ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯ: ಉಮೇಶ್ವರ ಮರಗಾಲ

The role of parents is important in the educational development of children: Umeshwara Maragala

ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯ:  ಉಮೇಶ್ವರ ಮರಗಾಲ 

ಯರಗಟ್ಟಿ 05: ವಿದ್ಯಾರ್ಥಿಗಳ ಸವಾಂರ್ಗೀಣ ಬೆಳವಣಿಗೆಯಲ್ಲಿ ಶಾಲೆಯ ಶಿಕ್ಷಕರಷ್ಟೇ ಜವಾಬ್ದಾರಿಯನ್ನು ಪಾಲಕರೂ ವಹಿಸಬೇಕು ಎಂದು  ಕುನ್ನಾಳ ಸ.ಹಿ.ಪ್ರಾ. ಶಾಲೆಯ ಶಿಕ್ಷಕ ಉಮೇಶ್ವರ ಮರಗಾಲ ಸಲಹೆ ನೀಡಿದರು. 

ಅವರು ಸಮೀಪದ ಮುಗಳಿಹಾಳ ಗ್ರಾಮದ ಡಿ. ಎನ್‌. ದಳವಾಯಿ ಹಿರಿಯ ಪ್ರಾಥಮಿಕ ಶಾಲೆಯ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು ಮಗುವಿನ ಅರಿವು,  ಭಾಷೆ, ಶಾರೀರಿಕ ಬೆಳವಣಿಗೆ, ಬೌದ್ಧಿಕ ಬೆಳವಣಿಗೆ, ಸಾಮಾಜಿಕ ಅಭಿವೃದ್ಧಿ ತತ್ವಗಳನ್ನು ಅಳವಡಿಸಿಕೊಂಡು ಮಗುವಿನಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. 

  ಬದಲಾದ ಸಮಾಜದಲ್ಲಿ ಮಕ್ಕಳು ಅಂತರ್ಮುಖಿಗಳಾಗಿದ್ದಾರೆ. ಮೊಬೈಲ್  ವ್ಯಸನಿಯಾಗುತ್ತಿದ್ದಾರೆ. ಅವರನ್ನು ಆಸಕ್ತಿ ಮೂಡಿಸುವ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲಗೊಳಿಸಬೇಕಿದೆ ಎಂದರು. 

ನವೋದಯ ಮತ್ತು ಮೊರಾರ್ಜಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸದಾನಂದ ಮಹಾಸ್ವಾಮಿಗಳು, ಸೋಮಾನಂದ ಭಾರತಿ ಮಹಾಸ್ವಾಮಿಗಳು ಇವರು ಸಾನಿಧ್ಯ ವಹಿಸಿದ್ದರು, ಎಮ್‌. ಎಲ್‌. ಇಟ್ನಾಳ ಅಧ್ಯಕ್ಷತೆಯಿದ್ದ ಈ ಕಾರ್ಯಕ್ರಮದಲ್ಲಿ ಎಸ್‌. ಆರ್ ಅಕ್ಕಿಸಾಗರ, ಲಕ್ಷ್ಮಣ ದಳವಾಯಿ, ಕೃಷ್ಣ ಅರಭಾವಿ, ಕೃಷ್ಣ ಬಡಿಗೇರ, ವಿಠಲ ದಳವಾಯಿ, ಸಿದ್ದು ದಳವಾಯಿ ಸಂಜು ಹರಿಜನ, ಎಫ್‌. ಎನ್ ಕುರಬೇಟ, ವಿ. ಜಿ. ಪಾಟೀಲ, ವಿ ಆರ್ ಅಣ್ಣಿಗೇರಿ ಮತ್ತಿತರರು ಇದ್ದರು. ಶಿಕ್ಷಕಿ ಗಂಗಾ ನಿರೂಪಿಸಿದರು. ಪ್ರಭ ಮಡಿವಾಳ ಸ್ವಾಗತಿಸಿದರು. ಪಲ್ಲವಿ ನಾಯ್ಕ್‌ ವಂದಿಸಿದರು.