದ್ಯಕ್ಷ ಸುರೇಶ ಹರಿಜನ, ಹನುಂತಪ್ಪ ಮಾದರ, ಅಶೋಕ ಕಾಳೆ, ನಾಗರಾಜ ಹರಿಜನ, ನೀಲಪ್ಪ ಹರಿಜನ, ಬಸವರಾಜ ಹರಿಜನ, ಕರಿಯಪ್ಪ ಹರಿಜನ, ಹೊನ್ನಪ್ಪ ಹರಿಜನ ಮುಂತಾದವರು ಉಪಸ್ಥಿರಿದ್ದರು.