ಲೋಕದರ್ಶನ ವರದಿ
ವಿಜಯಪುರ 13: ಯುವಜನರು ತಮ್ಮ ವ್ಯಕ್ತಿಗತ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡದೆ ಸಮಾಜ ಮುಖಿಯಾಗಿ ಕೆಲಸ ಮಾಡಿದ್ದಲ್ಲಿ ಸಮುದಾಯದ ಅಭಿವೃದ್ಧಿ ಆಗುವುದು ಖಂಡಿತ ಸಾಧ್ಯ. ಹಾಗಾಗಿ ಯುವಜನರು ಯುವ ಸಂಘಗಳ ಮುಖಾಂತರ ಸಮುದಾಯ ಅಭಿವೃದ್ಧಿಗೆ ಮುಂದಾಗಬೇಕೆಂದು ವಿಜಯಪುರ ತಹಸೀಲ್ದಾರ ಮೋಹನ ಕುಮಾರಿ ಯುವಜನರಿಗೆ ಕರೇ ನೀಡಿದರು. ಇವರು ಭಾರತ ಸರಕಾರದ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಎನ್.ಎಸ್.ಎಸ್. ಘಟಕ ಹಾಗೂ ರುಡ್ಸೆಟ್ ಸಂಸ್ಥೆ, ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ವಸತಿ ಸಹೀತ " ಜಿಲ್ಲಾ ಮಟ್ಟದ ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ" ಉದ್ಘಾಟಸಿ ಮಾತನಾಡಿದರು ಮುಂದುವರೆದು ಯುವಜನರ ಅಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಸಂಬಂಧ ಪಟ್ಟ ಇಲಾಖೆಗಳಿಂದ ಉತ್ತಮ ಅವಕಾಶಗಳಿದ್ದು ಯುವ ಜನರು ಇವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕ್ರುತ ಡಾ. ಜಾವೇದ ಎಮ್. ಜಮಾದಾರ ಯುವಜನರಲ್ಲಿ ನಾಯಕತ್ವ ಗುಣ ಬೇಳಸಲಿಕ್ಕಾಗಿ ಇಂತಹ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಯುವ ಸಂಘಗಳ ಸದಸ್ಯರುಗಳು ಇಂತಹ ತರಬೇತಿಯ ಉಪಯೋಗ ಪಡೆದುಕೊಂಡು ಯುವ ಸಂಘಗಳನ್ನು ಸಕ್ರೀಯವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಡಿ.ದಯಾಂದ, ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಸಂಘಗಳನ್ನು ರಚಿಸುವುದು ಎಷ್ಟು ಮುಖ್ಯ ಇದೆಯೋ ಅದನ್ನು ಸಕ್ರೀಯವಾಗಿ ಇರಿಸಿಕೊಂಡು ಹೋಗುವುದು ಅಷ್ಟೇ ಮುಖ್ಯ. ಹಾಗಾಗಿ ಈ ದಿಶೆಯಲ್ಲಿ ಯುವಜನರಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಪ್ರತಿ ವರ್ಷ ರಾಷ್ಟ್ರದ ಪ್ರತಿ ಜಿಲ್ಲೆಯಲ್ಲಿ ಇಂತಹ ತರಬೇತಿಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ರುಡ್ಸೆಟ್ ನಿದರ್ೇಶಕ ಆರ್.ಟಿ. ಉತ್ತರಕರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಎಸ್.ಜಿ. ಲೋಣಿ ಮತ್ತು ಎನ್.ಎಸ್.ಎಸ್. ಜಿಲ್ಲಾ ನೋಡಲ್ ಅಧಿಕಾರಿ ಹೆಚ್.ಎಮ್. ಸಜ್ಜಾದೆ ಕಾರ್ಯಕ್ರಮ ಕುರಿತು ಮಾತನಾಡಿದರು. ಭಾರತ ಸೇವಾದಳ ಜಿಲ್ಲಾ ಸಂಘಟಿಕ ನಾಗೇಶ ಡೊಣುರರವರು ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ರುಡ್ಸೆಟ್ ಉಪನ್ಯಾಸಕ ಮಲ್ಲಿಕಾಜರ್ುನ ಹತ್ತಿ ಸ್ವಾಗತಿಸಿದರೆ, ಕೊನೆಯಲ್ಲಿ ಬಸವರಾಜ ಪುಜಾರಿ ವಂದಿಸಿದರು. ಮುದ್ದೇಬಿಹಾಳ ರಾಷ್ಟ್ರೀಯ ಯುವ ಸ್ವಯಂ ಸೇವಕ ಕಾರ್ಯಕ್ರಮ ನಿರೂಪಿಸಿದರು.