ಕಬ್ಬು ಬೆಳೆಗಾರ ಬೃಹತ್ ಸಮಾರವೇಶ

ಲೋಕದರ್ಶನ ವರದಿ

ಮೂಡಲಗಿ: ಇಲ್ಲಿಯ ಬಸವರಂಗ ಮಂಟಪದಲ್ಲಿ ದಿ.05ರಂದು ಕಬ್ಬು ಬೆಳೆಗಾರರ ಹಿತರಕ್ಷಣಾ ವೇದಿಕೆಯು ಹಮ್ಮಿಕೊಂಡ ಪಕ್ಷಾತೀತ ಕಬ್ಬು ಬೆಳೆಗಾರ ಬೃಹತ್ ಸಮಾವೇಶದಲ್ಲಿ  ಈ ಹಂಗಾಮಿನಲ್ಲಿ ಪ್ರಾರಂಭವಾದ ಸಕ್ಕರೆ ಕಾಖರ್ಾನೆಗಳು ಹಳೆ ಬಾಕಿ ನೀಡಿ, ಪ್ರಸಕ್ತ ಸಾಲಿನ ದರ ನಿಗದಿ ಮಾಡಲು ಮೂರು ದಿನ ಗಡುವು ನೀಡಿ, ಸರಕಾರ ರೈತರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು, ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಲೆ ನಿಗದಿ, ಕೇಂದ್ರ ಸರಕಾರ ಜಾರಿಗೊಳಿಸಿರುವ ಎಫ್ಆರ್ಪಿ ದರ ನಿಗದಿ ಪಡಿಸಬೇಕೆಂದು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.        

ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ಮಹಾರಾಷ್ಟ್ರದಲ್ಲಿ ಕಬ್ಬಿ ಬೆಲೆ 3155 ಇದ್ದು ರಾಜ್ಯದಲ್ಲಿ ಇರುವ ಕಾಖರ್ಾನೆಗಳು ಬೇರೆ ಬೇರೆ ರೀತಿಯಲ್ಲಿ ದರ ನಿಗದಿ ಪಡಿಸಿ ತಾರತಮ್ಯ ಮಾಡುತ್ತಿರುವದು ಸರಿಯಲ್ಲ, ಮಹಾರಾಷ್ಟ್ರ ಮತ್ತು ಕನರ್ಾಟಕದಲ್ಲಿ ಹರಿಯು ನೀರು, ಭೂಮಿ, ಗಾಳಿ, ಕಬ್ಬಿ ಇಳುವರಿ ಸಹ ಎಲ್ಲ ಒಂದೇ ಇದ್ದು ಆದರೆ  ಕನರ್ಾಟಕದಲ್ಲಿ ಕಬ್ಬು ದರದಲ್ಲಿ ಉದಟ್ಟತ್ತನ ಏಕೆ ಎಂದು ಪ್ರಶ್ನಿಸಿದ ಅವರು  ರಾಜ್ಯದಲ್ಲಿ ಸಕ್ಕರೆ  ಕಾಖರ್ಾನೆ ಮಾಲಿಕರು ಕಬ್ಬು ದರ ನಿಗದಿ ಮಾಡಬೇಕು, ಕಾಖರ್ಾನೆಯು ರೈತ ವಿರೋಧಿ ಅನುಸರಿಸಿದರೆ ನಾವೇ ಬಲವಂತವಾಗಿ ಕಾಖರ್ಾನೆಯ ಬಾಗಿಲನ್ನು ಬಂದ ಮಾಡಲು ಮುಂದಾಗುತ್ತೆವೆ ಇದಕ್ಕೆ ಜಿಲ್ಲಾ ಆಡಳಿತ ಅವಕಾಶ ನೀಡದೇ ರೈತರ ಹಿತ ಕಾಪಡುವಲ್ಲಿ ಮುಂದಾಗಬೇಕು ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾ ಆಡಳಿತವೇ ಹೊಣೆಯಾಗುವದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. 

ನ.30 ರಂದು ದೆಹಲಿಯ ರಾಮ ಲೀಲಾ ಮೈದಾನದಲ್ಲಿ ನಡೆಲ್ಲಿರುವ ರೈತರ ಸಮಾವೇಶದಲ್ಲಿ ಸುಮಾರು 20 ಲಕ್ಷ ರೈತರು ಸೇರಲಿದು ರಾಜ್ಯದಿಂದ ಸಮಾವೇಶದಲ್ಲಿ ಭಾಗವಹಿಸುವರು  ನ.27ರ ಮುಂಚೆ ಹೆಸರು ನೊಂದಾಯಿಸಲು ಮನವಿ ಮಾಡಿಕೊಂಡರು.  

  ಮಹಾರಾಷ್ಟ್ರ ಸಂಸದ ಮತ್ತು ಸೇತ್ಕ್ಕರಿ ಸಂಘಟನೆಯ ರಾಜ್ಯಾಧ್ಯಕ್ಷ ರಾಜು ಶೇಟ್ಟಿ ಮಾತನಾಡಿ, ಕಳೆದ 25 ವರ್ಷಗಳಿಂದ ಸತತ ಹೋರಾಟ ಮಾಡಿ ರೈತರಿಗೆ ನ್ಯಾಯ ಒದಗಿಸಿ ಕೊಟ್ಟಿದೆನ್ನೆ, ಎರಡು ಲಕ್ಷ ರೈತರನ್ನು ಸೇರಿಸಿ ಸಮಾವೇಶ ನಡೆಸಿ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಕನಿಷ್ಠ 2700 ಗರಿಷ್ಠ 3100 ಒಂದೇ ಕಂತಿನಲ್ಲಿ ಕಬ್ಬಿನ ದರ ಪಡೆದುಕೊಂಡಿದವೆ. ಸಂಘರ್ಷದಿಂದ ಮಾತ್ರ ನ್ಯಾಯ ಪಡಯಲ್ಲು ಸಾಧ್ಯ ಭಾಷಣದಿಂದ ಕ್ರಾಂತಿಯಾಗುವದಿಲ್ಲ,  ಕನರ್ಾಟಕದಲ್ಲಿ ಇಂತಹ ಹೋರಾಟ ಅನಿವಾರ್ಯ, ಒಂದು ಗಣಿಕೆ ಕಬ್ಬನ್ನು ಕಾಖರ್ಾನೆಗಳಿಗೆ ಕಳುಹಿಸದೆ ದರ ನಿಗದಿಗೆ ಹೋರಾಟಕ್ಕೆ ಮುಂದಾದರೆ ಕಬ್ಬು ಬೆಳೆಗಾರರ ಕೈ ಬಲಪಡಿಸಲು ನಾನು ಸದಾ ಸಿದ್ಧನಿದ್ದೆನೆ ಎಂದು ಹೇಳಿ ರೈತರಿಗೆ  ಆತ್ಮ ಸ್ಥೈರ್ಯ ತುಂಬಿದರು. 

ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ ಮಾತನಾಡಿ, ಕಬ್ಬಿನ ಸಮಸ್ಯೆ ಸೂಕ್ಷಮ ಸಮಸ್ಯೆಯಾಗಿದು, ಸರಕಾರ ಸರಿಯಾದ ನಿರ್ಣಯ ಕೈಗೊಳ್ಳದೆ ಸಕ್ಕರೆ ಕಾಖರ್ಾನೆಗಳ ಲಾಭಿಗೆ ಮಣಿದು, ಕಬ್ಬು ಖರೀದಿ ಮತ್ತು ನಿಯಂತ್ರಣ ಮಂಡಳಿ ಇದ್ದರು ಸಹ ರೈತರಿಗೆ ನ್ಯಾಯಯುತ ಬೆಲೆ ನೀಡುತ್ತಿಲ್ಲ. ಸುಪ್ರೀಂ ಕೋರ್ಟ ಅಷ್ಟೇ ಅಲ್ಲದೆ ಹೈಕೋರ್ಟಗಳು ಆದೇಶ ನೀಡಿದರು ಕವಡೆ ಕಾಸಿನ ಕಿಮ್ಮತ್ತಿಲ್ಲದೆ ರೈತ ವಿರೋಧಿಯಾಗಿ ಕೆಲಸ ನಿರ್ವಹಿಸುತ್ತಿರುವದು ವಿಷಾದನೀಯ. ರೈತರ ಕಬ್ಬಿನ ಬಿಲ್ಲ ಬಾಕಿ ಉಳಿಸಿಕೊಂಡಿರು ಶಾಸಕ ಮತ್ತು ಸಚಿವರ ಮಾಲಿಕತ್ವದಲ್ಲಿರುವರನ್ನು ರೈತರಿಗೆ ಬಿಲ್ಲ ನೀಡಿ ಸದನಕ್ಕೆ ಬರಬೇಕೆಂದು ಕರೆ ನೀಡಬೇಕೆಂದು ಮುಖ್ಯ ಮಂತ್ರಿ ಕುಮಾರಸ್ವಾಮಿಯವರನ್ನು ಆಗ್ರಹಿಸಿದರು. 

ರೈತ ಮುಖಂಡ ಕುರುಬೂರ ಶಾಂತಕುಮಾರ ಮಾತನಾಡಿ, ಸಕ್ಕರೆ ಕಾಖರ್ಾನೆಗಳು ಕಬ್ಬು ಬೆಳೆಯ ವೈಜ್ಞಾನಿಕ ಬೆಲೆ ನಿಗದಿ ಮಾಡದಿದ್ದರೇ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. 

ಈರಣ್ಣಾ ಕಡಾಡಿ, ಅಶೋಕ ಪೂಜೇರಿ, ಪ್ರಕಾಶ ಸೋನವಾಲ್ಕರ, ಬಿ.ಜಿ.ಗಡಾದ, ಅರವಿಂದ ದಳವಾಯಿ, ಲಖ್ಖನ್ ಸವಸುದ್ದಿ ಮಾತನಾಡಿದರು. 

ವೇದಿಕೆಯಲ್ಲಿ ಕಲ್ಯಾಣರಾವ್ ಮುಚಳಂಬಿ, ಬಿ.ಬಿ.ಹಂದಿಗುಂದ, ಪಚ್ಚೆ ನಂಜುಂಡ ಸ್ವಾಮಿ, ಕೆ.ಟಿ.ಪಾಟೀಲ, ಭೀಮಶಿ ಹುಲಕುಂದ, ಚಮರಾಸ್ ಮಾಲಿಪಾಟೀಲ, ಸತೀಸ ಒಂಟಗೂಡಿ, ಎಮ್.ಟಿ.ಪಾಟೀಲ, ಶಿಲ್ಪಾ ಗೋಡಿಗೌಡರ್, ವಿವಿಧ ಜಿಲ್ಲೆಗಳ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.

 ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಶ್ರೀಶೈಲ್ ಅಂಗಡಿ ನಿರೂಪಿಸಿದರು, ಚೂನಪ್ಪ ಪೂಜೇರಿ ವಂದಿಸಿದರು.