ವಿಜಯಪುರ 07: ಸುಭದ್ರ ದೇಶ ನಿಮರ್ಾಣದಲ್ಲಿ ಕಟ್ಟಡ ಕಾಮರ್ಿಕರ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ಹೇಳಿದರು. ನಗರದ ನಿಮರ್ಿತಿ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಕನರ್ಾಟಕ ಕಟ್ಟಡ ಮತ್ತು ಎತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಬೆಂಗಳೂರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಬೆಂಗಳೂರು, ಕನರ್ಾಟಕ ರಾಜ್ಯ ನಿಮರ್ಾಣ ಕೇಂದ್ರ ಬೆಂಗಳೂರು ಹಾಗೂ ನಿಮರ್ಿತಿ ಕೇಂದ್ರ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಸಹಾಯಹಸ್ತ ಯೋಜನೆಯ ಶ್ರಮ ಸಾಮಥ್ರ್ಯ ಶೀಷರ್ಿಕೆಯಡಿಯಲ್ಲಿ ''ನೊಂದಾಯಿತ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರಿಗೆ'' '' ಟ್ರೈನಿಂಗ್-ಕಾಮ್-ಟೂಲ್ ಶಿಟ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ ಕಾಮರ್ಿಕರಿಗಾಗಿ ಸಕರ್ಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸದುಪಯೋಗ ಪಡೆಯುವುದು ಕಾಮರ್ಿಕರ ಹಕ್ಕಾಗಿದೆ. ಕಾಮರ್ಿಕ ಇಲಾಖೆಯಲ್ಲಿ ನೊಂದಾಯಿತ ಕಾಮರ್ಿಕರಿಗೆ ಮಾತ್ರ ಈ ಯೋಜನೆಗಳ ಸೌಲಭ್ಯ ದೊರೆಯುವುದರಿಂದ ಪ್ರತಿಯೋಬ್ಬ ಕಟ್ಟಡ ಕಾಮರ್ಿಕರು ಕಾಮರ್ಿಕ ಕಲ್ಯಾಣ ಇಲಾಖೆಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಕೇವಲ ಶಿಕ್ಷಣ ಪಡೆದರೆ ಸಾಲದು. ವೃತ್ತಿಯಲ್ಲಿ ನೈಪುಣ್ಯತೆ ಇರಬೇಕು. ಅಂತಹ ನೈಪುಣ್ಯತೆ, ವೃತ್ತಿ ಕೌಶಲ್ಯವನ್ನು ಈ ತರಬೇತಿಯಲ್ಲಿ ಪಡೆದುಕೊಳ್ಳಿ ಎಂದು ಹೇಳಿದರು.
ತರಬೇತಿ ಕೇಂದ್ರಗಳ ಮುಖ್ಯಸ್ಥ ಬಾಲಚಂದ್ರ ಜಾಭಶೆಟ್ಟಿ ರವರು ಮಾತನಾಡಿ, ಕಟ್ಟಡ ನೆಮರ್ಾಣ ಕಾರ್ಯದಲ್ಲಿ ತೊಡಗಿದ ಪ್ರತಿ ಕಾಮರ್ಿಕನು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ ಕಾಮರ್ಿಕರ ಜೀವನ ಮಟ್ಟ ಹಾಗೂ ವೃತ್ತಿ ಕೌಶಲ್ಯವನ್ನು ಪಡೆಯಲು ಈ ತರಬೇತಿ ಸಹಾಯವಾಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. ತರಬೇತಿಯಲ್ಲಿ ಜೀವನ ಕೌಶಲ್ಯ, ಆರೋಗ್ಯ ರಕ್ಷಣೆ ಬಗ್ಗೆ ತಿಳುವಳಿಕೆ ಅಲ್ಲದೆ ಸುರಕ್ಷಿತ ಸಾಧನ ಸಾಮಗ್ರಿಗಳನ್ನು ನೀಡಲಾಗುವುದು. ತರಬೇತಿ ಮುಗಿದ ನಂತರ ಪ್ರಮಾಣ ಪತ್ರ ಸಹ ನೀಡಲಾಗುತ್ತಿದೆ, ಇದರಿಂದ ನೀವು ಸ್ವಯಂ ಉದ್ಯೋಗಿಗಳಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಕಾಮರ್ಿಕ ಅಧಿಕಾರಿ ಅಶೋಕ್ ಬಾಳಗಟ್ಟಿ ಮಾತನಾಡಿ ತರಬೇತಿ ಹೋಂದಿದ ಕಾಮರ್ಿಕರು ಉದ್ಯೋಗದಾತರೊಂದಿಗೆ ನೇರವಾಗಿ ಸಂಪರ್ಕ ಹೋಂದಲು ವೆಬ್ ಪೋರ್ಟಲ್ ವಿನ್ಯಾಸಗೊಳಿಸಿ ಅದರಲ್ಲಿ ಕಾಮರ್ಿಕರ ಹೆಸರನ್ನು ನೊಂದಾಯಿಸಲಾಗುತ್ತದೆ ಎಂದು ಹೇಳಿದರು. ತರಬೇತಿ ಸಮಯದಲ್ಲಿ ಪ್ರತಿದಿನ 240 ರೂ. ಕೂಲಿಯನ್ನು ಪರಿಹಾರ ವೃತ್ತಿ ಸಂಬಂಧಿತ ಸುರಕ್ಷಿತ ಸಾಮಗ್ರಿಗಳು, ಟೂಲ್ ಶಿಟ್, ವೃತ್ತಿ ಕೌಶಲ್ಯ ಪ್ರಮಾಣ ಪತ್ರ ನೀಡಲಾಗುತ್ತದೆ. ಆದ್ದರಿಂದ ಪ್ರತಿಯೋಬ್ಬರು ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕಾಮರ್ಿಕರಿಗೆ ಟೂಲ್ಕಿಟ್ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ನಿಮರ್ಿತಿ ಕೇಂದ್ರದ ಜಿ,ಎನ್, ಮಲಜಿ, ಕುಶಲಕಮರ್ಿ ಕಾಮರ್ಿಕರು, ವಿವಿಧ ಅಭಿಯಂತರರು, ಉಪಸ್ಥಿತರಿದ್ದರು.