ಲೋಕದರ್ಶನ ವರದಿ
ಗದಗ 12: ಪ್ರವಾದಿ ಹಜರತ್ ಮುಹ್ಮದ ಪೈಗಂಬರವರ ಹಾಗೂ ಹಜರತ್ ಟೀಪು ಸುಲ್ತಾನರವರ ಜಯಂತ್ಯೋತ್ಸವದ ಅಂಗವಾಗಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಾಗೂ ನೌಜವಾನ ಕಮೀಟಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದು ಯುವಕರ ಸಮಾಜ ಸೇವೆಯ ಕಾರ್ಯ ಶ್ಲಾಂಘನಿಯವಾಗಿದೆ. ಅಂಜುಮನ್ ಸಂಸ್ಥೆಯಿಂದ ಇಂತಹ ಜನಪರವಾದ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಮಾಜಿ ಸಚಿವರಾದ ಹಾಗೂ ಗದಗ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಹೆಚ್.ಕೆ.ಪಾಟೀಲರು ಮೆಚ್ಚುಗೆ ವ್ಯಕ್ತ ಪಡೆಸಿದರು.
ಅವರು ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಹಾಗೂ ನೌಜವಾನ ಅಂಜುಮನ್ ಕಮೀಟಿಗಳ ಸಂಯುಕ್ತ ಆಶ್ರಯದಲ್ಲಿ ಮತ್ತು ಲಾಯನ್ಸ್ ಕ್ಲಬ್ ಇವರ ಸಹಯೋಗದಲ್ಲಿ ಪ್ರವಾದಿ ಹಜರತ್ ಮುಹ್ಮದ ಪೈಗಂಬರವರ ಮತ್ತು ಹಜರತ್ ಟೀಪು ಸುಲ್ತಾನರವರ ಜಯಂತ್ಯೋತ್ಸವದ ನಿಮಿತ್ಯ ಲಾಯನ್ಸ್ ಕ್ಲಬ್ ಹಾಲನಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ್ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಯುವಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಆರ್.ಪಾಟೀಲರು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ, ಉಪಾಧ್ಯಕ್ಷರಾದ ಬಾಬಾಜಾನ ಬಳಗಾನೂರ, ಕಾರ್ಯದಶರ್ಿ ಇಮ್ತಿಯಾಜ.ಆರ್.ಮಾನ್ವಿ, ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾದ ಜಿ.ಎಂ.ದಂಡಿನ, ಈದ ಮೀಲಾದ ಕಮೀಟಿ ಅಧ್ಯಕ್ಷರಾದ ರಜಾಕ ಡೆಂಕೇದ, ಸಂಸ್ಥೆಯ ಖಜಾಂಚಿಯಾದ ಬಾಷಾಸಾಬ ಮಲ್ಲಸಮುದ್ರ, ಸದಸ್ಯರಾದ ಮಹ್ಮದ ಮುಲ್ಲಾ, ರಿಯಾಜಅಹ್ಮದ ಢಾಲಾಯತ, ಅನ್ವರ ಶಿರಹಟ್ಟಿ, ಇಲಿಯಾಸ್ ಖೈರಾತಿ, ಮುನ್ನಾ ಶೇಖ, ಉಮರಫಾರುಖ ಹುಬ್ಬಳ್ಳಿ, ಅಷ್ಫಾಕಅಲಿ ಹೊಸಳ್ಳಿ, ಶಫಿಅಹ್ಮದ ನವಲಗುಂದ, ರಫೀಕ ಜಮಾಲಖಾನವರ, ತೌಸೀಫ ಕಮಾನಗಾರ, ಮೆಹಬೂಬ ಮುಲ್ಲಾ, ಜೂನಸಾಬ ನಮಾಜಿ, ಮಕ್ತುಂ ಮುಲ್ಲಾ, ಶಾರುಖ ಹುಯಿಲಗೋಳ, ಮುಸ್ತಾಕ ಕೌತಾಳ, ಮುಜಫರ ಮುಲ್ಲಾ, ಶಹಬಾಜ ಮುಲ್ಲಾ, ಸೋಹಿಲ್ ಹಲರ್ಾಪೂರ, ನಿಜಾಮುದ್ದಿನ ಕಾತರಕಿ, ಮಲೀಕ ಹಂಪಾಪಟ್ಟಣ, ಸಾಧಿಕ ನರೇಗಲ್ಲ ಮುಂತಾದವರು ಉಪಸ್ಥಿತರಿದ್ದರು.