ಅಖಿಲ ಭಾರತ ಎ ಗ್ರೇಡ್ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳ ನಿಮಿತ್ಯ ನಡೆದ ಎರಡನೇ ದಿನದ ಕಾರ್ಯಕ್ರಮ
ರಾಯಬಾಗ 20 : ಪಾಲಕರು ತಮ್ಮ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಿಸಬೇಕೆಂದು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಆಯೋಜಿಸಿರುವ ಅಖಿಲ ಭಾರತ ಎ ಗ್ರೇಡ್ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳ ನಿಮಿತ್ಯ ನಡೆದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಮ್ಮ ಮಕ್ಕಳಿಗೆ ನಮ್ಮ ದೇಶಿ ಕ್ರಿಡೆಗಳಾದ ಕಬ್ಬಡ್ಡಿ, ಖೋಖೋ, ಕುಸ್ತಿದತಂಹ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ದೈಹಿಕ, ಮಾನಸಿಕವಾಗಿ ಸದೃಢರಾಗಿ, ಉತ್ತಮ ಆರೋಗಯುತ ಜೀವನ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಬಾವನ ಸೌಂದತ್ತಿ ಓಂಕಾರಾಶ್ರಮ ಶಿವಶಂಕರ ಸ್ವಾಮೀಜಿ, ಭೆಂಡವಾಡ ರೇವಣಸಿದ್ಧೇಶ್ವರ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ, ರಾಯಬಾಗದ ಆದಿಜಾಂಬವ ಗುರುಪೀಠದ ಅನಂತಾನಂದ ಸ್ವಾಮೀಜಿ ವಹಿಸಿದ್ದರು.
ಅಧ್ಯಕ್ಷತೆಯನ್ನು ಶಾಸಕ ಡಿ.ಎಮ್.ಐಹೊಳೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಡಚಿ ಹೋಬಳಿ ಕ.ಸಾ.ಪ.ಅಧ್ಯಕ್ಷ ಸಂತೋಷ ಸನದಿ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಸದಾನಂದ ಹಳಿಂಗಳಿ, ಅಣ್ಣಾಸಾಬ ಖೆಮಲಾಪೂರೆ, ಶ್ರೀಧರ ಕುಡಚೆ, ಗಂಗಾಧರ ಮೈಶಾಳೆ, ಸಂಗಣ್ಣದತ್ತವಾಡೆ, ಮಹಾದೇವ ಕೋಳಿ, ವೆಂಕಟೇಶ ಬನವಣೆ, ಮಲ್ಲು ಪೂಜೇರಿ, ಸುಭಾಷಕೋರೆ, ರಾಜುಜಾಧವ, ಸದಾಶಿವ ಜಗದಾಳೆ, ಬಸವರಾಜಅವನ್ನವರ, ಅನೀಲ ಹಂಜೆ, ರಂಜಾನ ಮಂಕಾನದಾರ ಸೇರಿ ಅನೇಕರು ಇದ್ದರು.