ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ,ಜೊತೆಗೆ ಪಾಲಕರ ಪಾತ್ರ ಬಹುಮುಖ್ಯ.ಪತ್ರಕರ್ತ ಜಯರಾಮ್ ಶೆಟ್ಟರ
ಮಹಾಲಿಂಗಪುರ 30: ನಗರದ ಶ್ರೀ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ 33ನೇಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಉದ್ಘಾಟಕರಾಗಿ "ಪತ್ರಕರ್ತ ಜಯರಾಮ ಶೆಟ್ಟರ್" ಮಾತನಾಡಿ,ವಿದ್ಯಾರ್ಥಿಗಳು ಸಾಧಕರ ಇತಿಹಾಸ ಓದಬೇಕು.ಸಾಧನೆ ಯಾವುದೇ ರಂಗದಲ್ಲಿ ಇರಲಿ ಸಮಾಜ ಮೆಚ್ಚುವಂತೆ ಮಾಡಬೇಕು.ಸಮಾಜದ ವಿವಿಧ ಸೇವೆಯಲ್ಲಿ ತೊಡಗಿಕೊಳ್ಳಬೇಕು.ಆದರೆ ಇದಕ್ಕೆ ಶಿಕ್ಷಕರು ಮತ್ತು ಪಾಲಕರು ಕೂಡಾ ಗಮನ ಹರಿಸಿದರೆ ಮಕ್ಕಳು ಸಾಧಕರ ಪಟ್ಟಿಯಲ್ಲಿ ಸೇರುತ್ತಾರೆ ಎಂದರು.
"ಪತ್ರಕರ್ತ ಲಕ್ಷ್ಮಣ ಕಿಶೋರ" ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.ಆಟದ ಜೊತೆಗೆ ಪಾಠವಿರಲಿ. ಪ್ರಪಂಚದಲ್ಲಿ ನಮಗೆ ಮುಖ್ಯವಾದುದು ಶಿಕ್ಷಣ,ಇದು ಬದುಕಿನ ದಾರಿ ತೋರಿಸುತ್ತದೆ.ಉನ್ನತ ಶಿಕ್ಷಣ ಪಡೆದು ಈ ದೇಶದ ಉನ್ನತ ನಾಗರಿಕರಾಗಿ ಎಂದು ಹೇಳಿದರು.
"ಪಂಡಿತ ಪೂಜಾರ ಮಾತನಾಡಿ",ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಇದನ್ನು ಕುಡಿದವರು ಘರ್ಜಿಸಲೇಬೇಕು ವಿದ್ಯಾರ್ಥಿಗಳು ಒಳ್ಳೆಯ ರೀತಿ ಶಿಕ್ಷಣ ಪಡೆದು ಸಾಧಕರಾಗಬೇಕು.ಜೊತೆಗೆ ಹಿಂದೆ ಗುರು ಮುಂದೆ ಗುರಿ ಇರಬೇಕು ಎಂದರು.ಇದೇ ವೇದಿಕೆಯಲ್ಲಿ ನಗರದ ವಿವಿಧ ರಂಗದಲ್ಲಿ ಸಾಧನೆ ಗೈದ ಮಹನಿಯರಿಗೆ ವಿಶೇಷ ಸನ್ಮಾನ ಮಾಡಿ ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಶೇಖರ ಅಂಗಡಿ,ಕಾರ್ಯದರ್ಶಿ ಶ್ರೀಶೈಲ ಹಳ್ಳಿ, ಅಥಿತಿಗಳಾದ,ಕಾನಿಪ ಸಂಘದ ಅಧ್ಯಕ್ಷ ಮಹೇಶ ಮಣ್ಣಯ್ಯನವರಮಠ,ಪತ್ರಕರ್ತರಾದ,ಮಹೇಶ ಆರಿ,ಮೀರಾ ತಟಗಾರ,ಕಾನಿಪ ಕಾರ್ಯದರ್ಶಿ ಹನಮಂತ ನಾವಿ,ಸಹಾಯಕ ಅಭಿಯಂತರಾದ ರಾಜೇಶ ಬಾಗೋಜಿ,ಸಿ ಆರ್ ಪಿ ಅಪ್ಪು ಮಂಚದ, ಕೋನ್ ಬನೆಗಾ ಕರೊಡ್ ಪತಿ ವಿಜೇತ್ ರಂಜಾನ್ ಪೀರಜಾದೇ,ಮಹಾಲಿಂಗ ಶಿವಣಗಿ,ಮಹಾದೇವ ಸಾವಂತ,ನಾಗಲಿಂಗ ಬಡಿಗೇರ,ಮಹಾಲಿಂಗ ನಾಯಕ, ಪೂರ್ಣನಂದ ಹುಲ್ಲೂರ,ವಕೀಲರಾದ ಅರ್ಜುನ ಪವಾರ,ಮಹಾಲಿಂಗ ಲಾತುರ,ಅನೀಲ ಕವಾಸಿ,ಬನಶಂಕರಿ ಶಾಲೆಯ ಸಿಬ್ಬಂದಿಗಳಾದ ಶಿವಲೀಲಾ ಹಿರೇಮಠ,ಅನ್ನಪೂರ್ಣಾ ಚಿಚಖಂಡಿ, ಜಯಶ್ರೀ ಸೋನೋನೆ,ಮಂಜುಳಾ ನಾಶಿ,ಜಯಶ್ರೀ ಹುಬ್ಬಳ್ಳಿ,ವಿನಯಶ್ರೀ ಕುಲಕರ್ಣಿ,ಸುಧಾ ಮೂಡಲಗಿ,ಜ್ಯೋತಿ ಕಾರೆ,ಸೇರಿದಂತೆ ಮುದ್ದು ಮಕ್ಕಳು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಸಿದ್ದರು.ಮುಖ್ಯ ಶಿಕ್ಷಕಿ ಗೀತಾ ಪಾಟೀಲ ಸ್ವಾಗತಿಸಿದರು.ಶಿಕ್ಷಕ ಹಣಮಂತ ಪಾಟೀಲ ನಿರೂಪಿಸಿ ವಂದಿಸಿದರು.