ಹಿಡಕಲ್ ಆನೆಕಟ್ಟೆಯಿಂದ ಕೃಷ್ಣಾ ನದಿಗೆ 1 ಟಿ.ಎಂ.ಸಿ ನೀರು ಹರಿಸಲು ರಾಜ್ಯದ ಜಲ ಸಂಪನ್ನಮೂಲ ಸಚಿವ ಡಿ.ಕೆ.ಶಿವಕುಮಾರ ಆದೇಶ.

ಕಾಗವಾಡ 18: ಕಳೆದ ಎರಡು ತಿಂಗಳಗಳಿಂದ ಕೃಷ್ಣಾ ನದಿ ಬತ್ತಿಹೋಗಿದ್ದು, ನದಿಯಲ್ಲಿ ನೀರು ಹರಿಸಲು ಮಹಾರಾಷ್ಟ್ರ ಸಕರ್ಾರಕ್ಕೆ ಮನವಿ ಮಾಡಿಕೊಂಡರು ನೀರು ಹರಿಸದೆ ಇದಿದ್ದರಿಂದ ಕೃಷ್ಣಾ ನದಿ ತೀರದ ಜನರಿಗೆ ನೀರಿಲ್ಲದೇ ಆಗುತ್ತಿರುವ ಸಮಸ್ಯೆಗಳು ಎದುರಿಸಲು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ 1 ಟಿ.ಎಂ.ಸಿ ನೀರು ಬಿಡಲು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆಯೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಪತ್ರಿಕೆಗೆ ಮಾಹಿತಿ ನೀಡಿದರು.

ಶನಿವಾರ ರಂದು ಬೆಂಗಳೂರಿನಿಂದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುವಾಗ, ಕೃಷ್ಣಾ ನದಿಗೆ ನೀರಿಲ್ಲದೇ ಬತ್ತಿಹೋಗಿದ್ದರಿಂದ ಕಾಗವಾಡ ಮತ್ತು ಅಥಣಿ ತಾಲೂಕಿನ ಜನರು ತತ್ತರಿಸಿ ಹೋಗಿದ್ದಾರೆ. ಅಥಣಿ ಪೂರ್ವ ಭಾಗದ ಜನರು ಕಳೇದ ಅನೇಕ ವರ್ಷಗಳಿಂದ ಬರ ಎದುರಿಸುತ್ತಿದ್ದಾರೆ. ಆದರೆ, ಈಗ ನದಿ ತೀರದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಸಮಸ್ಯೆ ರಾಜ್ಯದ ಮುಖ್ಯಮಂತ್ರಿಗಳು ಕುಮಾರಸ್ವಾಮಿ, ಜಲ ಸಂಪನ್ನಮೂಲ ಸಚಿವ ಡಿ.ಕೆ.ಶಿವಕುಮಾರ ಇವರ ಗಮನಕ್ಕೆ ತಂದು ಯಾವ ಕಾಲಕ್ಕೂ ನೀರು ಹರಿಸಬೇಕೆಂದು ತಾಲೂಕಿನ ರೈತ ಮುಖಂಡರೊಂದಿಗೆ ಪಟ್ಟು ಹಿಡಿದಿದ್ದರಿಂದ ಸಚಿವರು ಹಿಡಕಲ್ ಆನೆಕಟ್ಟೆಯಿಂದ 1 ಟಿ.ಎಂ.ಸಿ ನೀರು ಕೃಷ್ಣಾ ನದಿಗೆ ಹರಿಸಲು ಆದೇಶಿಸಿದ್ದಾರೆ.ಈ ಪ್ರಕ್ರೀಯೆ ಶನಿವಾರ ರಾತ್ರಿಯಿಂದ ಪ್ರಾರಂಭಗೊಳ್ಳಲಿದೆಯೆಂದು ಶ್ರೀಮಂತ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಉಳಿದು ಇಲ್ಲಿಯ ಜನರ ನೀರಿನ ದಾಹ ಮತ್ತು ತೊಂದರೆ ಸಕರ್ಾರಕ್ಕೆ ಗಮನಕ್ಕೆ ತಂದು ನೀರು ಹರಿಸಲು ಶಾಸಕ ಶ್ರೀಮಂತ ಪಾಟೀಲ ಪ್ರಯತ್ನಿಸುತ್ತಿದ್ದರು. ಮಹಾರಾಷ್ಟ್ರದ ಕೋಯ್ನಾ ಆನೆಕಟ್ಟೆಯಿಂದ ನೀರು ಹರಿಸಬೇಕೆಂದು ಕೇಳಿಕೊಂಡಿದ್ದರು. ರಾಜ್ಯ ಸಕರ್ಾರ ಪ್ರಯತ್ನಿಸಿದರೂ, ಮಹಾರಾಷ್ಟ್ರ ಸಕರ್ಾರ ನೀರು ಬಿಡಲು ಸಧ್ಯಕ್ಕೆ ನಿರಾಕರಿಸಿದೆ. ಇದರಿಂದ ಹಿಡಕಲ್ ಆನೆಕಟ್ಟೆಯಿಂದ ನೀರು ಹರಿಸಲು ಜಲ ಸಂಪನ್ನಮೂಲ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದು, ರಾಜ್ಯದ ಇಲಾಖೆ ಅಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿತ್ತುಯೆಂದು ಶ್ರೀಮಂತ ಪಾಟೀಲ ಹೇಳಿದರು.

ಶಾಸಕರೊಂದಿಗೆ ಅಥಣಿ ನ್ಯಾಯವಾದಿ ಬಿ.ಎ.ಚವ್ಹಾಣ, ರೈತ ಮುಖಂಡ ದಾದಾ ಪಾಟೀಲ, ಅಬ್ದುಲಬಾರಿ ಮುಲ್ಲಾ, ಸೇರಿದಂತೆ ಅನೇಕರು ರೈತ ನಿಯೋಗದಲ್ಲಿ ಪಾಲ್ಗೊಂಡಿದ್ದರು.