ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿಗಿಂತಲೂ ಸಂಸ್ಕಾರ ನೀಡುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು

ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿಗಿಂತಲೂ ಸಂಸ್ಕಾರ ನೀಡುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು The role of parents and teachers in nurturing children is more important than the responsibility of

ಕೊಲ್ಹಾರ 10:  ಪಟ್ಟಣದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ 121 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಶ್ರೀಗಳು ಮಾತನಾಡಿದರು. ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ಜೋತೆಗೆ ಸುಸಂಸ್ಕೃತಿಯನ್ನು  ಕಲಿಸುವುದಸ್ಟೆ ಅಲ್ಲದೆ ಈ ಶಾಲೆಯಲ್ಲಿ ಶಿಕ್ಷಣ ಪಡೆದು ಎಷ್ಟೊ ಮಕ್ಕಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಹಾಗೂ ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ.

ಖಾಸಗಿ ಶಾಲೆಗಳಗಿಂತ ಉತ್ಕೃಷ್ಟವಾದ ಶಿಕ್ಷಣ ಇಲ್ಲಿ ದೊರೆಯುತ್ತದೆ.  ಇಲ್ಲಿನ  ಮುಖ್ಯ ಗುರುಗಳು ಹಾಗೂ ಶಿಕ್ಷಕರ ಶ್ರಮ, ನಿಸ್ವಾರ್ಥ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇಂದಿನ ವಿಶೇಷ ಸಾಧನೆ ಮಾಡಿದ ಶಾಲಾ ಬಾಲಕಿಯರಿಗೆ ಸನ್ಮಾನ ಮಾಡಬೇಕಾದರೂ ಸ್ವಾಮೀಜಿಗಳು ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಏಕೆಂದರೆ ಹೆಣ್ಣು ಮಕ್ಕಳನ್ನು  ಅಲ್ಲಿ ಹಿಡಿದಾ ಇಲ್ಲಿ ಹಿಡಿದಾ ಎಂದು ಪೋಕ್ಸೋ ಕೇಸ್ ಗಳನ್ನು ಹಾಕುತ್ತಿರುವುದರ ಬಗ್ಗೆ ಸ್ವಾಮೀಜಿ  ಕಳವಳ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿ ಕೊಲ್ಹಾರ ಪಟ್ಟಣದ ಕೆಜಿಎಸ್ ಶಾಲೆ ಅಖಂಡ ಬಸವನ ಬಾಗೇವಾಡಿ ನಿಡಗುಂದಿ ತಾಲೂಕಿನಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಯಾಗಿದ್ದು  ಸದ್ಯ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತನೆಯಾಗಿದೆ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲಿದೆ ಎಂದರು ಈ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಶಾಲಾ ಮಕ್ಕಳಿಂದ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಗಿಡ್ಡಪ್ಪಗೋಳ, ಅತಿಥಿಗಳಾಗಿ ರಾಜಮಾ ನದಾಫ್,ಅಶೋಕ ಗಿಡ್ಡಪ್ಪಗೋಳ, ಲಕ್ಷ್ಮೀ ಜಿಡ್ಡಿಬಾಗಿಲ, ಕೆ ಯು ಗಿಡ್ಡಪ್ಪಗೋಳ, ಸುರೇಶ ಬಿರಾದಾರ, ಜಿ ಜಿ ಕುಲಕರ್ಣಿ, ಎಸ್‌ಎಸ್ ಜಂಗಮಶೆಟ್ಟಿ, ಎಸ್ ಎನ್ ತಡಲಗಿ, ಆನಂದ ಪವಾರ, ಪುಂಡಲೀಕ ಬೆಳ್ಳುಬ್ಬಿ, ಆಯ್ ಎಂ ಬಾಟಿ, ಮಾರುತಿ ಪವಾರ, ಲಕ್ಷ್ಮಣ ಕುಂಬಾರ, ಜ್ಯೋತಿ ಕೊಟ್ಟಗಿ, ಮಂಜುನಾಥ ತುಂಬರಮಟ್ಟಿ,ಕಾಶೀಬಾಯಿ ಬಾಲಗೊಂಡ,ಮಂಜುನಾಥ ಲಿಂಬಿಕಾಯಿ ಹೊನ್ನಪ್ಪ ಹಡಪದ, ಕಲ್ಲು ಬಾಲಗೊಂಡ,ನಾಮದೇವ ಚೌವ್ಹಾಣ್, ಶಕುಂತಲಾ ಚೌಡಪ್ಪನವರ  ಇತರರು ಇದ್ದರು.