ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿಯಿದೆ: ಸಂಸದ ಹುಕ್ಕೇರಿ

ಮಾಂಜರಿ: ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಆಯ್ಕೆಯಾಗಿ ಸಮಾಜ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟ ಕ್ಷೇತ್ರದ ಜನರ ಋಣ ಅಪಾರವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರತಿ ಯೋಜನೆಗಳನ್ನು ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಒದಗಿಸಿರುವ ತೃಪ್ತಿ ನನಗಿದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಚೆಂದೂರ ಗ್ರಾಮದ ಚೆಂದ್ರೇಶ್ವರ ದೇವಸ್ಥಾನದಲ್ಲಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನಿಮರ್ಾಣ ಮಾಡಿರುವ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 40 ವರ್ಷಗಳಿಂದ ಚಿಕ್ಕೋಡಿ ಭಾಗದಲ್ಲಿ ಓರ್ವ ಗ್ರಾಮ ಪಂಚಾಯತಿ ಸದಸ್ಯರಾಗಿ, ಜಿಲ್ಲಾ ಪಂಚಾಯತಿ, ವಿಧಾನ ಪರಿಷತ್, ವಿಧಾನಸಭೆ ಹಾಗೂ ವಿಧಾನಸಭೆ ಸದಸ್ಯರಾಗಿ ಮತ್ತು ಎರಡು ಅವಧಿಯಲ್ಲಿ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜನ ಬೆಂಬಲ ಮತ್ತು ನನಗೆ ರಟ್ಟೆಯಲ್ಲಿ ಶಕ್ತಿ ಇರುವವರಿಗೂ ಜನ ಸೇವೆ ಮಾಡುತ್ತೇನೆ ಎಂದರು.

ಕೃಷ್ಣಾ ನದಿ ತಟದಲ್ಲಿ ಇರುವ ಚೆಂದೂರ ಗ್ರಾಮದಲ್ಲಿ ಹನುಮಾನ ದೇವಸ್ಥಾನ ಜೀಣರ್ೋದ್ಧಾರ ಮಾಡಿಕೊಡಬೇಕೆಂದು ಗ್ರಾಮಸ್ಥರ ಮನವಿ ಮೇರೆಗೆ ಶೀಘ್ರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ, ಪೇವರ, ವಿವಿಧ ಸಮುದಾಯಗಳಿಗೆ ಕಲ್ಯಾಣ ಮಂಟಪ, ಶೌಚಾಲಯ, ವಸತಿ ಯೋಜನೆಯಡಿ ಮನೆಗಳ ಮಂಜೂರು ಹೀಗೆ ಹತ್ತು ಹಲವಾರು ಜನಪರ ಕಾರ್ಯಗಳನ್ನು ಮಾಡಿ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸುವದರ ಜೊತೆಗೆ ಚೆಂದೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಾ ಪ್ರಯತ್ನ ಮಾಡಿದ್ದೇನೆ ಎಂದರು.

ಚಿಕ್ಕೋಡಿ-ಸದಲಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ ಮಾತನಾಡಿ, ಸಂಸದ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಅವರು ಚೆಂದೂರ ಗ್ರಾಮಕ್ಕೆ ಸುಮಾರು 1300 ಜನ ಬಡ ಫಲಾನುಭವಿಗಳಿಗೆ ಮನೆಗಳನ್ನು ನೀಡಿದ್ದಾರೆ. ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಏತ ನೀರಾವರಿ ಯೋಜನೆ ಕಲ್ಪಿಸಿದ್ದಾರೆ. ಚೆಂದೂರ ಗ್ರಾಮದಿಂದ ಚಿಕ್ಕೋಡಿ ಪಟ್ಟಣಕ್ಕೆ ಪ್ರತಿ ನಿತ್ಯ ನೂರಾರು ಮಕ್ಕಳು ಪಿಯು ಕಾಲೇಜಿಗೆ ಹೋಗುತ್ತಾರೆ. ಇದರಿಂದ ಸಂಸದರು ಹೆಚ್ಚಿನ ಕಾಳಜಿ ವಹಿಸಿ ಚೆಂದೂರ ಗ್ರಾಮದಲ್ಲಿ ಪಿಯು ಕಾಲೇಜು ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದರು.

ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಗ್ರಮಸ್ಥರು ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು.

ಘಟಪ್ರಭಾದ ರಾಮಣ್ಣಾ ಹುಕ್ಕೇರಿ, ಜಿಲ್ಲಾ ಪಂಚಾಯತಿ ಸದಸ್ಯೆ ಭಾರತಿ ಪವಾರ, ಗ್ರಾಮ ಪಂಚಾಯತಿ ಅಧ್ಯಕ್ಷ ವೈಶಾಲಿ ಪಾಟೀಲ, ತಾ.ಪಂ.ಸದಸ್ಯರಾದ ಪ್ರಭಾಕರ ಭೀಮನ್ನವರ, ಪಾಂಡುರಂಗ ಕೋಳಿ, ಅಣ್ಣಾಸಾಹೇಬ ಪವಾರ, ಶರತ ಪಾಟೀಲ, ಜೈಪಾಲ ಕುರಬೇಟ, ಕೆ.ಆರ್.ಮಗದುಮ್ಮ, ಗಜಾನನ ವಶದಾರ ಸೇರಿದಂತೆ ಮುಂತಾದವರು ಇದ್ದರು.