ಪ್ರತಿಭೆಗೆ ವೇದಿಕೆ ಸಿಕ್ಕಾಗ ಸಾಧನೆಯ ದಾರಿ ತೆರೆದುಕೊಳ್ಳುತ್ತದೆ: ಡಾ.ಗ್ರಾಮಪುರೋಹಿತ

ಲೋಕದರ್ಶನ ವರದಿ

ವಿಜಯಪುರ 05:ಈ ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಅಯೋಗ್ಯನಾಗಿ ಇರುವುದಿಲ್ಲ. ಎಲ್ಲರಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಅದಕ್ಕೆ ತಕ್ಕ ವೇದಿಕೆಯನ್ನು ಕಲ್ಪಸಿಕೊಟ್ಟಾಗ ಸಾಧನೆಯ ಹಾದಿ ತನ್ನಷ್ಟಕ್ಕೆ ತಾನೆ ತೆರೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾವು ಮಾಡುವ ಕಾರ್ಯವು ವಿಭಿನ್ನತೆಯಿಂದ ಕೂಡಿರಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯ ಡಾ.ವಿ.ಬಿ.ಗ್ರಮಪುರೋಹಿತ ಹೇಳಿದರು.

ನಗರದ ವಿದ್ಯಾವರ್ಧಕ ಸಂಘದ ಕಲಾ,ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಹಮ್ಮಿಕೊಂಡಿದ್ದ ದ್ರೋಣ 2019 ಎಂಬ ನಿರ್ವಹಣಾ ಉತ್ಸವವನ್ನುದ್ಘಾಟಿಸಿ ಮಾತನಾಡಿದ ಅವರು; ಇಂದು ಕಾಲ ಬದಲಾಗುತ್ತಿದೆ. ಬದಲಾಗುವು ಕಾಲಕ್ಕೆ ತಕ್ಕಂತೆ ಮಾನವ ಜೀವನವು ಸಹ ಬದಲಾವಣೆ ಹೊಂದುತ್ತಲೇ ಇದೆ. ಹೀಗಾಗಿ ಆಧುನಿಕ ಯುಗ ಬಯಸುವಂತ ಜೀವನ ನಿರ್ವಹಣಾ ತಂತ್ರಗಳನ್ನು ನಾವು ಕರಗತ ಮಾಡಿಕೊಳ್ಳಬೇಕು. ಅದಕ್ಕೇ ಇಂಥಹ ಕಾರ್ಯಕ್ರಮಗಳು ಹೆಚ್ಚು ಸಹಾಯಕವಾಗುತ್ತವೆ ಎನ್ನುವುದನ್ನು ವಿದ್ಯಾಥರ್ಿಗಳು ಮನಗಂಡು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಬದಲಾವಣೆಗೆ ಸದಾ ತೆರದುಕೊಳ್ಳುವ ಮನಸ್ಥಿತಿ ನಮ್ಮದಾಗಿರಬೇಕು. ಎಲ್ಲಿ ಧನಾತ್ಮಕ ವ್ಯಕ್ತಿತ್ವವಿರುತ್ತದೆಯೋ ಅಲ್ಲಿ ಅವರಿಗಾಗಿ ಉತ್ತಮ ಭವಿಷ್ಯ ಕಾದಿರುತ್ತದೆ ಎನ್ನುವ ಮಾತು ಸತ್ಯವಾದುದು. ಇದನ್ನು ವಿದ್ಯಾಥರ್ಿಗಳು ಅಥರ್ೈಸಿಕೊಂಡು ಸ್ವಯಂ ಪರಿವರ್ತನೆಯಾಗಬೇಕು. ನಮ್ಮ ನಡುವಳಿಕೆಯು ನಮ್ಮತನವನ್ನು ಎತ್ತಿ ತೋರಿಸುತ್ತದೆ ಎನ್ನುವುದು ವಾಸ್ತವ ಸತ್ಯ. ಅದನ್ನು ತಿಳಿದು ಕೊಳ್ಳುವುದು ಕೂಡ ಅತ್ಯಗತ್ಯವಗಿದೆ. ಇಂದು ಯಾವುದೇ ಕಂಪನಿಗಳು ನಮ್ಮ ಪಠ್ಯ ಪುಸ್ತಕದಲ್ಲಿ ಹುದುಗಿರುವ ವಿಚಾರಗಳನ್ನು ಕೇಳುವುದಿಲ್ಲ ಬದಲಿಗೆ ನಮ್ಮಲ್ಲಿರುವ ಪ್ರತಿಭೆ ಮತ್ತು ನಮಲ್ಲಿನ ಹೊಸ ಕೌಶಲ್ಯಗಳನ್ನು ಅಪೇಕ್ಷಿಸುತ್ತವೆ. ಆ ನಿಟ್ಟಿನಲ್ಲಿ ವಿದ್ಯಾಥರ್ಿಗಳಾದವರು ದಿಟ್ಟ ನಿಲುವಿನಿಂದ ಹಾಗೂ ಸದೃಢ ನಿಧರ್ಾರಗಳಿಂದ ನಿಮ್ಮ ಭವಿಷ್ಯವನ್ನು ನಿಮರ್ಾಣ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯರಾದ ಜಿ.ಹೆಚ್.ಮಣ್ಣೂರ; ಇಂದು ಆಯೋಜಿಸಿರುವ ದ್ರೋಣ 2019 ಎನ್ನುವುದು ಪ್ರತಿಭೆಗಳಿಗಾಗಿ ನೀಡಿರುವ ಸಣ್ಣ ವೇದಿಕೆ. ಇದರಲ್ಲಿ ಎದ್ದು ನಿಂತು ಮುನ್ನಡಿ ಇಟ್ಟರೆ ಭರ್ಜರಿ ಭವಿಷ್ಯವು ನಿಮಗಾಗಿ ಕಾದಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಜ್ಞಾನದ ಹಸಿವನ್ನು ಥಣಿಸಿಕೊಳ್ಳುವುದರ ಮೂಲಕ ಪಠ್ಯೇತರ ಚಟುವಟಿಕೆ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಸದೃಢ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗಿ ವಿದ್ಯಾಥರ್ಿಗಳಿ ತಿಳಿಸಿದರು.

ಉಪನ್ಯಾಸಕರಾದ ಎಂ.ಎಸ್.ದೊಡ್ಡಮನಿ, ಐ.ಬಿ.ಜಾಬಾ, ಎಸ್.ಬಿ.ಕುಂಬಾರ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಚೈತನ್ಯ ಮುತ್ತಗೀಕರ ಸ್ವಾಗತಿಸಿದರು, ಸುಷ್ಮಿತಾ ಹಿರೇಮಠ ಪ್ರಾಥರ್ಿಸಿದರು ಹಾಗೂ ಗೀತಾಂಜನಲಿ ಬೋಂದಡರ್ೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕ ಮಂಡಳಿ ಹಾಜರಿದ್ದರು.