ಪಕ್ಷ ಬಲವರ್ಧನೆಯಲ್ಲಿ ಯುವಕರ ಪಾತ್ರ ಅನನ್ಯ -ಸಿದ್ದು ಕೊಣ್ಣೂರ

The role of youth in party strengthening is unique - Siddu Konnoor

ಪಕ್ಷ ಬಲವರ್ಧನೆಯಲ್ಲಿ ಯುವಕರ ಪಾತ್ರ ಅನನ್ಯ -ಸಿದ್ದು ಕೊಣ್ಣೂರ

ಚಿಮ್ಮಡ  13 : ಕಾಂಗ್ರೇಸ್  ಪಕ್ಷದ  ಬದವರ್ಧನೆಗೆ  ಯುವಕರ  ಪಾತ್ರ  ಅನನ್ಯವಾಗಿದ್ದು  ಪಕ್ಷ  ಸಂಘಟಣೆಗಾಗಿ ಯುವಕರಿಗೆ  ಎಲ್ಲ  ರೀತಿಯ  ಸಹಕಾರ  ನೀಡಲಾಗುವುದೆಂದು  ಕಾಂಗ್ರೆಸ್  ಮುಖಂಡ ಸಿದ್ದು  ಕೊಣ್ಣೂರ ಹೆಳಿದರು. ಚಿಮ್ಮಡ  ಗ್ರಾಮ  ಘಟಕದ  ಅಧ್ಯಕ್ಷ  ಉಮೇಶ  ಪೂಜಾರಿಯವರ ತೋಟದ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ  ಚರ್ಚಾಕೂಟ  ಹಾಗೂ ಯುವ  ಘಟಕದ  ಚುನಾಯಿತ  ಪ್ರತಿನಿಧಿಗಳ  ಸನ್ಮಾನ  ಕಾರ್ಯಕ್ರಮದ ಉದ್ಘಾಟಣೆ  ನೆರವೇರಿಸಿ  ಮಾತನಾಡಿದ  ನಾನು  ಚುನಾವಣೆಯಲ್ಲಿ  ಅಲ್ಪ  ಮತಗಳಿಂದ ಪರಾಭವಗೊಂಡರೂ ದಿನದ ಇಪ್ಪತ್ನಾಲ್ಕು  ಘಂಟೆ  ಸಾರ್ವಜನಿಕ ಸೇವೆಗೆ ಲಭ್ಯವಿದ್ದು ಸರಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಲು ನನ್ನಿಂದಾಗುವ ಎಲ್ಲ ಪ್ರಯತ್ನಗಳನ್ನು ನಾನು ಮಾಡುತಿದ್ದು ಪಕ್ಷದ ಬಲವರ್ಧನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು ಯುವ ಕಾಂಗ್ರೆಸ್ ಪಧಾಧಿಕಾರಿಗಳ ಸಹಕಾರದೊಂದಿಗೆ ಬರುವ  ಜಿಲ್ಲಾ ಪಂಚಾಯತಿ ಗ್ರಾಮ ಪಂಚಾಯತಿ ಯುನಾವಣೆಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿಸಲಾಗುವುದೆಂದರು. ನಗರ ಘಟಕದ ಅಧ್ಯಕ್ಷರಾದ ಮಲ್ಲಪ್ಪಾ ಸಿಂಗಾಡಿ ಮಾತನಾಡಿ ಪಕ್ಷದ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿರುವಾಗ ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷದವರಿದ್ದರೆ ಸಾರ್ವಜನಿಕ ನೇವೆಗೆ ತುಂಬಾ ಅನುಕೂಲಕರ, ಮುಂಬರುವ ಪ್ರತಿಯೊಂದು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾವೆಲ್ಲ ಶ್ರಮಿಸಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಗ್ರಾಮ ಘಟಕದ ಅಧ್ಯಕ್ಷ ಉಮೇಶ ಪೂಜಾರಿ, ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯನ್ನವರ, ತೇರದಾಳ ಮತಕ್ಷೇತ್ರದ ಯುವ ಅಧ್ಯಕ್ಷ ಪ್ರವೀಣ ಪೂಜಾರಿ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಸುನೀಲ ಹರಿಜನ ಹಣಮಂತ  ಪಾಟೀಲ ಶ್ರೀಶೈಲ ಮಠಪತಿ ಸೇರಿದಂತೆ ಹಲವು ಪ್ರಮಖರು ಮಾತನಾಡಿದರು. ಮಹಾಲಿಂಗ ಬಳಗಾರ, ಅಶೋಕ ಮೋಟಗಿ, ಅರುಣ ಗಾಣಿಗೇರ, ಮಲ್ಲಪ್ಪ ಬ್ಯಾಕೋಡ, ಮುದಕಪ್ಪಾ ಆಲಕನೂರ, ಹುಲೆಪ್ಪ ಬ್ಯಾಕೋಡ ವೇದಿಕೆಯಲ್ಲಿ ಉಪಸ್ಥಿತಿದ್ದರು.ಇದೇ ಸಂಧರ್ಬದಲ್ಲಿ ಯುವ ಘಟಕದ ಆಂತರಿಕ ಚುನಾವಣೆಯ ವಿವಿಧ ಹುದ್ದೆಗಳಿಗೆ ಚುನಾಯಿತರಾದ ತೇರದಾಳ ಮತಕ್ಷೇತ್ರದ ಪ್ರವೀಣ ಪೂಜಾರಿ, ಸೂರಜ ಅವಟಿ, ಹಣಮಂತ ಲಟ್ಟಿ, ಇಲಿಯಾಸ ಯಾದವಾಡ ಅಜಯ ಗಾಣಿಗೇರ, ಸೈಯದ ಶೇಖ, ಸುನೀಲ ಹರಿಜನರವರನ್ನು ಸತ್ಕರಿಸಿ ಗೌರವಿಸಲಾಯಿತು. ಕೊಣ್ಣೂರ ಯುವ ಘಟಕದ ಚುನಾಯಿತ ಪ್ರತಿನಿಧಿಗಳನ್ನು ಸನ್ಮಾನಿಸಿದರು.