ಲೋಕದರ್ಶನ ವರದಿ
ಬೆಳಗಾವಿ, 7: ಮನುವಾದಿಗಳಿಂದ ಧರ್ಮ ಮತ್ತು ಸಾಹಿತ್ಯದ ರಕ್ಷಣೆಗಾಗಿ ಹರಿದ ಬಸವಾದಿ ಶರಣರ ರಕ್ತ ಇನ್ನು ಬಿಸಿಯಾಗಿದೆ. 12 ನೇ ಶತಮಾನದಲ್ಲಿ ಹರಿದ ಆ ರಕ್ತದ ಕಲೆಗಳು ಇಂದಿಗೂ ಮಾಸಿಲ್ಲ. ಧರ್ಮಕ್ಕೆ ಮಾನ್ಯತೆ ದೊರಕಿಸುವ ಮೂಲಕ ಆ ಅಗಣಿತ ಶರಣರ ತ್ಯಾಗ ಬಲಿದಾನಕ್ಕೆ ನ್ಯಾಯ ದೊರಕಿಸಬೇಕಾಗಿದೆ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿರುವ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಸಮಾಧಿ ಸ್ಥಳದಲ್ಲಿ ತಮ್ಮ ತಂದೆಯವರ ಸಂಸ್ಮರಣೆಯ ಪ್ರಯುಕ್ತ ಸಮಾಧಿಗೆ ಗೌರವ ಸಲ್ಲಿಸಿ ಹಾಗೂ ಬಸವ ಜನ್ಮ ದಿನ ಹಾಗೂ ಬಸವ ಜಯಂತಿಯ ಪ್ರಯುಕ್ತ ಬಸವ ಭೀಮ ಸೇನೆಯ ವತಿಯಿಂದ ಆಯೋಜಿಸಲಾಗಿರುವ ನಾಡಹಬ್ಬದ ಸಾಹಿತ್ಯ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದಲಿತರನ್ನು ದೇವರನ್ನಾಗಿ ರೂಪಿಸಿರುವ 12 ನೇ ಶತಮಾನದ ಬಸವ ಚಳುವಳಿಯು ಅಗಣಿತ ಶರಣರ ಬಲಿದಾದಿಂದ ಒಂದು ಅದ್ಭುತ ಧರ್ಮವಾಗಿ ರೂಪುಗೊಂಡಿದೆ. ಅದು ಕೇವಲ ಲಿಂಗಾಯತರ ಧರ್ಮ ಅಲ್ಲ. ಅದು ಹಡಪದರ ಧರ್ಮ. ಅದು ಮಾದಿಗರ ಧರ್ಮ. ಅದು ಮಡಿವಾಳರ ಧರ್ಮ. ಅದು ಸಮಗಾರರ ಧರ್ಮ. ಅದು ಹೂಗಾರರ ಧರ್ಮ. ಅದು ಕುಂಬಾರರ ಧರ್ಮ. ಅದು ಕಂಬಾರರ ಧರ್ಮ. ಅದು ಕಸಗೂಡಿಸುವ ಸತ್ಯಕ್ಕನ ಧರ್ಮ. ಅದು ಸಿಂಪಿಗರ ಧರ್ಮ. ಅದು ನಟವರ ಅಲ್ಲಮರ ಧರ್ಮ. ಅದು ಇಡಿ ಶೋಷಿತ ಸಮುದಾಯಗಳ ಮಾನವೀಯ ಧರ್ಮ. ಆ ಧರ್ಮಕ್ಕೆ ಮಾನ್ಯತೆ ಸಿಗಬೇಕೆಂಬುದನ್ನು ಇಡಿ ಬಸವ ಸಮಾಜದ ಜೊತೆಗೆ ಈ ದೇಶದ ಸಂವಿಧಾನ ಬದ್ದ ಆರೂ ಧಮರ್ಿಯರು ಬಯಸುತ್ತಿದ್ದಾರೆ ಎಂದರು.
ಧರ್ಮದ ಹೋರಾಟ ಹೊಟ್ಟೆ ಪಾಡಿನ ಹೋರಾಟ ಅಲ್ಲ. ಕನ್ನಡ ನೆಲದ ಧರ್ಮವು ಜಗತ್ತಿನ ಧರ್ಮಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂಬ ಬಯಕೆಯ ಹೋರಾಟ. ಹೋರಾಟಕ್ಕಾಗಿ ಎದ್ದು ಬಂದ ಕೆಲವರು ಅಧಿಕಾರದ ಆಸೆಗಾಗಿ ಹೋರಾಟದಿಂದ ಜಾರಿಕೊಂಡಿರಬಹುದು. ಆದರೆ, ಧರ್ಮದ ಹೋರಾಟದೊಂದಿಗೆ ಕೋಟಿ ಕೋಟಿ ಮನಸ್ಸುಗಳಿವೆ ಎಂದರು.
ಈ ಬಾರಿಯ ಲೋಕ ಸಭೆ ಚುನಾವಣೆಯಲ್ಲಿ ಮನುವಾದಿಗಳ ವಿರುದ್ಧ ಬಸವ ಭೀಮ ಸಂತತಿಯ ಶಕ್ತಿ ಪ್ರದರ್ಶನವಾಗಬೇಕು. ಆ ಶಕ್ತಿ ಪ್ರದರ್ಶನಕ್ಕೆ ಯುವಕರು ಸಿದ್ದರಾಗಬೇಕು ಎಂದು ಕರೆ ನೀಡಿದರು.